ವೈಭವ್ ಗಾಗಿ ಸಂಜು Or ಅಭಿ ಔಟ್? – ಶ್ರೇಯಸ್ ಭಾರ.. ವೇಗಿಗಳೇ ವಿಲನ್ಸ್!
ಕ್ಲೈಮ್ಯಾಕ್ಸ್ ಕದನಕ್ಕೆ ಪ್ಲೇಯಿಂಗ್ 11 ಟ್ವಿಸ್ಟ್

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಲ್ಕನೇ ಪಂದ್ಯದಲ್ಲಿ ಭಾರತ ಸೋತ ಮೇಲೆ ಸಾಕಷ್ಟು ಪ್ರಶ್ನೆಗಳು ಮೂಡಿವೆ. ಪ್ಲೇಯಿಂಗ್ 11 ಬದಲಾವಣೆ ಬಗ್ಗೆಯೂ ಚರ್ಚೆಗಳಾಗ್ತಿವೆ. ವೈಭವ್ ಸೂರ್ಯವಂಶಿಯನ್ನ ಕೈಬಿಟ್ಟಿದ್ದು ಮ್ಯಾನೇಜ್ಮೆಂಟ್ಗೆ ರಿವರ್ಸ್ ಫೈಯರ್ ಆಗಿದ್ರಿಂದ ಕೊನೇ ಪಂದ್ಯಕ್ಕೆ ಮೇಜರ್ ಸರ್ಜರಿಗೆ ಮುಂದಾಗಿದೆ.
ಇದನ್ನೂ ಓದಿ : ಕಿಶನ್ ಬಂದ್ರೆ ವೈಭವ್ ಗಿಲ್ಲ ಜಾಗ – 4ನೇ ಪಂದ್ಯಕ್ಕೆ ಸೂರ್ಯವಂಶಿ ಔಟ್
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಟಿ20 ಪಂದ್ಯ ನಾಳೆ ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಸರಣಿಯನ್ನ 3-1 ಅಂತರದಲ್ಲಿ ಭಾರತ ಗೆದ್ದಿದ್ರೂ ಕೂಡ ಸರಣಿಯ ಕೊನೇ ಪಂದ್ಯದ ಗೆಲುವು ಇಬ್ಬರಿಯೂ ಪ್ರತಿಷ್ಠೆಯಾಗಲಿದೆ. ಹೀಗಾಗಿ ಭಾರತ ಈ ಪಂದ್ಯಕ್ಕೆ ಹಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಅದ್ರಲ್ಲೂ ವೈಭವ್ ಸೂರ್ಯವಂಶಿ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ.
ಸೂರ್ಯವಂಶಿಗೆ ಚಾನ್ಸ್ ನೀಡುವಂತೆ ಮಾಜಿ ಕ್ರಿಕೆಟರ್ಸ್ ಒತ್ತಾಯ!
3ನೇ ಪಂದ್ಯದಲ್ಲಿ ಜಸ್ಟ್ 19 ಬಾಲಲ್ಲೇ 45 ರನ್ ಗಳಿಸಿದ್ದ ವೈಭವ್ ಸೂರ್ಯವಂಶಿಯನ್ನ ನಾಲ್ಕನೇ ಪಂದ್ಯದಲ್ಲಿ ಕೈಬಿಡಲಾಗಿತ್ತು. ಇಶಾನ್ ಕಿಶನ್ ಕಂ ಬ್ಯಾಕ್ ನಿಂದ ಬೆಂಚ್ ಕಾಯುವಂತಾಗಿತ್ತು. ಆದ್ರೆ ಇಶಾನ್ ಕಿಶನ್ ಒಂದೂ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ರು. ಌಂಡ್ ಭಾರತ ಈ ಪಂದ್ಯವನ್ನ 87 ರನ್ಗಳ ಬಿಗ್ ಮಾರ್ಜಿನ್ನಿಂದ ಸೋಲಬೇಕಾಯ್ತು. ಈ ಹೀನಾಯ ಸೋಲಿನ ಬಳಿಕ ತಂಡದ ಕಾಂಬಿನೇಷನ್ ಬಗ್ಗೆ ಪ್ರಶ್ನೆಗಳು ಮೂಡಿದ್ವು. ಅವಶ್ಯಕತೆ ಇಲ್ಲದೆಯೇ ವೈಭವ್ ಮತ್ತು ಭುವಿಯನ್ನ ಹೊರಗಿಟ್ಟಿದ್ದಕ್ಕೆ ವಿರೋಧಗಳು ವ್ಯಕ್ತವಾಗಿವೆ. ಈ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರಾ, ವೈಭವ್ ಕೇವಲ ಗಾಯಗೊಂಡ ಆಟಗಾರರ ಬದಲಿಯಾಗಿ ಮಾತ್ರ ಆಡಬೇಕಾ? ಇಶಾನ್ ಕಿಶನ್ ಫಿಟ್ ಆಗುತ್ತಿದ್ದಂತೆ ವೈಭವ್ ಅವರನ್ನು ಕೈಬಿಡುವುದು ಸರಿನಾ ಎಂದು ಪ್ರಶ್ನಿಸಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಕೂಡ ಆಟಗಾರರಿಗೆ ತಮ್ಮ ಸ್ಥಾನ ಕಳೆದುಕೊಳ್ಳುವ ಭಯವಿಲ್ಲದೆ ನಿರ್ಭೀತಿಯಿಂದ ಆಡಲು ಅವಕಾಶ ನೀಡಬೇಕು. ಆಗ ಮಾತ್ರ ಕಾನ್ಫಿಡೆನ್ಸ್ ಬಿಲ್ಡ್ ಆಗುತ್ತೆ ಎಂದಿದ್ದಾರೆ. ಹಾಗೇ ದಿನೇಶ್ ಕಾರ್ತಿಕ್ ಇಲ್ಲಿ ಇನ್ನೊಂದು ಸಜೇಷನ್ ಕೊಟ್ಟಿದ್ದಾರೆ.
ಅಭಿಗೆ ರೆಸ್ಟ್ ನೀಡಿ ಸೂರ್ಯವಂಶಿಗೆ ಚಾನ್ಸ್ ಕೊಡ್ತಾರಾ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5ನೇ ಟಿ20 ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಯನ್ನ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳುವ ಬಗ್ಗೆ ದಿನೇಶ್ ಕಾರ್ತಿಕ್ ಸಜೇಷನ್ ನೀಡಿದ್ದಾರೆ. ವೈಭವ್ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕಾದರೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡುವ ಬದಲು, ಅಭಿಷೇಕ್ ಶರ್ಮಾಗೆ ರೆಸ್ಟ್ ಕೊಡಿ ಅಂದಿದ್ದಾರೆ. ವೈಭವ್ ಆಡ್ಬೇಕು ಅಂದಾಗ್ಲೆಲ್ಲಾ ಸಂಜುನೇ ಡ್ರಾಪ್ ಮಾಡಿ ಅಥವಾ ಬ್ಯಾಟಿಂಗ್ ಆರ್ಡರ್ ಬದಲಿಸಿ ಅವಕಾಶ ಕೊಡೋ ಬದಲು ಅಭಿಷೇಕ್ಗೆ ಕೊನೇ ಪಂದ್ಯದಲ್ಲಿ ರೆಸ್ಟ್ ನೀಡಿದ್ರೆ ಪ್ರಾಬ್ಲಂ ಸಾಲ್ವ್ ಆಗಲಿದೆ. ಭಾರತ ಆಲ್ರೆಡಿ ಸರಣಿ ಗೆದ್ದಿದ್ರಿಂದ ಕೊನೇ ಮ್ಯಾಚಲ್ಲಿ ಇಂತಹ ಪ್ರಯೋಗಗಳನ್ನು ಮಾಡಲು ಹಾಗೇ ತಂಡದ ಮೇನ್ ಪ್ಲೇಯರ್ಗಳ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಮಾಡಲು ಇದು ಬೆಸ್ಟ್ ಟೈಂ ಎಂದಿದ್ದಾರೆ. ಹೀಗಾಗಿ ವೈಭವ್ ಗೆ ಅವಕಾಶ ನೀಡೋದ್ರ ಬಗ್ಗೆ ಸಾಕಷ್ಟು ಪ್ಲೇಯರ್ಸ್ ಬ್ಯಾಟ್ ಬೀಸ್ತಿದ್ದಾರೆ. ಆದ್ರೆ ಯಾರನ್ನ ಡ್ರಾಪ್ ಮಾಡ್ಬೇಕು ಅನ್ನೋ ಬಗ್ಗೆ ಮಾತ್ರ ಡೌಟ್ ಇದೆ. ಹೀಗೆ ವೈಭವ್ ವಿಚಾರದಲ್ಲಿ ಸಾಕಷ್ಟು ಡವಲಪ್ಮೆಂಟ್ಸ್ ಆಗ್ತಿದ್ರೆ ಸ್ಪಿನ್ನರ್ಗಳನ್ನ ಯಾಕೆ ಆಡಿಸ್ತಿಲ್ಲ ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ನಾಲ್ಕು ಪಂದ್ಯಗಳಲ್ಲೂ ಬೆಂಚ್ ಕಾದ ವರುಣ್ ಮತ್ತು ಕುಲ್ದೀಪ್!
ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಕಳೆದ ನಾಲ್ಕೂ ಪಂದ್ಯಗಳಲ್ಲೂ ಬೆಂಚ್ ಕಾದಿದ್ದಾರೆ. ಈ ಬಗ್ಗೆ ಭಾರತದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಸ್ಪಷ್ಟನೆ ನೀಡಿದ್ದಾರೆ. ಭಾರತ ಈಗಾಗಲೇ ಐದು ಪಂದ್ಯಗಳ ಟಿ20ಐ ಸರಣಿಯನ್ನು 3-1 ಮುನ್ನಡೆಯೊಂದಿಗೆ ವಶಪಡಿಸಿಕೊಂಡಿದೆ. ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೆ ಬದಲಾವಣೆ ತರಬಹುದು. ಆದ್ರೆ ಅಮತಿಮ ಆಯ್ಕೆಯು ತಂಡದ ಅವಶ್ಯಕತೆಗಳ ಮೇಲೆ ಡಿಪೆಂಡ್ ಆಗಿರುತ್ತೆ ಎಂದಿದ್ದಾರೆ. ಪ್ರಸ್ತುತ ಭಾರತದ ಸ್ಪಿನ್ ದಾಳಿಯಲ್ಲಿ ಅಕ್ಷರ್ ಪಟೇಲ್ ಮಾತ್ರ ಇರುವಂಥದ್ದು. 3 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ಅಕ್ಷರ್ 42 ರನ್ಗಳನ್ನ ಕಲೆ ಹಾಕಿದ್ರೆ 3 ವಿಕೆಟ್ಸ್ ತಗೊಂಡು 158 ರನ್ಸ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗೇ ಕೊನೇ ಪಂದ್ಯಕ್ಕಾದ್ರೂ ಸ್ಪೆಷಲಿಸ್ಟ್ ಸ್ಪಿನ್ನರ್ ಆಡಿಸ್ತಾರಾ ಅನ್ನೋದೇ ಈಗಿರೋ ಪ್ರಶ್ನೆ. ಹಾಗೇ ಶಿವಂ ದುಬೆ ಕೂಡ ನಾಲ್ಕೂ ಪಂದ್ಯಗಳಲ್ಲೂ ಬೆಂಚ್ ಕಾದಿದ್ದು 5ನೇ ಪಂದ್ಯಕ್ಕೆ ನಿತೀಶ್ ರೆಡ್ಡಿ ಬದಲು ಬರ್ತಾರಾ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಕಳೆದ ಮ್ಯಾಚಲ್ಲಿ ಪಂದೇ ಓವರ್‌ನಲ್ಲಿ ರೆಡ್ಡಿ 32 ರನ್ ಬಿಟ್ಟುಕೊಟ್ಟಿದ್ರು.
ಹೇಗಿರುತ್ತೆ ಪ್ಲೇಯಿಂಗ್ 11?
ವೈಭವ್ ಸೂರ್ಯವಂಶಿ
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ನಮನ್ ಧೀರ್
ಅಕ್ಷರ್ ಪಟೇಲ್
ಭುವನೇಶ್ವರ್ ಕುಮಾರ್
ಅರ್ಶದೀಪ್ ಸಿಂಗ್
ಸ್ಪಿನ್ನರ್ಸ್ Or ಮಯಾಂಕ್

ನೋಡಿರಿ

