ಭಾರತದಲ್ಲಿ ಸಂಚರಿಸಲಿದೆ ಸೂಪರ್‌ ಸ್ಪೀಡ್‌ ರೈಲು! – ಬುಲೆಟ್‌ ಟ್ರೈನ್‌ ಸಂಚಾರ ಎಲ್ಲೆಲ್ಲಿ?

ಭಾರತದಲ್ಲಿ ಸಂಚರಿಸಲಿದೆ ಸೂಪರ್‌ ಸ್ಪೀಡ್‌ ರೈಲು! – ಬುಲೆಟ್‌ ಟ್ರೈನ್‌ ಸಂಚಾರ ಎಲ್ಲೆಲ್ಲಿ?

ಜಪಾನ್, ಚೀನಾ, ಜರ್ಮನಿಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಬುಲೆಟ್ ರೈಲು ಇದೀಗ ಭಾರತಕ್ಕೆ ಬರುತ್ತಿದ್ದು, ದೇಶದ ಮೊದಲ ಪ್ರಸ್ತಾವಿತ ಬುಲೆಟ್ ರೈಲಿನ ಚಿತ್ರವನ್ನು ರೈಲ್ವೆ ಸಚಿವರು ಈಗಾಗಲೇ ಅನಾವರಣಗೊಳಿಸಿದ್ದಾರೆ.

ಇದನ್ನೂ ಓದಿ: ಹಳ್ಳಿ ಹೈದನ ಗೆಟಪ್‌ನಲ್ಲಿ ಗಿಲ್ಲಿ ನಟ – ಸರ್ವೇ ನಂಬರ್ 45 ಸಿನಿಮಾದಲ್ಲಿ ಗಿಲ್ಲಿ ಹೀರೋ

ಇತ್ತೀಚೆಗೆ ದೆಹಲಿಯ ರೈಲ್ವೆ ಸಚಿವಾಲಯದ ಕಚೇರಿಯಲ್ಲಿ ದೇಶದ ಪ್ರತಿಷ್ಠಿತ ಮೊದಲ ಬುಲೆಟ್ ರೈಲಿನ ಪ್ರಸ್ತಾಪಿತ ಮಾದರಿಯ ಚಿತ್ರವನ್ನು ಪ್ರದರ್ಶಿಸಲಾಗಿದೆ. ದೇಶದ ಮೊದಲ ಪ್ರಸ್ತಾಪಿತ ಬುಲೆಟ್ ರೈಲಿನ ಆಕರ್ಷಕ ಚಿತ್ರವನ್ನು ರೈಲ್ವೆ ಸಚಿವಾಲಯದ ಗೇಟ್ ಸಂಖ್ಯೆ 4 ರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಅಳವಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಬ್ರವರಿಯಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ಬುಲೆಟ್‌ ಟ್ರೇನ್‌ ಬಗ್ಗೆ ಮಾಹಿತಿ ನೀಡಿದ್ದರು. ಮೊದಲ ಹೈಸ್ಪೀಡ್‌ ರೈಲು ಅಹ್ಮದಾಬಾದ್-ಮುಂಬೈ ಮಧ್ಯೆ ಚಲಿಸಲಿದೆ. ಇದು ಮಹಾರಾಷ್ಟ್ರ, ಗುಜರಾತ್‌, ದಾದ್ರಾ ಮತ್ತು ನಗರ ಹವೇಲಿ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲ್ಲಿಮೊರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿ ಒಟ್ಟು 12 ನಿಲ್ದಾಣಗಳಿವೆ ಎಂದು ಹೇಳಿದ್ದರು.

ಬುಲೆಟ್‌ ರೈಲು ಸಂಚಾರ ಸಂಬಂಧ 1.1 ಲಕ್ಷ ಕೋಟಿ ಮೌಲ್ಯದ ಯೋಜನೆಗೆ 2017ರಲ್ಲಿ ಪ್ರಧಾನಿ ಮೋದಿಯವರು ಅಹ್ಮದಾಬಾದ್‌ನ ಸಬರಮತಿಯಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಈ ಮಾರ್ಗವು ಎಂಟು ಪರ್ವತ ಸುರಂಗಗಳನ್ನ ಹೊಂದಿದೆ. ಇದರಲ್ಲಿ ಏಳು ಮಹಾರಾಷ್ಟ್ರದಲ್ಲಿ ಇದೆ. ಮಹಾರಾಷ್ಟ್ರದಲ್ಲಿ ಸುರಂಗಮಾರ್ಗದ ಉದ್ದು ಸುಮಾರು 6.05 ಕಿಮೀ. ಇನ್ನು ಗುಜರಾತ್‌ನಲ್ಲಿ ಒಂದು ಸುರಂಗವಿದ್ದು, 350 ಮೀಟರ್‌ ಉದ್ದವಿದೆ. ಇನ್ನು ಅಹ್ಮದಾಬಾದ್-ಮುಂಬೈ ಹೈಸ್ಪೀಡ್‌ ಟ್ರೇನ್‌ ಕಾರಿಡಾರ್‌ನ ಹದಿನೇಳು ನದಿ ಸೇತುವೆಗಳು ಪೂರ್ಣಗೊಂಡಿವೆ, ಆದರೆ ಗುಜರಾತ್‌ನ ನರ್ಮದಾ, ಮಾಹಿ, ತಪತಿ ಮತ್ತು ಸಬರಮತಿ ಎಂಬ ನಾಲ್ಕು ಪ್ರಮುಖ ಸೇತುವೆಗಳ ಕೆಲಸ ಮುಂದುವರಿದ ಹಂತದಲ್ಲಿದೆ. ಮಹಾರಾಷ್ಟ್ರದಲ್ಲಿ ನಾಲ್ಕು ನದಿ ಸೇತುವೆಗಳ ನಿರ್ಮಾಣವೂ ಪ್ರಗತಿಯಲ್ಲಿದೆ. ಬಿಕೆಸಿಯಲ್ಲಿ, ಉತ್ಖನನ ಕಾರ್ಯವು ಸುಮಾರು 91% ಪೂರ್ಣಗೊಂಡಿದೆ ಮತ್ತು ಸಮುದ್ರದೊಳಗಿನ ಸುರಂಗ ವಿಭಾಗದ ನಿರ್ಮಾಣವು ಪ್ರಾರಂಭವಾಗಿದೆ, ಘಾನ್ಸೋಲಿ ಮತ್ತು ಶಿಲ್ಫಾಟಾ ನಡುವಿನ 4.8 ಕಿ.ಮೀ. ಈಗಾಗಲೇ ಪೂರ್ಣಗೊಂಡಿದೆ.

ಭಾರತೀಯ ರೈಲ್ವೆಯ ಪ್ರಕಾರ, ಈ ಯೋಜನೆಯು ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಸ್ಥಳೀಯ ಹೈ-ಸ್ಪೀಡ್ ರೈಲು ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಬೆಂಗಳೂರಿನ ಬಿಇಎಂಎಲ್ ಲಿಮಿಟೆಡ್ ಜಂಟಿಯಾಗಿ 280 ಕಿ.ಮೀ. ವೇಗದ ವಿನ್ಯಾಸದೊಂದಿಗೆ ರೈಲು ಸೆಟ್‌ಗಳನ್ನು ಅಭಿವೃದ್ಧಿಪಡಿಸುತ್ತವೆ.

Shwetha M

Leave a Reply

Your email address will not be published. Required fields are marked *