ಭಾರತ ಜೋಡೋ ನ್ಯಾಯ ಯಾತ್ರೆಗೆ ಬೀಳುತ್ತಾ ಬ್ರೇಕ್? – ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದಿಂದ ಪ್ರವೇಶ ನಿರಾಕರಣೆ

ಭಾರತ ಜೋಡೋ ನ್ಯಾಯ ಯಾತ್ರೆಗೆ ಬೀಳುತ್ತಾ ಬ್ರೇಕ್? – ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದಿಂದ ಪ್ರವೇಶ ನಿರಾಕರಣೆ

ಇಷ್ಟು ದಿನ ರಾಮಮಂದಿರ ಲೋಕಾರ್ಪಣೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿತ್ತು. ಆದ್ರೀಗ ರಾಹುಲ್ ಗಾಂಧಿಯ ಯಾತ್ರೆ ವಿಚಾರವೇ ಪೈಪೋಟಿಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುತ್ತಿದೆ. ಸದ್ಯ ಅಸ್ಸಾಂನಲ್ಲಿ ಯಾತ್ರೆ ಸಾಗಿದ್ದು, ಪ್ರಮುಖ ಮಾರ್ಗಗಳ ಮೂಲಕ ಬರಲು ಅಲ್ಲಿನ ಬಿಜೆಪಿ ಸರ್ಕಾರ ಪ್ರವೇಶ ನಿರಾಕರಿಸಿದೆ. ಹೀಗಾಗಿ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ದೊಡ್ಡ ಘರ್ಷಣೆಯೇ ನಡೆದಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಸೂಚಿಸಿದ್ದಾರೆ. ಈ ಬೆಳವಣಿಗೆ ಮತ್ತೊಂದು ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಮತ್ತೊಂದು FIR ದಾಖಲು! – ಅರೆಸ್ಟ್ ಆಗ್ತಾರಾ ರಾಗಾ?

  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆ
  • ಗುವಾಹಟಿ ನಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಿ ಅಸ್ಸಾಂ ಸರ್ಕಾರ ಬ್ಯಾರಿಕೇಡ್
  • ಆಕ್ರೋಶಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆ
  • ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ, ಟ್ರಾಫಿಕ್ ಜಾಮ್‌ ತಪ್ಪಿಸಲು ನಿರಾಕರಣೆ
  • ಗುವಾಹಟಿ ಪ್ರವೇಶ ನಿರಾಕರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ತಿಳಿಸಿದ್ದರು
  • ಕಾಂಗ್ರೆಸ್ ಆರೋಪವೇ ಬೇರೆ ಇದೆ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ
  • ಭಾರತ್ ಜೋಡೊ ನ್ಯಾಯ ಯಾತ್ರೆಯ ದೊಡ್ಡ ಧ್ವನಿಯಿಂದ ಹೆದರಿಕೆ
  •  ಅಸ್ಸಾಂ ಸರ್ಕಾರ ಇಂತಹ ಹೇಡಿತನದ ಮತ್ತು ನಾಚಿಕೆಗೇಡಿನ ಕೃತ್ಯ ನಡೆಸಿದೆ
  •  ಇದು ಜನರ ಧ್ವನಿ, ಯಾವುದೇ ಬೆಲೆ ತೆತ್ತರೂ ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆ ಮಂಗಳವಾರ ಗುವಾಹಟಿ ನಗರ ಪ್ರವೇಶಬೇಕಿತ್ತು. ಆದ್ರೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿ ಅಸ್ಸಾಂ ಸರ್ಕಾರ ಬ್ಯಾರಿಕೇಡ್ ಹಾಕಿ ತಡೆಯಲಾಗಿತ್ತು. ಇದರಿಂದ ಆಕ್ರೋಶಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆ ಕೂಗಿದ್ದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಟ್ರಾಫಿಕ್ ಜಾಮ್‌ ತಪ್ಪಿಸಲು ನ್ಯಾಯ ಯಾತ್ರೆಗೆ ಗುವಾಹಟಿ ಪ್ರವೇಶ ನಿರಾಕರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ತಿಳಿಸಿದ್ದರು. ಆದ್ರೆ ಕಾಂಗ್ರೆಸ್ ಆರೋಪವೇ ಬೇರೆ ಇದೆ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿ ಯಾತ್ರೆಯನ್ನು ನಿಲ್ಲಿಸಲಾಗಿದೆ. ಭಾರತ್ ಜೋಡೊ ನ್ಯಾಯ ಯಾತ್ರೆಯ ದೊಡ್ಡ ಧ್ವನಿಯಿಂದ ಹೆದರಿದ ಅಸ್ಸಾಂ ಸರ್ಕಾರ ಇಂತಹ ಹೇಡಿತನದ ಮತ್ತು ನಾಚಿಕೆಗೇಡಿನ ಕೃತ್ಯ ನಡೆಸಿದೆ. ಇದು ಜನರ ಧ್ವನಿ ಎಂಬುದನ್ನು ಬಿಜೆಪಿ ಮರೆಯಬಾರದು. ಯಾವುದೇ ಬೆಲೆ ತೆತ್ತರೂ ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ಗಲಾಟೆ ಬಗ್ಗೆ ಮಾತನಾಡಿರೋ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ನಮ್ಮದು ಶಾಂತಿಯುತ ರಾಜ್ಯವಾಗಿದೆ. ನಕ್ಸಲೈಟ್​ ತಂತ್ರಗಳು ನಮ್ಮಲ್ಲಿ ನಡೆಯುವುದಿಲ್ಲ, ಜನಸಮೂಹವನ್ನು ಪ್ರಚೋದಿಸಿದ್ದಕ್ಕಾಗಿ, ಅಶಿಸ್ತಿನ ನಡವಳಿಕೆಯಿಂದಾಗಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸೋದಾಗಿ ಹೇಳಿದ್ದಾರೆ. ಅಸಲಿಗೆ ಅಸ್ಸಾಂನಲ್ಲಿ ರಾಹುಲ್ ಗಾಂಧಿಗೆ ಸೋಮವಾರ ಕೂಡ ದೇಗುಲ ಪ್ರವೇಶಕ್ಕೆ ನಿರಾಕರಿಸಲಾಗಿತ್ತು.

  • ದೇಗುಲ ಪ್ರವೇಶಕ್ಕೂ ನಿರ್ಬಂಧ!
  • ಸೋಮವಾರ ಕೂಡ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಮೆರವಣಿಗೆ ನಡೆಸಿದ್ದರು
  • ಅಲ್ಲಿರುವ ವೈಷ್ಣವ ಸಂತ ಶ್ರೀಮಂತ ಶಂಕರದೇವರ ಜನ್ಮ ಸ್ಥಳಕ್ಕೆ ಭೇಟಿ ನೀಡಬೇಕಿತ್ತು
  • ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುವವರೆಗೂ ನಿರಾಕರಣೆ
  • ದೇಗುಲಕ್ಕೆ ಭೇಟಿ ನೀಡದಂತೆ ಹಿಮಂತ ಬಿಸ್ವಾ ಶರ್ಮಾ ರಾಹುಲ್​ ಗಾಂಧಿಗೆ ಒತ್ತಾಯ
  • ದೇಗುಲಕ್ಕೆ ತೆರಳುವಾಗ ಕಾಂಗ್ರೆಸ್​ ಕಾರ್ಯಕರ್ತರನ್ನು ತಡೆದಿದ್ದಕ್ಕೆ ಅಲ್ಲಿಯೇ ಪ್ರತಿಭಟನೆ
  •  ಗಾಂಧಿಯವರ ಭೇಟಿಗೆ ದೇಗುಲದ ವ್ಯವಸ್ಥಾಪನಾ ಸಮಿತಿಯು ಮೊದಲು ಒಪ್ಪಿಗೆ
  • ನಂತರ ತನ್ನ ನಿಲುವನ್ನು ಬದಲಾಯಿಸಿತು ಎಂದು ಕಾಂಗ್ರೆಸ್ ಆರೋಪಿಸಿದೆ

ಸೋಮವಾರ ಕೂಡ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಮೆರವಣಿಗೆ ನಡೆಸಿದ್ದರು, ಅಲ್ಲಿರುವ ವೈಷ್ಣವ ಸಂತ ಶ್ರೀಮಂತ ಶಂಕರದೇವರ ಜನ್ಮ ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುವವರೆಗೂ ದೇಗುಲಕ್ಕೆ ಭೇಟಿ ನೀಡದಂತೆ ಹಿಮಂತ ಬಿಸ್ವಾ ಶರ್ಮಾ ರಾಹುಲ್​ ಗಾಂಧಿಗೆ ಒತ್ತಾಯಿಸಿದ್ದರು. ದೇಗುಲಕ್ಕೆ ತೆರಳುವಾಗ ಕಾಂಗ್ರೆಸ್​ ಕಾರ್ಯಕರ್ತರನ್ನು ತಡೆದಿದ್ದಕ್ಕೆ ಅಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಗಾಂಧಿಯವರ ಭೇಟಿಗೆ ದೇಗುಲದ ವ್ಯವಸ್ಥಾಪನಾ ಸಮಿತಿಯು ಮೊದಲು ಒಪ್ಪಿಗೆ ನೀಡಿತ್ತು ಆದರೆ ನಂತರ ತನ್ನ ನಿಲುವನ್ನು ಬದಲಾಯಿಸಿತು ಎಂದು ಕಾಂಗ್ರೆಸ್ ಆರೋಪಿಸಿದೆ.

ಅಷ್ಟೇ ಅಲ್ಲದೆ ಮೇಘಾಲಯದ ವಿಶ್ವವಿದ್ಯಾಲಯವೊಂದರಲ್ಲಿ ಕಾಂಗ್ರೆಸ್ ನಾಯಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದವನ್ನೂ ರದ್ದುಗೊಳಿಸಲಾಗಿದೆ. ಈ ಬಗ್ಗೆ ಆಕ್ರೋಶ ಹೊರ ಹಾಕಿದ ರಾಹುಲ್ ಗಾಂಧಿ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ- ಆರೆಸ್ಸೆಸ್‌ಗೆ ಹೆದರಿಲ್ಲ. ಅಸ್ಸಾಂನಲ್ಲಿ ನಾವು ಅವರನ್ನು ಸೋಲಿಸುತ್ತೇವೆ ಎನ್ನುವುದು ನನ್ನ ಸಂದೇಶ. ನಾವು ಅತ್ಯಂತ ಭ್ರಷ್ಟ ಸಿಎಂ ಹಿಮಾಂತ ಬಿಸ್ವ ಶರ್ಮಾ ವಿರುದ್ಧ ಹೋರಾಡಲು ಇಲ್ಲಿಗೆ ಬಂದಿದ್ದೇವೆ ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಕಾಂಗ್ರೆಸ್ ಯಾತ್ರೆಗೆ  ಅಸ್ಸಾಂನಲ್ಲಿ ತಡೆ ಒಡ್ಡಿರೋದಕ್ಕೆ ಕರ್ನಾಟಕದಲ್ಲೂ ಪ್ರತಿಭಟನೆ ನಡೆಸಲಾಯ್ತು. ಒಟ್ಟಾರೆ ಲೋಕಸಭಾ ಚುನಾವಣೆ ಹತ್ತಿರವಾಗ್ತಿರೋ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಡುವಿನ ಜಟಾಪಟಿ ತಾರಕಕ್ಕೇರುತ್ತಿದೆ.

Sulekha