ಸ್ಟಾರ್ ಡಂ ಬಿಟ್ಟು ಆಡುವ ಆಟಗಾರರಿಗೆ ಅವಕಾಶ ಕೊಡ್ತಾರಾ? -36 ಆಟಗಾರರ ಶಾರ್ಟ್ ಲಿಸ್ಟ್ ರೆಡಿ ಮಾಡಿದ ಬಿಸಿಸಿಐ!

ಆಸಿಸ್ ಸರಣಿ ಬಳಿಕ ಮುಖ್ಯವಾಗಿ ಕೇಳಿ ಬರ್ತಿರೋ ವಾದವೇ ಫಾರ್ಮ್ನಲ್ಲಿ ಇಲ್ಲದ ಸ್ಟಾರ್ ಆಟಗಾರರನ್ನ ಕೈ ಬಿಟ್ಟು ಆಡುವ ಆಟಗಾರರಿಗೆ ಅವಕಾಶ ಕೊಡಿ ಅನ್ನೋದು. ಸದ್ಯ ವಿಜಯ್ ಹಜಾರೆಯಲ್ಲಿ ಕಮಾಲ್ ಮಾಡ್ತಿರುವ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ಗೆ ಬುಲಾವ್ ನೀಡ್ತಾರಾ ಎಂಬ ಪ್ರಶ್ನೆ ಇದ್ದೇ ಇದೆ. ಸಿಡ್ನಿ ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರಸಿದ್ಧ ಕೃಷ್ಣ ಮೇಲೆ ಗೌತಮ್ ಗಂಭೀರ್ ಕೃಪೆ ತೋರ್ತಾರಾ ಎಂಬ ಲೆಕ್ಕಾಚಾರ ಇದೆ. ಅಲ್ದೇ ಜನವರಿ 12 ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ತಂಡಗಳನ್ನು ಪ್ರಕಟಿಸಬೇಕು.
ಇದನ್ನೂ ಓದಿ: ಶುರುವಾಯ್ತು ಟಾಕ್ಸಿಕ್ ಕಿಕ್ – ಯಶ್ ರೆಟ್ರೋ ಸ್ಟೈಲ್ ಗೆ ಫ್ಯಾನ್ಸ್ ಫಿದಾ
36 ಆಟಗಾರರ ಶಾರ್ಟ್ ಲಿಸ್ಟ್ ರೆಡಿ ಮಾಡಿದ ಬಿಸಿಸಿಐ!
ಚಾಂಪಿಯನ್ಸ್ ಟ್ರೋಫಿಗೆ ಟೀಂ ರೆಡಿ ಮಾಡ್ತಿರೋ ಬಿಸಿಸಿಐ ಆಯ್ಕೆ ಸಮಿತಿ ಸದ್ಯಕ್ಕೆ 36 ಆಟಗಾರರನ್ನು ಒಳಗೊಂಡಿರುವ ಸಂಭಾವ್ಯ ಪಟ್ಟಿ ರೆಡಿ ಮಾಡಿದೆ. ಓಪನರ್ ರೇಸ್ನಲ್ಲಿ ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ. ಈ ಐವರು ಓಪನರ್ ಲಿಸ್ಟ್ನಲ್ಲಿದ್ದಾರೆ. ಇನ್ನು ಮಿಡಲ್ ಆರ್ಡರ್ ರೇಸ್ನಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಯಾನ್ ಪರಾಗ್, ರಜತ್ ಪಾಟಿದಾರ್, ತಿಲಕ್ ವರ್ಮಾ, ಸಾಯಿ ಸುದರ್ಶನ್, ರಿಂಕು ಸಿಂಗ್ ಇದ್ದಾರೆ. ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಿವಂ ದುಬೆ ಪೈಕಿ ಯಾರನ್ನ ಫೈನಲ್ ಮಾಡ್ತಾರೆ ನೋಡ್ಬೇಕು. ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಪೂರ್ಣ ಪ್ರಮಾಣದ ಸ್ಪಿನ್ನರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್ಗಳ ಲಿಸ್ಟ್ ನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ ಇದ್ದಾರೆ. ಸೋ ಈ 36 ಆಟಗಾರರ ಪಟ್ಟಿಯಿಂದ ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಅಜಿತ್ ಅಗರ್ಕರ್ ಗೂ ಬಿಸಿ ಮುಟ್ಟಿಸಿದ ಬಿಸಿಸಿಐ!
ಇದೆಲ್ಲದ್ರ ನಡುವೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ, ಬಿಸಿಸಿಐ ಅಲರ್ಟ್ ಆಗಿದೆ. ಜ.12ಕ್ಕೆ ಮುಂಬೈನಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು ಭಾರತ ತಂಡದ ಕುರಿತೂ ಚರ್ಚೆ ನಡೆಯಲಿದೆ. ಗೌತಮ್ ಗಂಭೀರ್‌ರನ್ನು ಕೇವಲ ಸೀಮಿತ ಓವರ್ ತಂಡಗಳಿಗೆ ಕೋಚ್ ಆಗಿ ಉಳಿಸಿ, ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಅಥವಾ ಮತ್ತಿನ್ಯಾರಾದರೂ ಹೊಸಬರನ್ನು ನೇಮಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಬಹುದು. ಹಾಗೇ ಸ್ಟಾರ್ ಕಲ್ಚರ್ ಬಿಟ್ಟು ಆಡುವ ಆಟಗಾರರಿಗೆ ಚಾನ್ಸ್ ಕೊಡುವಂತೆ ಅಜಿತ್ ಅಗರ್ಕರ್ಗೆ ಸೂಚನೆ ಕೊಟ್ಟಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೆ ಇಡೀ ಟೀಂ ಚೇಂಜ್ ಆದ್ರೂ ಅಚ್ಚರಿ ಪಡ್ಬೇಕಿಲ್ಲ.