ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತದ ಎದುರಾಳಿ ನ್ಯೂಝಿಲೆಂಡ್ – ನವೆಂಬರ್ 15ರಂದು ನಡೆಯಲಿದೆ ರೋಚಕ ಪಂದ್ಯ
ಇಂಡಿಯಾ vs ನ್ಯೂಜಿಲ್ಯಾಂಡ್.. ಸೆಮಿಫೈನಲ್ ಸ್ಟೇಜ್ ಸೆಟ್ ಆಗಿದೆ. ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಸೆಮಿಫೈನಲ್ ಮ್ಯಾಚ್ ನಡೆಯಲಿದೆ. ನಾಲ್ಕು ವರ್ಷಗಳ ಹಿಂದಿನ ಸೇಡನ್ನ ತೀರಿಸಿಕೊಳ್ಳೋಕೆ ಟೀಂ ಇಂಡಿಯಾಗೆ ಅವಕಾಶ ಸಿಗ್ತಾ ಇದೆ. 2019ರಲ್ಲಿ ನಡೆದ ವರ್ಲ್ಡ್ಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ಭಾರತವನ್ನ ಸೋಲಿಸಿತ್ತು. ಆದ್ರೀಗ ಎರಡೂ ಟೀಂಗಳು ಮತ್ತೊಮ್ಮೆ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗ್ತಿವೆ.
2019ರ ಜುಲೈ 9ರಂದು ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ಸೆಮಿಫೈನಲ್ ಮ್ಯಾಚ್ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 50 ಓವರ್ಗಳಲ್ಲಿ 239/8 ಸ್ಕೋರ್ ಮಾಡಿತ್ತು. ಇದನ್ನ ಚೇಸ್ ಮಾಡಿದ ಟೀಂ ಇಂಡಿಯಾ 49.3 ಓವರ್ಗಳಲ್ಲಿ 221 ರನ್ಗಳಿಗೆ ಆಲೌಟ್ ಆಗಿತ್ತು. ಯಾವಾಗ ಕ್ಯಾಪ್ಟನ್ ಎಂ.ಎಸ್.ಧೋನಿ ರನೌಟ್ ಆದರೋ ಆಗಲೇ ಟೀಂ ಇಂಡಿಯಾ ಮತ್ತೊಮ್ಮೆ ವರ್ಲ್ಡ್ಕಪ್ ಗೆಲ್ಲೋ ಆಸೆಯನ್ನ ಕೈ ಬಿಟ್ಟಿತ್ತು. ಒಂದು ವೇಳೆ ಧೋನಿ ರನೌಟ್ ಆಗದೇ ಇದ್ದಲ್ಲಿ ಆ ಮ್ಯಾಚ್ನ ರಿಸಲ್ಟ್ ಬೇರೆಯಾಗ್ತಿತೋ ಏನೊ. ಕೊನೆಗೆ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 18 ರನ್ಗಳಿಂದ ಸೋಲನುಭವಿಸಿತ್ತು. ಆದ್ರೀಗ ಎರಡೂ ಘಟಾನುಘಟಿ ಟೀಂಗಳು ಸೆಮಿಫೈನಲ್ನಲ್ಲೇ ಮತ್ತೊಮ್ಮೆ ಸೆಣಸಾಡ್ತಿವೆ. ಟೀಂ ಇಂಡಿಯಾದ ಪಾಲಿಗೆ ಇದು ನಿಜಕ್ಕೂ ಸೇಡಿನ ಪಂದ್ಯವಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ರಾಬಿನ್ ರೌಂಡ್ ಸ್ಟೇಜ್ನಲ್ಲಿ ಧರ್ಮಶಾಲಾದಲ್ಲಿ ನಡೆದ ಮ್ಯಾಚ್ನಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ನ್ನ ಸೋಲಿಸಿತ್ತು. ಆ ಮ್ಯಾಚ್ನಲ್ಲಿ ಈ ಬಾರಿಯ ವರ್ಲ್ಡ್ಕಪ್ನ ಮೊದಲ ಪಂದ್ಯವನ್ನ ಆಡಿದ್ದ ಮೊಹಮ್ಮದ್ ಶಮಿ ನ್ಯೂಜಿಲ್ಯಾಂಡ್ನ ಒಟ್ಟು 5 ವಿಕೆಟ್ಗಳನ್ನ ಉರುಳಿಸಿದ್ರು. ಹೀಗಾಗಿ ನ್ಯೂಜಿಲ್ಯಾಂಡ್ನ ಮಣಿಸುವ ಕಾನ್ಫಿಡೆನ್ಸ್ ಆಟಗಾರರಲ್ಲಿ ಇದ್ದೇ ಇದೆ. ಇನ್ನು ಸೆಮಿಫೈನಲ್ ಮ್ಯಾಚ್ ನಡೆಯೋದು ಮುಂಬೈನ ವಾಂಖೆಡೆ ಗ್ರೌಂಡ್ನಲ್ಲಿ. ಈ ಬಾರಿ ವರ್ಲ್ಡ್ಕಪ್ನಲ್ಲಿ ಶ್ರೀಲಂಕಾ ವಿರುದ್ಧ ಇದೇ ಗ್ರೌಂಡ್ನಲ್ಲಿ ಟೀಂ ಇಂಡಿಯಾ ಪಂದ್ಯವನ್ನ ಗೆದ್ದುಕೊಂಡಿತ್ತು. ಶ್ರೀಲಂಕಾವನ್ನ ನಮ್ಮ ಬೌಲರ್ಸ್ಗಳು ಕೇವಲ 55 ರನ್ಗಳಿಗೆ ಆಲೌಟ್ ಮಾಡಿದ್ರು. ಈ ಗ್ರೌಂಡ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಟೀಂ ಇಂಡಿಯಾ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡಿತ್ತು. ಹೀಗಾಗಿ ವಾಂಖೆಡೆಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತವೇ ಗೆಲ್ಲೋ ಸಾಧ್ಯತೆ ಹೆಚ್ಚಿದೆ.
ಇನ್ನು ಈ ಬಾರಿಯ ವರ್ಲ್ಡ್ಕಪ್ನಲ್ಲಿ ನ್ಯೂಜಿಲ್ಯಾಂಡ್ನ ಮೇನ್ ಡ್ರಾಬ್ಯಾಕ್ ಅಂದ್ರೆ ಬೌಲಿಂಗ್ ಡಿಪಾರ್ಟ್ಮೆಂಟ್. ಕಿವೀಸ್ ಬೌಲರ್ಸ್ ಯಾರು ಕೂಡ ಅಷ್ಟೊಂದು ಎಫೆಕ್ಟಿವ್ ಆಗಿ ಬೌಲಿಂಗ್ ಮಾಡ್ತಿಲ್ಲ. ಹೀಗಾಗಿ ನ್ಯೂಜಿಲ್ಯಾಂಡ್ ತನ್ನ ಬೌಲಿಂಗ್ ಮೇಲೆ ಫೋಕಸ್ ಮಾಡಿಲ್ಲ ಅಂದ್ರೆ ಭಾರತೀಯ ಬ್ಯಾಟ್ಸ್ಮನ್ಗಳಿಂದ ಹೊಡೆತ ತಿನ್ನೋದು ಗ್ಯಾರಂಟಿ. ಹಾಗಂತಾ ನ್ಯೂಜಿಲ್ಯಾಂಡ್ ಯಾವ ಹಂತದಲ್ಲೂ ಲೈಟ್ ಆಗಿ ತೆಗೆದುಕೊಳ್ಳೋಕೆ ಸಾಧ್ಯವೇ ಇಲ್ಲ. ಎಸ್ಪೆಷಲಿ ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ಗಳಂತೂ ಫುಲ್ ಫಾರ್ಮ್ನಲ್ಲಿದ್ದಾರೆ. ರಚಿನ್ ರವೀಂದ್ರ ಅಂತೂ ಬೆಸ್ಟ್ ಪರ್ಫಾಮೆನ್ಸ್ ನೀಡ್ತಾ ಇದ್ದಾರೆ. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಕೂಡ ಕಮ್ಬ್ಯಾಕ್ ಮಾಡಿದ್ದು ನ್ಯೂಜಿಲ್ಯಾಂಡ್ ಬಹುದೊಡ್ಡ ಸ್ಟ್ರೆಂತ್ ಸಿಕ್ಕಂತಾಗಿದೆ. ಇಲ್ಲಿ ನ್ಯೂಜಿಲ್ಯಾಂಡ್ ಕೂಡ ಈ ಬಾರಿ ವರ್ಲ್ಡ್ಕಪ್ ಗೆಲ್ಲಲೇಬೇಕು ಅನ್ನೋ ಭಾರಿ ಹಠದಲ್ಲಿ. ಯಾಕಂದ್ರೆ ನ್ಯೂಜಿಲ್ಯಾಂಡ್ ಇದುವರೆಗೂ ಒಂದೇ ಒಂದು ಎಕದಿನ ವರ್ಲ್ಡ್ಕಪ್ನ್ನ ಗೆದ್ದುಕೊಂಡಿಲ್ಲ. 2019ರಲ್ಲಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಆ್ಯಕ್ಚುವಲಿ ಅಂದು ನ್ಯೂಜಿಲ್ಯಾಂಡಿಗರೇ ವಿಶ್ವಕಪ್ ಗೆಲ್ಲಬೇಕಿತ್ತು. ಆದ್ರೆ ಕಿವೀಸ್ಗಳಿಗೆ ಲಕ್ ಸಾಥ್ ಕೊಟ್ಟಿರಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಂದಿರಲಿಲ್ಲ ಅಷ್ಟೇ.. ಹೀಗಾಗಿ ಈ ಬಾರಿಯಾದ್ರೂ ವರ್ಲ್ಡ್ಕಪ್ ಗೆಲ್ಲಲೇಬೇಕು ಅಂತಾ ಕೇನ್ ವಿಲಿಯಮ್ಸ್ ಪಡೆ ಪಣತೊಟ್ಟಿದೆ. ಮತ್ತೊಂದೆಡೆ ಟೀಂ ಇಂಡಿಯಾಗೂ ಇದು ಪ್ರತಿಷ್ಠೆಯ ವರ್ಲ್ಡ್ಕಪ್. ಹೋಮ್ ಗ್ರೌಂಡ್ನಲ್ಲಿ ಬೇರೆ ಆಡ್ತಿರೋದ್ರಿಂದ ಭಾರತೀಯ ತಂಡದ ಮೇಲೂ ಹೆಚ್ಚಿನ ಪ್ರೆಷರ್ ಇದೆ. ಈವರೆಗೂ ಟೀಂ ಇಂಡಿಯಾ ಟಾಪ್ ಕ್ಲಾಸ್ ಕ್ರಿಕೆಟ್ ಆಡ್ತಾನೆ ಬಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ, ಯಾವುದೇ ಹಂತದಲ್ಲೂ ಓವರ್ ಕಾನ್ಫಿಡೆನ್ಸ್ಗೆ ಒಳಗಾಗದೆ ನಮ್ಮ ಪ್ಲೇಯರ್ಸ್ಗಳು ಪರ್ಫಾಮ್ ಮಾಡಬೇಕಿದೆ. ಸ್ವಲ್ಪ ಮೈಮರೆತ್ರೂ ಈವರೆಗಿನ ಗೆಲುವುಗಳೆಲ್ಲಾ ನೀರಿನ ಮಾಡಿದ ಹೋಮದಂತಾಗುತ್ತೆ. ಹೀಗಾಗಿ ಸೇಮ್ ಅಮೌಂಟ್ ಆಪ್ ಪ್ರೆಷರ್ ರೋಹಿತ್ ಶರ್ಮಾ ಪಡೆ ಮೇಲೂ ಇದೆ.