ಬರ್ತಾರೆ ಹೋಗ್ತಾರೆ ಫಾಸ್ಟ್ ಬೌಲರ್ಸ್ – 6 ವರ್ಷ.. 9 ಜನ.. ಉಳಿದಿದ್ದು ಒಬ್ರೇ
ವೇಗಿಗಳಿಗೆ ಕೊಹ್ಲಿ ಯುಗವೇ ಬೆಸ್ಟ್

ಬರ್ತಾರೆ ಹೋಗ್ತಾರೆ ಫಾಸ್ಟ್ ಬೌಲರ್ಸ್ – 6 ವರ್ಷ.. 9 ಜನ.. ಉಳಿದಿದ್ದು ಒಬ್ರೇವೇಗಿಗಳಿಗೆ ಕೊಹ್ಲಿ ಯುಗವೇ ಬೆಸ್ಟ್

ಇತ್ತೀಚೆಗೆ ಟೀಂ ಇಂಡಿಯಾ ಸಾಕಷ್ಟು ಸರಣಿಗಳನ್ನ ಸೋತಿದೆ. ಇದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಸ್ಟಾರ್ ಪ್ಲೇಯರ್​ಗಳ ಇಂಜುರಿ. ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ ಇಂಜುರಿ ಲಿಸ್ಟ್​ನಲ್ಲಿ ಫಾಸ್ಟ್ ಬೌಲರ್​ಗಳೇ ಜಾಸ್ತಿ ಇದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗಿರೋ ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಆಡ್ತಿಲ್ಲ. ಇಂಜುರಿ ಕಾರಣಕ್ಕೆ ಸರಣಿಯಿಂದಲೇ ಹೊರ ಬಿದ್ದಿದ್ದಾರೆ. ಪ್ರಸ್ತುತ ಲಂಕಾ ಸಿರೀಸ್​ನಲ್ಲಿರೋ ತಂಡದ ಪರ ನಾಲ್ವರು ವೇಗಿಗಳಲ್ಲಿ ಇಬ್ಬರು ಇನ್ನೂ ಡೆಬ್ಯೂ ಪ್ಲೇಯರ್ಸ್ ಆಗಿದ್ದಾರೆ. ಹೀಗಾಗಿ ಲಂಕಾ ನೆಲದಲ್ಲಿ ಭಾರತದ ಬೌಲಿಂಗ್ ಬಗ್ಗೆಯೂ ಸಾಕಷ್ಟು ಆತಂಕವೂ ಇದೆ. ಮತ್ತೊಂದೆಡೆ ಬಿಸಿಸಿಐಗೆ ದಿನೇದಿನೆ ತಲೆಬಿಸಿಯೂ ಹೆಚ್ಚಾಗ್ತಿದೆ.

ಇದನ್ನೂ ಓದಿ : KL ಓಪನರ್.. ನಂ.3ನಲ್ಲಿ ಪಡಿಕ್ಕಲ್ – ಬೌಲಿಂಗ್ ಯುನಿಟ್ ವೀಕ್ ಆಗುತ್ತಾ? 

ಸೀನಿಯರ್ಸ್ ಗೂ ಇಂಜುರಿ.. ಹೊಸಬರಿಗೂ ಗಾಯದ ಬರೆ!

ಕಳೆದ ಒಂದು ತಿಂಗಳಲ್ಲಿ ಭಾರತದ ಪರ ಹಲವು ವೇಗಿಗಳು ಇಂಜುರಿಯಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ T20I ಸರಣಿಯ ಸಮಯದಲ್ಲಿ ಪ್ರಿನ್ಸ್ ಯಾದವ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಅದೇ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಅಶೋಕ್ ಶರ್ಮಾ ಕೂಡ ಬೆನ್ನುನೋವಿಗೆ ತುತ್ತಾಗಿದ್ದಾರೆ. ಇನ್ನು ತಿಂಗಳ ಹಿಂದಷ್ಟೇ ಚೇತರಿಸಿಕೊಂಡು ಕೇವಲ ನಾಲ್ಕು ಪಂದ್ಯಗಳನ್ನು ಆಡಿದ ಹರ್ಷಿತ್ ರಾಣಾ ಮಂಡಿರಜ್ಜು ಗಾಯಕ್ಕೆ ಒಳಗಾದ್ರು.  ಆಕಾಶ್ ದೀಪ್ ಕೂಡ ಆಟದಿಂದ ಹೊರಗುಳಿದಿದ್ದಾರೆ. ಹಾಗೇ ಭಾರತದ ಪ್ರಮುಖ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಕ್ವಾಡ್ರೈಸ್ಪ್ಸ್ ಗಾಯದಿಂದ ಪಂದ್ಯಗಳನ್ನ ಆಡ್ತಿಲ್ಲ.  ಹೀಗೆ ಸಾಲು ಸಾಲು ಬೌಲರ್​ಗಳೇ ಇಂಜುರಿಗೆ ತುತ್ತಾಗಿದ್ದಾರೆ.

ಸಿರಾಜ್ ಮತ್ತು ಅರ್ಶದೀಪ್ ಮಾತ್ರವೇ ಫಿಟ್ ನೆಸ್ ನಲ್ಲಿ ಪಾಸ್!

ಭಾರತೀಯ ಕ್ರಿಕೆಟ್‌ನಲ್ಲಿ ಆತಂಕಕಾರಿ ವಿಚಾರ ಅಂದ್ರೆ ವೇಗಿಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಫಿಟ್​ನೆಸ್​ನಲ್ಲಿ ಫೇಲ್ ಆಗ್ತಿದ್ದಾರೆ. ಸದ್ಯಕ್ಕೆ ಅಟ್ ಪ್ರಸೆಂಟ್ ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್ ಮಾತ್ರವೇ ಬೆಟರ್ ಅನ್ನಿಸ್ತಿರೋದು. ಪ್ರಸಿದ್ಧ್ ಕೃಷ್ಣ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ತಂಡದ ಭಾಗವಾಗಿದ್ದಾರೆ. U19 ವಿಶ್ವಕಪ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದ ಕಮಲೇಶ್ ನಾಗರಕೋಟಿ ಮತ್ತು ಶಿವಂ ಮಾವಿ ಅವರಂತಹ ಪ್ರತಿಭೆಗಳು ನಂತರ ಸರಣಿ ಗಾಯಗಳಿಂದ ಬಳಲುತ್ತಿದ್ದಾರೆ. ಹೀಗಾಗೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಸಿಗುತ್ತಿಲ್ಲ. ಟಿ. ನಟರಾಜನ್, ಆವೇಶ್ ಖಾನ್ ಮತ್ತು ನವದೀಪ್ ಸೈನಿ ಅವರಂತಹ ಪ್ರತಿಭೆಗಳು ಗಾಯಗಳಿಂದಾಗಿ ರಾಷ್ಟ್ರೀಯ ತಂಡಕ್ಕಾಗಿ ಆಡೋಕೆ ಕಷ್ಟವಾಗ್ತಿದೆ. ಮಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್ ಅವರಂತಹ ಆಟಗಾರರು ಇಂಪ್ಯಾಕ್ಟ್ ನಿರೀಕ್ಷೆ ಮೂಡಿಸಿದ್ರೂ ಆಡಿದ್ದಕ್ಕಿಂತ ಜಾಸ್ತಿ ತಂಡದಿಂದ ಹೊರಗೇ ಇದ್ದಾರೆ. ಉಮ್ರಾನ್ ಮಲಿಕ್ ಫುಲ್ ಎಕ್ಸೈಟ್​ಮೆಂಟ್​ನಲ್ಲಿ ಬಂದವ್ರು ಅಷ್ಟೇ ವೇಗವಾಗಿ ಹೊರಹೋದ್ರು. ಯಾಕೆ ವೇಗದ ಬೌಲರ್​ಗಳ ಹೆಚ್ಚಿನ ಸಮಸ್ಯೆಗಳನ್ನ ಅನುಭವಿಸ್ತಿದ್ದಾರೆ ಅನ್ನೋದು ಕೂಡ ಶಾಕಿಂಗ್ ಆಗಿದೆ.

ಸಣ್ಣ ವಯಸ್ಸಲ್ಲೇ ಹೆಚ್ಚಿನ ಪ್ರಾಕ್ಟೀಸ್ ನಿಂದಾಗಿ ಇಂಜುರಿ ಕಾಟ!

ವೇಗದ ಬೌಲಿಂಗ್ ತರಬೇತುದಾರರಾಗಿವ ಸ್ಟೆಫನ್ ಜೋನ್ಸ್ ಗಾಯದ ಸಮಸ್ಯೆಗಳ ಕಾರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸುಮಾರು 15 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ 148 ಪ್ರಥಮ ದರ್ಜೆ ಮತ್ತು 191 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಸ್ಟೆಫನ್ ಸ್ಪೋರ್ಟ್ಸ್ ನೌ ಜೊತೆಗಿನ ವಿಶೇಷ ಸಂವಾದದಲ್ಲಿ ಈ ಬಗ್ಗೆ ಮಾತ್ನಾಡಿದ್ದಾರೆ. ಈಗಿನ ಕಾಲದಲ್ಲಿ ಸಣ್ಣ ವಯಸ್ಸಿನಲ್ಲೇ ಪ್ರಾಕ್ಟೀಸ್ ಶುರು ಮಾಡ್ತಿದ್ದಾರೆ. ಅವ್ರ ಬೆನ್ನುಮೂಳೆಯು ವೇಗದ ಬೌಲಿಂಗ್‌ಗೆ ಬೇಕಾದಷ್ಟು ಶಕ್ತಿ ಇಲ್ಲದಿರುವ ಟೈಮಲ್ಲೇ ಹೆಚ್ಚು ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಸೋ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಒತ್ತಡ ತಗೊಳ್ತಿದ್ರಿಂದ ಗಾಯದ ಸಮಸ್ಯೆಗಳು ಹೆಚ್ಚುತ್ತಿವೆ ಎಂದಿದ್ದಾರೆ. ಅದೂ ಅಲ್ದೇ ಬೌಲರ್‌ಗಳು ಬ್ಯಾಟರ್‌ಗಳಂತೆ ಒಂದೇ ರೀತಿಯ ರೊಟೀನ್ ಇರಲ್ಲ. ಫಿಟ್‌ನೆಸ್ ಡ್ರಿಲ್‌ಗಳು ಕೂಡ ಬೇರೆ ಬೇರೆ ಇರ್ಬೇಕಾಗುತ್ತೆ ಎಂದಿದ್ದಾರೆ. ಹಾಗೇ ಇಲ್ಲಿ ಕ್ಯಾಲೆಂಡರ್ ಇಯರ್​ನಲ್ಲಿ ಹೆಚ್ಚಾಗ್ತಿರೋ ಶೆಡ್ಯೂಲ್​ಗಳ ಬಗ್ಗೆಯೂ ಪ್ರಶ್ನೆ ಮಾಡ್ಬೇಕಾಗಿದೆ.

ಫಾಸ್ಟ್ ಬೌಲರ್ಸ್ ಇಂಜುರಿ ಪ್ರಾಬ್ಲಂ!

ಟಿ20 ಕ್ರಿಕೆಟ್, ಏಕದಿನ ಮತ್ತು ಟೆಸ್ಟ್ ಬೇರೆ ಬೇರೆ ರೀತಿಯಾದ ಸ್ಕಿಲ್

ಟೆಸ್ಟ್ ಪಂದ್ಯದಲ್ಲಿ ಸರಾಸರಿ 20 ಓವರ್ ಬೌಲಿಂಗ್ ಮಾಡುವುದು ಡಿಫ್ರೆಂಟ್

ಟೆಸ್ಟ್ ಮಾದರಿಯಲ್ಲಿ ಇರುವ ಡಿಮ್ಯಾಂಡ್ ​ನ ಫುಲ್ ​ಫಿಲ್ ಕಷ್ಟ ಸಾಧ್ಯ

ಐಪಿಎಲ್ ನಲ್ಲಿ 14 ಪಂದ್ಯ, 56 ಓವರ್‌ ಗಳನ್ನು ಮಾತ್ರ ಬೌಲ್ ಮಾಡುತ್ತಾರೆ

ಬಾರ್ಡರ್ ಗವಾಸ್ಕರ್ ನಲ್ಲಿ ಬುಮ್ರಾ, ಸಿರಾಜ್ ಕ್ರಮವಾಗಿ 151.2 & 157.1 ಓವರ್‌

ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ 185.3 ಓವರ್‌ಗಳನ್ನು ಬೌಲ್ ಮಾಡಿದರು

ಬುಮ್ರಾ ಮೂರು ಪಂದ್ಯಗಳನ್ನು ಆಡಿದ್ದರೂ 119.3 ಓವರ್‌ ಗಳನ್ನು ಬೌಲ್

ಮೂರು ಸ್ವರೂಪಗಳಲ್ಲಿ 100ಕ್ಕೂ ಹೆಚ್ಚು ವಿಕೆ ಟ್‌ಗಳನ್ನು ಪಡೆದಿರುವ ಬುಮ್ರಾ

ವಿರಾಟ್ ಕೊಹ್ಲಿ ನೇತೃತ್ವದಲ್ಲಿ ವೇಗದ ಬೌಲರ್‌ಗಳಿಂದಾಗಿ ಅದ್ಭುತ ಯಶಸ್ಸು

2020ರ ಜನವರಿ 1ರಿಂದ ಒಂಬತ್ತು ವೇಗದ ಬೌಲರ್ಸ್ ಆಲ್ ರೌಂಡರ್ಸ್ ಡೆಬ್ಯೂ

ರಾಷ್ಟ್ರೀಯ ತಂಡ 59 ಪಂದ್ಯಗಳನ್ನು ಆಡಿದ್ದರೂ ಸಿರಾಜ್ ಹೆಚ್ಚಿನ ಪಂದ್ಯ

ಭಾರತೀಯ ಕ್ರಿಕೆಟ್​ನಲ್ಲಿ ಪ್ರತಿಭೆ ಅಥವಾ ಪ್ರತಿಭಾವಂತ ಆಟಗಾರರಿಗೆ ಕೊರತೆ ಇಲ್ಲ. ಆದ್ರೆ ವೇಗದ ಬೌಲಿಂಗ್‌ನಲ್ಲಿ ಪ್ರಸ್ತುತ ಹಾಗಿಲ್ಲ. ಅದೂ ಅಲ್ದೇ ಫಾಸ್ಟ್ ಬೌಲರ್​​ಗಳಿಗೆ ಫಿಸಿಕಲ್ ಎಕ್ಸ್​ರ್ಶನ್ ರಿಕ್ವೈರ್ ಜಾಸ್ತಿ ಬೇಕು. ರನ್ ಅಪ್ ಮತ್ತು ಬಾಲ್ ರಿಲೀಸ್ ಟೈಮಲ್ಲಿ ಹಿಮ್ಮಡಿ ಮತ್ತು ಮೊಣಕಾಲಿನ ಮೇಲೆ ಹೆಚ್ಚಿನ ಪ್ರೆಶರ್ ಬೀಳುತ್ತೆ. ಒಂದು ಟೆಸ್ಟ್ ಪಂದ್ಯದಲ್ಲಿ ದಿನಕ್ಕೆ 15 ರಿಂದ 20 ಓವರ್‌ಗಳ ಬೌಲಿಂಗ್ ಮಾಡಬೇಕೆಂದರೆ, ಒಬ್ಬ ಬೌಲರ್ ದಿನಕ್ಕೆ ಸುಮಾರು 15 ರಿಂದ 20 ಕಿಲೋಮೀಟರ್ ಮೈದಾನದಲ್ಲಿ ಓಡಬೇಕಾಗುತ್ತದೆ. ಹೀಗೆ ಸಾಕಷ್ಟು ಚಾಲೆಂಜಸ್ ಕೂಡ ಇರೋದ್ರಿಂದ ಕಂಟಿನ್ಯುಯಸ್ ಆಗಿ ಫಿಟ್​ನೆಸ್ ಕಾಪಾಡೋದು ಕಷ್ಟವಾಗ್ತಿದೆ. ಅದೂ ಅಲ್ದೇ ಈಗ ಪಂದ್ಯಗಳ ಸಂಖ್ಯೆ ಜಾಸ್ತಿಯಾಗ್ತಿದ್ದು ಮೊದ್ಲಿದ್ದ ಬೌಲರ್ಸ್​ಗೂ ಈಗಿನ ಬೌಲರ್ಸ್​​ಗೂ ಕಷ್ಟ ಆಗ್ತಿರೋದು ಕೂಡ ಇಲ್ಲೇ.

Shantha Kumari