ಡೇಂಜರ್ ಝೋನ್ ನಲ್ಲಿ ಅಭಿಷೇಕ್ – SA ವಿರುದ್ಧ ಹೇಗಿದೆ ಪ್ಲೇಯಿಂಗ್ 11?

ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ದಾಖಲೆಯ ಜರ್ನಿಯೊಂದಿಗೆ ಮುನ್ನುಗ್ತಿರೋ ಟೀಂ ಇಂಡಿಯಾ ಒಂದ್ಕಡೆ.. ಏಡಂ ಮಾರ್ಕ್ರಮ್ ನಾಯಕತ್ವದಲ್ಲಿ ಡೇಂಜರಸ್ ಆಗಿರೋ ಸೌತ್ ಆಫ್ರಿಕಾ ಇನ್ನೊಂದ್ಕಡೆ. ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ವಾರ್ಮ್ ಅಪ್ ಮ್ಯಾಚಲ್ಲಿ ಭಾರತದ ಎದುರು ಹರಿಣಪಡೆ ಪಲ್ಟಿ ಹೊಡೆದಿದೆ. ಆದ್ರೆ ಈಗ ಸೂಪರ್ 8ನಲ್ಲಿ ಕೇರ್ಫುಲ್ ಆಗಿ ಆಡ್ಬೇಕಿದೆ. ಭಾನುವಾರದ ಮ್ಯಾಚಲ್ಲಿ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿದ್ರೂ ಪ್ಲೇಯಿಂಗ್ 11 ನಲ್ಲಿ ಒಂದಷ್ಟು ಕನ್ಫ್ಯೂಷನ್ಸ್ ಇದೆ. ಅಭಿಷೇಕ್ ಶರ್ಮಾ ಡೇಂಜರ್ ಝೋನ್ನಲ್ಲಿದ್ದಾರೆ.
ಇದನ್ನೂ ಓದಿ :
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಮುಖಾಮುಖಿ ಆಗ್ತಾರೆ. ಮಸ್ಟ್ ಌಂಡ್ ಶುಡ್ ಈ ಪಂದ್ಯವನ್ನ ಗೆಲ್ಲಲೇಬೇಕು ಅಂತಾ ಉಭಯ ತಂಡಗಳ ಆಟಗಾರರೂ ಪಣ ತೊಟ್ಟಿದ್ದಾರೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡ್ತಾರಾ ಅನ್ನೋ ಪ್ರಶ್ನೆ ಇದೆ. ಅದ್ರಲ್ಲೂ ಅಭಿಷೇಕ್ ಮೇಲೆಯೇ ಎಲ್ಲರ ಕಣ್ಣಿದೆ.
ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಆಡ್ತಾರೆ ಅಭಿಷೇಕ್!
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಹಾಗೇ ಆರಂಭ ಆದ ಮೇಲೂ ಸಿಕ್ಕಾಪಟ್ಟೆ ಚರ್ಚೆಯಾಗ್ತಿರೋ ಹೆಸ್ರು ಅಭಿಷೇಕ್ ಶರ್ಮಾ. ಟೂರ್ನಿ ಆರಂಬಕ್ಕೂ ಮುನ್ನ ಹೈಯೆಸ್ಟ್ ರನ್ಸ್ ಹೊಡೀಬೋದು ಅಂತಾ ಮಾತಾಡ್ತಿದ್ರು. ಬಟ್ ಈಗ ಮೂರಕ್ಕೆ ಮುರೂ ಪಂದ್ಯಗಳಲ್ಲೂ ಡಕ್ ಔಟ್ ಆಗಿರೋದ್ರುಂದ ಪವರ್ ಹಿಟ್ಟರ್ ಬ್ಯಾಟರ್ ಗೆ ಏನಾಯ್ತು ಅಂತಾ ಚರ್ಚೆ ಮಾಡ್ತಿದ್ದಾರೆ. ಈಗ ಸೂಪರ್ 8 ಪಂದ್ಯಗಳಲ್ಲಿ ಅವಕಾಶ ಕೊಡ್ತಾರಾ ಅಂದ್ರೆ ಖಂಡಿತವಾಗಿಯೂ ಕೊಡ್ತಾರೆ. ಯಾಕಂದ್ರೆ ತಂಡದಲ್ಲಿರುವ ಮತ್ತೊಬ್ಬ ಓಪನರ್ ಸಂಜು ಸ್ಯಾಮ್ಸನ್ ಕೂಡ ಫಾರ್ಮ್ನಲ್ಲಿಲ್ಲ. ಹೀಗಾಗಿ ಅಭಿಷೇಕ್ಗೆ ಮತ್ತೊಂದು ಚಾನ್ಸ್ ನೀಡುವ ಸಾಧ್ಯತೆ ಇದೆ. ಬಟ್ ಅಭಿಷೇಕ್ ಗೆ ಇದು ಲಾಸ್ಟ್ ಚಾನ್ಸ್ ಆಗ್ಬೋದು. ಇಲ್ಲೂ ರನ್ಸ್ ಬಂದಿಲ್ಲ ಅಂದ್ರೆ ಖಂಡಿತವಾಗಿಯೂ ಡೇಂಜರ್ ಝೋನ್ನಲ್ಲಿ ಇರ್ತಾರೆ. ಹಾಗೇ ನೆದರ್ಲ್ಯಾಂಡ್ ವಿರುದ್ಧದ ಪಂದ್ಯವನ್ನೇ ಇಲ್ಲೂ ಕಣಕ್ಕಿಳಿಸೋ ಸಾಧ್ಯತೆಗಳಿವೆ. ಯಾಕಂದ್ರೆ ಆ ಪಂದ್ಯ ಕೂಡ ಮೋದಿ ಗ್ರೌಂಡ್ನಲ್ಲೇ ನಡೆದಿದ್ದು. ಹೇಗಿರುತ್ತೆ ಪ್ಲೇಯಿಂಗ್ 11 ಅನ್ನೋದನ್ನ ನೋಡೋಣ.
ಭಾರತದ ಪರ ಪ್ಲೇಯಿಂಗ್ 11
ಇಶಾನ್ ಕಿಶನ್
ಅಭಿಷೇಕ್ ಶರ್ಮಾ
ತಿಲಕ್ ವರ್ಮಾ
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ಅಕ್ಷರ್ ಪಟೇಲ್
ಶಿವಂ ದುಬೆ
ರಿಂಕು ಸಿಂಗ್
ವರುಣ್ ಚಕ್ರವರ್ತಿ
ಅರ್ಷದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ಭಾರತ ತಂಡದಲ್ಲಿ ಯಾವುದೇ ಚೇಂಜಸ್ ಇರಲ್ಲ. ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ಸ್ಟಾಟ್ಸ್ ನೋಡೋದಾದ್ರೆ ಉಭಯ ತಂಡಗಳು ಇದುವರೆಗೆ 35 ಟಿ-20 ಮಾದರಿ ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದಾರೆ. ಇದ್ರಲ್ಲಿ ಭಾರತ 21 ಪಂದ್ಯ ಗೆದ್ರೆ ಸೌತ್ ಆಫ್ರಿಕಾ 13 ಪಂದ್ಯಗಳಲ್ಲಿ ವಿನ್ ಆಗಿದೆ. 1 ಪಂದ್ಯದಲ್ಲಿ ಫಲಿತಾಂಶವಿಲ್ಲ. ಅದ್ರಲ್ಲೂ ಇತ್ತೀಚಿನ ಪಂದ್ಯಗಳಲ್ಲಿ ಭಾರತವೇ ಡಾಮಿನೇಟ್ ಮಾಡಿರೋದ್ರಿಂದ ಭಾನುವಾರದ ಪಂದ್ಯದಲ್ಲೂ ಸೂರ್ಯಕುಮಾರ್ ನಾಯಕತ್ವದ ಭಾರತವೇ ವಿನ್ ಆಗೋ ಫೇವರೆಟ್ ಟೀಂ ಆಗಿದೆ. ಹೀಗಿದ್ರೂ ಹರಿಣಪಡೆಯಲ್ಲಿ ಕ್ವಾಲಿಟಿ ಪ್ಲೇಯರ್ಸ್ ಇದ್ದಾರೆ. ಏಡನ್ ಮಾರ್ಕ್ರಂ, ಕ್ವಿಂಟನ್ ಡಿಕಾಕ್, ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೇವಿಸ್ ಡೇಂಜರಸ್ ಬ್ಯಾಟರ್ಗಳಾಗಿದ್ದಾರೆ. ಮಾರ್ಕೋ ಜಾನ್ಸೆನ್, ಕಾರ್ಬಿನ್ ಬಾಶ್, ಜಾರ್ಜ್ ಲಿಂಡೆ ಬಾಲ್ ಮತ್ತು ಬ್ಯಾಟ್ ಎರಡ್ರಲ್ಲೂ ಬ್ಯಾಲೆನ್ಸ್ ಮಾಡೋ ಪ್ಲೇಯರ್ಸ್ ಆಗಿದ್ದಾರೆ. ಇನ್ನು ಆನ್ರಿಚ್ ನಾರ್ಟ್ಜೆ, ಕಗಿಸೋ ರಬಾಡಾ, ಲುಂಗಿ ಎನ್ಗಿಡಿ ಬೌಲಿಂಗ್ ಅಟ್ಯಾಕ್ ಚೆನ್ನಾಗಿದೆ. ಹೀಗಾಗಿ ಭಾರತ ಮತ್ತು ಸೌತ್ ಆಫ್ರಿಕಾ ಮ್ಯಾಚ್ ಹೈವೋಲ್ಟೇಜ್ ಆಗಿರೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

