ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಬದಲಿಗೆ ಸಿರಾಜ್ – ಇದಕ್ಕೇನಾ WARM UP ಮ್ಯಾಚ್?
ಚಾಂಪಿಯನ್ಸ್ ಟ್ರೋಫಿ. ಇಡೀ ಜಗತ್ತೇ ಎದುರು ನೋಡ್ತಿರೋ ಐಸಿಸಿಯ ಮಹತ್ವದ ಟೂರ್ನಿ. 8 ರಾಷ್ಟ್ರಗಳ ನಡುವಿನ ಜಿದ್ದಾಜಿದ್ದಿನ ಕದನಕ್ಕೆ ಇನ್ನು ಉಳಿದಿರೋದು ಜಸ್ಟ್ ತ್ರೀ ವೀಕ್ಸ್. ಫೆಬ್ರವರಿ 19 ರಿಂದ ಆರಂಭವಾಗಲಿರುವ ಈ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದ್ರೆ ಭಾರತದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. 2024ರ ಟಿ-20 ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೂ ಕಣ್ಣಿಟ್ಟಿದೆ. ಮೂವರನ್ನ ಹೊರತುಪಡಿಸಿ ಆಲ್ಮೋಸ್ಟ್ ಹಳೇ ಟೀಮ್ನೆ ಕಣಕ್ಕಿಳಿಸಿದೆ. ಬಟ್ ವಿಷ್ಯ ಅಂದ್ರೆ ಸೀನಿಯರ್ ಪ್ಲೇಯರ್ಸ್ ಯಾರು ಫಾರ್ಮ್ನಲ್ಲಿಲ್ಲ. ಅದ್ರಲ್ಲೂ ಟಾಪ್ ಆರ್ಡರ್ ಬ್ಯಾಟರ್ಸ್ ಕಂಪ್ಲೀಟ್ ಫ್ಲ್ಯಾಪ್ ಆಗಿದ್ದಾರೆ. ಇದೇ ಕಾರಣಕ್ಕೆ ಆಟಗಾರರ ಕಮ್ ಬ್ಯಾಕ್ ಮತ್ತು ದುಬೈ ಪಿಚ್ನಲ್ಲಿ ಹೊಂದಿಕೊಳ್ಳೋಕೆ ಅಂತ್ಲೇ ವಾರ್ಮ್ ಅಪ್ ಮ್ಯಾಚ್ಗೆ ಮುಂದಾಗಿದೆ.
ಇದನ್ನೂ ಓದಿ : ಆಡದ ರೋHITಗೆ ಕಾಮೆಂಟ್ರಿ ಡೊಂಕು – ಇನ್ನೆಷ್ಟು ಕುಂಟು ನೆಪ ಬೇಕಿತ್ತು?
ಸದ್ಯ ಭಾರತ ಇಂಗ್ಲೆಂಡ್ ವಿರುದ್ಧದ ಟಿ-20ಐ ಸರಣಿ ಆಡ್ತಿದ್ದು ಇದಾದ ಬಳಿಕ ಇಂಗ್ಲೆಂಡ್ ವಿರುದ್ಧವೇ ಮೂರು ದಿನಗಳ ಏಕದಿನ ಪಂದ್ಯ ಆಡಲಿದೆ. ಈ ಸರಣಿಯು ಫೆಬ್ರವರಿ 12 ಕ್ಕೆ ಮುಗಿಯಲಿದೆ. ಇದಾಗಿ ಚಾಂಪಿಯನ್ಸ್ ಟ್ರೋಫಿ ಶುರುವಾಗೋಕೆ ಇನ್ನು ಒಂದು ವಾರ ಟೈಂ ಇರುತ್ತೆ. ಈ ಟೈಮ್ನಲ್ಲೇ ಯುಎಇನಲ್ಲಿ ಅಭ್ಯಾಸ ಪಂದ್ಯವನ್ನು ಆಡಿಸೋಕೆ ಬಿಸಿಸಿಐ ಮುಂದಾಗಿದೆ. ಅದರಂತೆ ಟೀಮ್ ಇಂಡಿಯಾ ಯುಎಇ ಅಥವಾ ಬಾಂಗ್ಲಾದೇಶ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡುವ ಸಾಧ್ಯತೆಯಿದೆ. ಅಸಲಿಗೆ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19 ರಿಂದ ಶುರುವಾದರೂ ಟೀಮ್ ಇಂಡಿಯಾದ ಅಭಿಯಾನ ಆರಂಭವಾಗುವುದು ಫೆಬ್ರವರಿ 20 ರಂದು. ಬಾಂಗ್ಲಾದೇಶ್ ತಂಡವನ್ನು ಎದುರಿಸುವ ಮೂಲಕ. ಅಂದರೆ ಬಾಂಗ್ಲಾ ತಂಡವು ತನ್ನ ಮೊದಲ ಪಂದ್ಯವನ್ನು ಆಡಲು ದುಬೈಗೆ ಬರಲಿದೆ. ಇದೇ ವೇಳೆ ಟೀಮ್ ಇಂಡಿಯಾ ಕೂಡ ದುಬೈನಲ್ಲೇ ಇರೋದ್ರಿಂದ ಟೂರ್ನಿ ಆರಂಭಕ್ಕೂ ಮುನ್ನ ಉಭಯ ತಂಡಗಳ ನಡುವೆ ಅಭ್ಯಾಸ ಪಂದ್ಯ ಆಡಿಸೋಕೆ ಬಿಸಿಸಿಐ ಚಿಂತಿಸಿದೆ. ಒಂದು ವೇಳೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಈ ಅಭ್ಯಾಸ ಪಂದ್ಯಕ್ಕೆ ಒಪ್ಪದೇ ಇದ್ರೆ ಟೀಮ್ ಇಂಡಿಯಾ ಯುಎಇ ವಿರುದ್ಧ ಅಭ್ಯಾಸ ಪಂದ್ಯವನ್ನಾಡೋ ಚಾನ್ಸಸ್ ಇದೆ. ಅದ್ರಂತೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳ ಮೂಲಕ ದುಬೈ ಪರಿಸ್ಥಿತಿಗೆ ಹೊಂದಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಇನ್ನು ಭಾರತ ಬಾಂಗ್ಲಾದೇಶದ ವಿರುದ್ಧ ಫೆಬ್ರವರಿ 20ಕ್ಕೆ ಮೊದಲ ಪಂದ್ಯವನ್ನ ಆಡಲಿದೆ. 23ಕ್ಕೆ ಪಾಕಿಸ್ತಾನ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಸೆಮಿಫೈನಲ್ಗೆ ಅರ್ಹತೆ ಪಡೆದ್ರೆ ಮಾರ್ಚ್ 4ರಂದು ಹಣಾಹಣಿ ನಡೆಯಲಿದೆ. ಇಲ್ಲೂ ಗೆದ್ರೈ ಮಾರ್ಚ್ 9ರಂದು ಫೈನಲ್ ಫೈಟ್ ನಡೆಯಲಿದೆ. ಸೋ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲೇ ನಡೆಯಲಿವೆ.
ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಇದ್ದಾರೆ. ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಬಟ್ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಗಿಡಲಾಗಿದೆ. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಸಾಧ್ಯತೆಯಿದೆ.