ಸಿಟ್ಟಿಗೆದ್ದ ಬಿಸಿಸಿಐ.. ಗಂಭೀರ್ ಗೆ ವಾರ್ನಿಂಗ್! – ರೋಹಿತ್ ಗೆ ಕಡೇ ಚಾಲೆಂಜ್!

ಸಿಟ್ಟಿಗೆದ್ದ ಬಿಸಿಸಿಐ.. ಗಂಭೀರ್ ಗೆ ವಾರ್ನಿಂಗ್! – ರೋಹಿತ್ ಗೆ ಕಡೇ ಚಾಲೆಂಜ್!

ಇಡೀ ಕ್ರಿಕೆಟ್ ಲೋಕವೇ ಕಾಯುತ್ತಿರೋ ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಉಳಿದಿರೋದು ಜಸ್ಟ್ ಇನ್ನೊಂದೇ ತಿಂಗಳು. ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಬಟ್ ಪಾಕಿಸ್ತಾನಕ್ಕೆ ತೆರಳಲು ಭಾರತ ಒಪ್ಪದೇ ಇರೋದ್ರಿಂದ ಭಾರತದ ಪಂದ್ಯಗಳೆಲ್ಲಾ ದುಬೈನಲ್ಲಿ ನಡೆದ್ರೆ ಉಳಿದ ರಾಷ್ಟ್ರಗಳ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿವೆ. ಭಾರತದ ಪಾಲಿಗೆ ಇದು ಬರೀ ಟೂರ್ನಿಯಲ್ಲ. ಕೆಲವರ ಯುಗಾಂತ್ಯವೂ ಆಗಲಿದೆ. ಕ್ಯಾಪ್ಟನ್ ಮತ್ತು ಕೋಚ್ ಮೇಲೆ ಡೆಡ್​ಲೈನ್ ವಾರ್ನಿಂಗ್ ಕೂಡ ಇದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶುರುವಾಯ್ತು ಟಾಕ್ಸಿಕ್ ಕಿಕ್ – ಯಶ್ ರೆಟ್ರೋ ಸ್ಟೈಲ್ ಗೆ ಫ್ಯಾನ್ಸ್ ಫಿದಾ

ಫೆಬ್ರವರಿ 19 ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಮೊದಲ ಪಂದ್ಯ ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ಆತಿಥೇಯ ಪಾಕಿಸ್ತಾನ ನಡುವೆ ನಡೆಯಲಿದೆ. ಒಟ್ಟು 8 ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಮಾರ್ಚ್ 9 ರಂದು ಫೈನಲ್ ನಡೆಯಲಿದೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇಡೀ ಟೂರ್ನಿಯ ಹೈವೋಲ್ಟೇಜ್ ಕದನವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈನಲ್ಲಿ ಫೆಬ್ರವರಿ 23 ರಂದು ನಡೆಯಲಿದೆ. ಆದ್ರೆ ಆಸ್ಟ್ರೇಲಿಯಾ ಸರಣಿಯನ್ನ ಸೋತಿರೋ ಟೀಂ ಇಂಡಿಯಾದಲ್ಲಿ ಏಕದಿನ ಪಂದ್ಯಕ್ಕೆ ಯಾರನ್ನೆಲ್ಲಾ ಕಣಕ್ಕಿಳಿಸಲಾಗುತ್ತೆ ಅನ್ನೋ ಪ್ರಶ್ನೆಗಳು ಎದ್ದಿವೆ.

ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲೇ ಟೀಂ ಅನೌನ್ಸ್!

ಆಸ್ಟ್ರೇಲಿಯಾ ಸರಣಿ ಬಳಿಕ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ತುಂಬಾ ವಿರೋಧಗಳು ವ್ಯಕ್ತವಾಗ್ತಿವೆ. ಆದ್ರೆ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗೂ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗಿ ಕಣಕ್ಕಿಳಿಸೋಕೆ ಬಿಸಿಸಿಐ ಪ್ಲ್ಯಾನ್ ಮಾಡಿದೆ. ಬಟ್ ಉಪನಾಯಕನ ರೇಸ್​ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ಜಸ್​ಪ್ರೀತ್​ ಬೂಮ್ರಾ ಹೆಸರು ಕೇಳಿ ಬರ್ತಿದೆ. ಆದ್ರೆ ಆಸಿಸ್ ಸರಣಿ ಬಳಿಕ ಬುಮ್ರಾ ಇಂಜುರಿಯಾಗಿರೋದ್ರಿಂದ ಕಂಪ್ಲೀಟ್ ಫಿಟ್ ಆದ್ರಷ್ಟೇ ಕಮ್ ಬ್ಯಾಕ್ ಮಾಡ್ತಾರೆ. ಇಲ್ಲದೇ ಇದ್ರೆ ಪಾಂಡ್ಯಗೇ ವೈಸ್ ಕ್ಯಾಪ್ಟನ್ ಪಟ್ಟ ಸಿಗಬಹುದು.

ವಿಕೆಟ್ ಕೀಪರ್ & ಮಿಡಲ್ ಆರ್ಡರ್ ಗೆ ಟಫ್ ಫೈಟ್!

ಇನ್ನು ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳಲ್ಲಿ ಯಾರಿಗೆ ಚಾನ್ಸ್ ಕೊಡ್ಬೇಕು ಅನ್ನೋ ಕನ್ಫ್ಯೂಷನ್ಸ್ ಕೂಡ ಇದೆ. ಯಾಕಂದ್ರೆ ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ರಿಷಭ್ ಪಂತ್ ಮೂವರೂ ಕೂಡ ಇದ್ದಾರೆ. ಈ ಪೈಕಿ ಕೆ.ಎಲ್.ರಾಹುಲ್ ಆ್ಯಂಡ್ ರಿಷಭ್ ಪಂತ್ ಆಯ್ಕೆಯಾಗುವ ಸಾಧ್ಯತೆ ಇದೆ. ಬಟ್ ಕಳೆದ ಸಿರೀಸ್​ನಲ್ಲಿ ಅಬ್ಬರಿಸಿರುವ ಸಂಜುಗೆ ಅವಕಾಶದ ಬಾಗಿಲು ತೆರೆದರೂ ಅಚ್ಚರಿ ಇಲ್ಲ. ಇನ್ನು ಆಲ್​ರೌಂಡರ್ಸ್ ಬಗ್ಗೆ ನೋಡೋದಾದ್ರೆ ಹಾರ್ದಿಕ್ ಪಾಂಡ್ಯ ಮೇ ಬಿ ಫಸ್ಟ್ ಚಾಯ್ಸ್ ಆಗ್ತಾರೆ. ಆದ್ರೆ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್​ಗಳ ರೇಸ್​ನಲ್ಲಿ ಶಿವಂ ದುಬೆ ವರ್ಸಸ್ ನಿತಿಶ್ ಕುಮಾರ್​ ರೆಡ್ಡಿ ಹೆಸರು ಜೋರಾಗಿದೆ. ದುಬೈನ ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಸ್ಪಿನ್ ಆಲ್​ರೌಂಡರ್​ಗಳಿಗೆ ಆಯ್ಕೆಗಾರರು ಮಣೆ ಹಾಕಬಹುದು.  ಹೀಗಾಗಿ ವಾಷಿಗ್ಟಂನ್ ಸುಂದರ್, ಆಕ್ಷರ್ ಪಟೇಲ್, ರವೀಂದ್ರ ಜಡೇಜಾ ಪೈಕಿ ಇಬ್ಬರು ಸೆಲೆಕ್ಟ್ ಆಗಬಹುದು. ಇನ್ನು ಚೈನಾಮನ್ ಕುಲ್​ದೀಪ್ ಯಾದವ್, ಇತ್ತಿಚಗಷ್ಟೇ ಸರ್ಜರಿಗೆ ಒಳಗಾಗಿದ್ದಾರೆ. ಹೀಗಾಗಿ ಆಯ್ಕೆಯಾಗೋದು ಸ್ವಲ್ಪ ಡೌಟ್.

ಬುಮ್ರಾ & ಶಮಿ ಇಬ್ಬರೂ ಕಮ್ ಬ್ಯಾಕ್ ಮಾಡ್ತಾರಾ?

ಸದ್ಯ ಟೀಂ ಇಂಡಿಯಾದಲ್ಲಿ ಬೌಲಿಂಗ್ ವಿಭಾಗದಲ್ಲಿ ಕನ್ಸಿಸ್ಟೆನ್ಸಿ ಫರ್ಫಾಮೆನ್ಸ್ ನೀಡ್ತಿರೋದು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಮಾತ್ರ. ಸದ್ಯ ಬೆನ್ನುನೋವಿನಿಂದ ಬಳಲ್ತಿರೋ ಬುಮ್ರಾ ಚಾಂಪಿಯನ್ಸ್ ಟ್ರೋಫಿಗೆ ಕಮ್ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ. ಇನ್ನು 2023ರ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ದೂರವೇ ಉಳಿದಿರೋ ಮೊಹಮ್ಮದ್ ಶಮಿ ಚಾಂಪಿಯನ್ಸ್ ಟ್ರೋಫಿ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಬಹುದು. ಹಾಗೇನಾದ್ರೂ ಈ ಇಬ್ಬರೂ ತಂಡಕ್ಕೆ ಮರಳಿದ್ರೆ ಟೀಂ ಇಂಡಿಯಾ ಸ್ಟ್ರೆಂತ್ ಡಬಲ್ ಆಗಲಿದೆ.

Shwetha M