PAKಗೆ ಅಭಿ-ಕಿಶನ್ ಭಯ – ಭಾರತಕ್ಕೆ ಸ್ಪಿನ್ ಅಸ್ತ್ರ ಸವಾಲಾಗುತ್ತಾ?
ವೈರಿಗಳ ಬೇಟೆಗೆ ಹೇಗಿದೆ ಟೀಂ?

PAKಗೆ ಅಭಿ-ಕಿಶನ್ ಭಯ – ಭಾರತಕ್ಕೆ ಸ್ಪಿನ್ ಅಸ್ತ್ರ ಸವಾಲಾಗುತ್ತಾ?ವೈರಿಗಳ ಬೇಟೆಗೆ ಹೇಗಿದೆ ಟೀಂ?

ಒಂದೇ ದಿನ.. ಇಂಡೋ-ಪಾಕ್ ಫೈಟ್​ಗೆ ಇನ್ನೊಂದೇ ದಿನ ಬಾಕಿ. ಅಮೆರಿಕ, ನಮೀಬಿಯಾ ವಿರುದ್ಧ ಗೆದ್ದಿರೋ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವಿಗಾಗಿ ಲಂಕೆಯಲ್ಲಿ ಭರ್ಜರಿ ತಾಲೀಮು ಮಾಡ್ತಿದೆ. ಅತ್ತ ಟೀಂ ಇಂಡಿಯಾ ಎದುರು ಸೋತು ಸೋತು ಸುಸ್ತಾಗಿರೋ ಪಾಕಿಸ್ತಾನ ಈ ಸಲನಾದ್ರೂ ಗೆಲ್ಲೋಣ ಅಂತಾ ಗೇಮ್ ಪ್ಲ್ಯಾನ್ ಮಾಡ್ತಿದೆ.

ಇದನ್ನೂ ಓದಿ : AUSಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – ಕೂಸಿನೆದುರು ಗೆದ್ದೇ ಇಲ್ಲ ಕಾಂಗರೂ

ಭಾರತ ಮತ್ತು ಪಾಕಿಸ್ತಾನ ನಡುವಿನ ರಣರೋಚಕ ಪಂದ್ಯಕ್ಕಾಗಿ ಜಗತ್ತೇ ಕಾಯ್ತಿದೆ. ಸೂಪರ್ ಸಂಡೇಯಲ್ಲಿ ಬದ್ಧವೈರಿಗಳು ಕಾದಾಟ ನಡೆಸಲಿವೆ. ಆಲ್ರೆಡಿ ಏಷ್ಯಾಕಪ್​ನಲ್ಲಿ ಮೂರಕ್ಕೆ ಮೂರೂ ಸಲವೂ ಪಾಕ್​ಗೆ ಪಂಚ್ ಕೊಟ್ಟಿರೋ ಭಾರತ ಈ ಸಲವೂ ಮಣ್ಣು ಮುಕ್ಕಿಸೋಕೆ ಕಾಯ್ತಿದ್ದಾರೆ. ಕದನಕಣದಲ್ಲಿ ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಭಾರತದ ಪರ ಅಭಿಷೇಕ್ ಶರ್ಮಾ ಆಡ್ತಾರಾ ಇಲ್ವಾ ಅನ್ನೋ ಕನ್ಫ್ಯೂಷನ್ ಇದೆ. ಯಾಕಂದ್ರೆ ನಮೀಬಿಯಾ ಪಂದ್ಯಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ನೀಡಿದ್ದ ಹೇಳಿಕೆ ಗೊಂದಲ ಸೃಷ್ಟಿಸಿದೆ. ಅಭಿಷೇಕ್ 1 ಅಥವಾ 2 ಪಂದ್ಯ ಮಿಸ್ ಮಾಡಿಕೊಳ್ಬೋದು ಅಂದಿದ್ರು. ಹೀಗಾಗಿ ಪಾಕ್ ವಿರುದ್ಧವೂ ಆಡಲ್ವಾ ಅನ್ನೋ ಕನ್ಫ್ಯೂಷನ್ ಇದೆ. ಬಟ್ ವರುಣ್ ಚಕ್ರವರ್ತಿ ಮತ್ತು ತಿಲಕ್ ವರ್ಮಾ ಅಭಿಷೇಕ್ ಬಗ್ಗೆ ಪಾಸಿಟಿವ್ ಒಪೀನಿಯನ್ ಕೊಟ್ಟಿದ್ದಾರೆ. ಅಂದ್ರೆ ಸ್ಫೋಟಕ ಓಪನರ್ ರಿಕವರ್ ಆಗಿದ್ದಾರೆ ಎಂದಿದ್ದಾರೆ. ಅಲ್ದೇ ಈ ಪಂದ್ಯಕ್ಕೆ ಭಾರತದ ಪರ ಹೆಚ್ಚುವರಿ ಸ್ಪಿನ್ನರ್ ಆಡಿಸೋ ಚಾನ್ಸಸ್ ಇದೆ.

ಪಾಕ್ ವಿರುದ್ಧ ಭಾರತದ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ತಿಲಕ್ ವರ್ಮಾ

ಸೂರ್ಯಕುಮಾರ್ ಯಾದವ್

ಹಾರ್ದಿಕ್ ಪಾಂಡ್ಯ

ಶಿವಂ ದುಬೆ

ಅಕ್ಷರ್ ಪಟೇಲ್

ಕುಲದೀಪ್ ಯಾದವ್

ವರುಣ್ ಚಕ್ರವರ್ತಿ

ಜಸ್ಪ್ರೀತ್ ಬುಮ್ರಾ

ಅರ್ಷದೀಪ್ ಸಿಂಗ್

ಇಲ್ಲಿ ಭಾರತದ ಪರ ಸಂಜು ಮತ್ತು ರಿಂಕು ಸಿಂಗ್ ಹೊರಬೀಳೋ ಚಾನ್ಸಸ್ ಇದೆ. ಯಾಕಂದ್ರೆ ಪಾಕಿಸ್ತಾನದಲ್ಲಿ ಸ್ಪಿನ್ ವಿಭಾಗ ಚೆನ್ನಾಗಿದೆ. ಌಂಡ್ ಪಾಕ್ ಸ್ಪಿನ್ನರ್ಸ್ ಭಾರತಕ್ಕೆ ಥ್ರೆಟ್ ಆಗ್ಬೋದು ಅಂತಾ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಅಜಂತಾ ಮೆಂಡಿಸ್ ಕೂಡ ಹೇಳಿದ್ದಾರೆ. ಕೊಲೊಂಬೋದ ಪಿಚ್ ಸ್ಪಿನ್ ಫ್ರೆಂಡ್ಲಿಯಾಗಿದೆ. ಅಲ್ದೇ ಭಾರತದ ವಿರುದ್ಧ ಪಾಕಿಸ್ತಾನ ಹೊಂದಿರುವ ಅತಿದೊಡ್ಡ ಅಸ್ತ್ರವೆಂದರೆ ಸ್ಪಿನ್ ಜೋಡಿ. ಅಬ್ರಾರ್ ಅಹ್ಮದ್ ಮತ್ತು ಸೈಮ್ ಅಯೂಬ್ ಜೊತೆಗೆ ಉಸ್ಮಾನ್ ತಾರಿಕ್ ಭಾರತಕ್ಕೆ ಭಯ ಹುಟ್ಟಿಸ್ಬೋದು ಎಂದಿದ್ದಾರೆ. ಈ ಮೂವರೂ ಕೂಡ ಸ್ಪಿನ್ ಬೌಲಿಂಗ್​ನಲ್ಲಿ ಹೆಚ್ಚಿನ ಇಂಪ್ಯಾಕ್ಟ್ ಮಾಡ್ತಾರೆ. ಇದು ಭಾರತೀಯ ಬ್ಯಾಟರ್​ಗಳಿಗೆ ಮಾರಕವಾಗ್ಬೋದು ಎಂದಿದ್ದಾರೆ. ಅದೂ ಅಲ್ದೇ ಭಾರತ ಸ್ಪಿನ್ ಮುಂದೆ ಸ್ವಲ್ಪ ಡಲ್ ಆದಂತಿದೆ. ಕಳೆದ ನಮೀಬಿಯಾ ವಿರುದ್ಧದ ಪಂದ್ಯದಲ್ಲೂ ಗೊತ್ತಾಗಿತ್ತು. ಹೀಗಾಗಿ ಭಾರತ ಅಲರ್ಟ್ ಆಗಿ ಆಡಲೇಬೇಕಿದೆ. ಇನ್ನು ಇಂಡೋಪಾಕ್ ಪಂದ್ಯಕ್ಕೆ ಮಳೆ ಭೀತಿಯೂ ಇದೆ. ಭಾನುವಾರ ಸಂಜೆ 5 ಗಂಟೆ ವೇಳೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದ್ರೆ ಎರಡೂ ತಂಡಗಳಿಗೂ ಒಂದೊಂದು ಅಂಕ ಕೊಡ್ತಾರೆ. ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತವೇ ನಂಬರ್ 1 ಪ್ಲೇಸ್​ನಲ್ಲಿರುತ್ತೆ. ಪಾಯಿಂಟ್ಸ್ ಸೇಮ್ ಇದ್ರೂ ನೆಟ್​ರನ್​ರೇಟ್​ನಲ್ಲಿ ಭಾರತ ಮುಂದಿದೆ.

Shantha Kumari

Leave a Reply

Your email address will not be published. Required fields are marked *