UAE ಬೇಟೆಗೆ ಅಭಿ-ಗಿಲ್ ಓಪನರ್ಸ್ – BCCIಗೆ ಸಂಜು & ಜಿತೇಶ್ ಕನ್ಫ್ಯೂಷನ್
ಏಷ್ಯಾಕಪ್ ಗೆ ಪ್ಲೇಯಿಂಗ್ 11 ಹೇಗಿದೆ?

ಏಷ್ಯಾಕಪ್ಗಾಗಿ 8 ಏಷ್ಯನ್ ರಾಷ್ಟ್ರಗಳ ನಡುವಿನ ಹೈವೋಲ್ಟೇಜ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಭಾರತ ಕೂಡ ಯುಎಇನಲ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸಿದ್ದು ಹೊಸ ಜೆರ್ಸಿ ಅನಾವರಣವೂ ಆಗಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಭಾರತದ ಜೆರ್ಸಿಯಲ್ಲಿ ಬಿಗ್ ಚೇಂಜಸ್ ಆಗಿದೆ. 23 ವರ್ಷಗಳ ನಂತರ, ಭಾರತೀಯ ಆಟಗಾರರು ಜೆರ್ಸಿಯಲ್ಲಿ ಪ್ರಾಯೋಜಕರ ಲೋಗೋ ಇಲ್ಲದೆ ಮೈದಾನಕ್ಕೆ ಇಳಿಯಲಿದ್ದಾರೆ. ಇನ್ನು ಬರೋಬ್ಬರಿ 8 ತಿಂಗಳ ಬಳಿಕ ಭಾರತ ಟಿ-20 ಮಾದರಿಯಲ್ಲಿ ಕಣಕ್ಕಿಳಿಯಲಿದೆ. ಅಲ್ದೇ ಈ ಸಲ ಟೀಂನಲ್ಲಿ ಸಾಕಷ್ಟು ಚೇಂಜಸ್ ಆಗಿರೋದ್ರಿಂದ ಯಾರಿಗೆಲ್ಲಾ ಪ್ಲೇಯಿಂಗ್ 11 ಅವಕಾಶ ಅನ್ನೋ ಕ್ಯೂರಿಯಾಸಿಟಿಯೂ ಇದೆ.
ಇದನ್ನೂ ಓದಿ : IND Vs UAE.. ಭಾರತಕ್ಕೆ ಚಾಲೆಂಜ್ – ದುಬೈ ತಂಡದಲ್ಲಿ 6 ಜನ ಭಾರತೀಯರು
ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಟಿ-20ಐ ಮಾದರಿ ಪಂದ್ಯ!
ಭಾರತ ತಂಡವು 2025 ರ ಏಷ್ಯಾಕಪ್ ಅಭಿಯಾನವನ್ನು ಸೆಪ್ಟೆಂಬರ್ 10ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಆರಂಭಿಸಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಈ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನ ಆಡಲಿದೆ. ಭಾರತ ತಂಡವು ಬುಧವಾರ (ಸೆಪ್ಟೆಂಬರ್ 10) ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆತಿಥೇಯ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ, ಭಾನುವಾರ (ಸೆಪ್ಟೆಂಬರ್ 14) ಪಾಕಿಸ್ತಾನ ವಿರುದ್ಧದ ಬ್ಲಾಕ್‌ಬಸ್ಟರ್ ಹಣಾಹಣಿಗೂ ಮೊದಲು ಗ್ರೂಪ್ ಎ ಪಂದ್ಯದಲ್ಲಿ 2025 ರ ಏಷ್ಯಾಕಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಫೆಬ್ರವರಿ ನಂತರದ ಮೊದಲ ಟಿ20ಐ ಪಂದ್ಯ ಇದು. ಹೀಗಾಗಿ ತಂಡದ ಪ್ಲೇಯಿಂಗ್ XI ಬಗ್ಗೆ ಒಂದಷ್ಟು ಚರ್ಚೆಗಳೂ ಆಗ್ತಿದೆ. ಸೋ ಏಷ್ಯಾಕಪ್ಗೆ ಸಂಭಾವ್ಯ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋದನ್ನ ನೋಡೋಣ.
ಸಂಭಾವ್ಯ ಪಟ್ಟಿ!
ಸ್ಥಾನ ಆಟಗಾರ ಪಾತ್ರ
- ಅಭಿಷೇಕ್ ಶರ್ಮಾ ಓಪನರ್
- ಶುಭಮನ್ ಗಿಲ್ ಓಪನರ್
- ತಿಲಕ್ ವರ್ಮಾ ಬ್ಯಾಟರ್
- ಸೂರ್ಯಕುಮಾರ್ ಯಾದವ್ ಬ್ಯಾಟರ್
- ಅಕ್ಷರ್ ಪಟೇಲ್ ಆಲ್-ರೌಂಡರ್
- ಹಾರ್ದಿಕ್ ಪಾಂಡ್ಯ ಆಲ್-ರೌಂಡರ್
- ಜಿತೇಶ್ ಶರ್ಮಾ ಕೀಪರ್-ಬ್ಯಾಟರ್
- ಕುಲದೀಪ್ ಯಾದವ್ ಸ್ಪಿನ್ನರ್
- ವರುಣ್ ಚಕ್ರವರ್ತಿ ಸ್ಪಿನ್ನರ್
- ಅರ್ಶ್ದೀಪ್ ಸಿಂಗ್ ಪೇಸರ್
- ಜಸ್ಪ್ರೀತ್ ಬುಮ್ರಾ ಪೇಸರ್
ಇಷ್ಟು ಆಟಗಾರರು ಪ್ಲೇಯಿಂಗ್ 11ನಲ್ಲಿ ಸ್ಥಾನವನ್ನ ಪಡ್ಕೊಳ್ಳಬಹುದು. ಉಳಿದಂತೆ ಸಂಜು ಸ್ಯಾಮ್ಸನ್, ಶಿವಂ ದುಬೆ, ಹರ್ಷಿತ್ ರಾಣಾ, ರಿಂಕು ಸಿಂಗ್ ಬೆಂಚ್ ಕಾಯಿಸಬೇಕಾಗಬಹುದು. ಬಟ್ ದುಬೈ ಪಿಚ್ನೂ ಕೂಡ ಗಮನದಲ್ಲಿ ಇಟ್ಕೊಂಡು ಅಂತಿಮವಾಗಿ ಹೇಗೆ ಟೀಂ ಸೆಟ್ ಮಾಡ್ತಾರೆ ಅನ್ನೋದು ಕೂಡ ಚರ್ಚೆಯಾಗ್ತಿದೆ.

ನೋಡಿರಿ

