2ನೇ ಪಂದ್ಯಕ್ಕಿಲ್ಲ ಬುಮ್ರಾ, ಪ್ರಸಿದ್ಧ್, ಸುದರ್ಶನ್ – ಪಂದ್ಯದ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ

ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಜುಲೈ 2 ರಿಂದ ಶುರುವಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲವೆನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡೋ ಸಾದ್ಯತೆ ಇದೆ. ಈ ಪಂದ್ಯವನ್ನ ಶತಾಯ ಗತಾಯ ಗೆಲ್ಲಲೇಬೇಕು ಅನ್ನೋ ಟಾರ್ಗೆಟ್ನಲ್ಲಿ ಕಟ್ಟುನಿಟ್ಟಿನ ಅಭ್ಯಾಸ ನಡೆಸ್ತಿದೆ. ಯಾವುದೇ ಪತ್ರಕರ್ತರಿಗಾಗ್ಲಿ ಅಥವಾ ಸಾರ್ವಜನಿಕರಿಗಾಗ್ಲಿ ಪ್ರಾಕ್ಟೀಸ್ ಸೆಷನ್ ವೀಕ್ಷಣೆಗೆ ಅವಕಾಶ ಕೊಟ್ಟಿಲ್ಲ. ವಿಷ್ಯ ಅಂದ್ರೆ ಅಭ್ಯಾಸದ ವೇಳೆ ಪ್ರಮುಖ ಆಟಗಾರರೇ ಗೈರಾಗಿದ್ದಾರೆ.
ಇದನ್ನೂ ಓದಿ : RO-KO ಕ್ರೇಜ್ ಗೆ ಬೆಚ್ಚಿದ ಆಸೀಸ್ – ವಿದಾಯ ಗೌರವ.. ಟಿಕೆಟ್ಸ್ ಸೋಲ್ಡ್ ಔಟ್!
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯೋ ಸಾಧ್ಯತೆ ತೀರಾ ಕಡಿಮೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಬುಮ್ರಾಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಇತ್ತ ಜಸ್ಪ್ರೀತ್ ಬುಮ್ರಾ ಹೊರಗುಳಿದರೆ, ಅವರ ಬದಲಿಗೆ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಅರ್ಷದೀಪ್ ಸಿಂಗ್. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಅಭ್ಯಾಸದ ವೇಳೆ ಎಡಗೈ ವೇಗಿ ಅರ್ಷದೀಪ್ ನೆಟ್ಸ್‌ನಲ್ಲಿ ತುಂಬಾ ಹೊತ್ತು ಬೆವರಿಳಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ. ಹೀಗಾಗಿ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೂಲಕ ಅರ್ಷದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಹಾಗೇ ಅರ್ಷದೀಪ್ ಸಿಂಗ್ ಜೊತೆ ಆಕಾಶ್ ದೀಪ್ ಕೂಡ ಪೈಪೋಟಿಯಲ್ಲಿದ್ದಾರೆ. ಸೋ ಇವ್ರಿಬ್ಬರಲ್ಲಿ ಒಬ್ರು ಕಣಕ್ಕಿಳಿಯೋದಂತೂ ಪಕ್ಕಾ. ಆದ್ರೂ ಕೆಲ ಕ್ರಿಕೆಟ್ ಪಂಡಿತರು ಬುಮ್ರಾ ಎಲ್ಲಾ ಪಂದ್ಯಗಳನ್ನೂ ಆಡ್ಬೇಕು ಅಂತಾ ಒತ್ತಾಯಿಸ್ತಿದ್ದಾರೆ.
ಐದೂ ಪಂದ್ಯಗಳನ್ನ ಆಡಲಿ ಬುಮ್ರಾ!
ಜೂನ್ 24 ರಂದು ಮುಕ್ತಾಯ, ಎರಡನೇ ಟೆಸ್ಟ್ ಜುಲೈ 2, 8 ದಿನ ಗ್ಯಾಪ್
ಲಾರ್ಡ್ಸ್ ಮತ್ತು ಓಲ್ಡ್ ಟ್ರಾಫರ್ಡ್‌ನಲ್ಲಿ ಕ್ರಮವಾಗಿ 3 ನೇ ಮತ್ತು 4 ನೇ ಟೆಸ್ಟ್
ಕೆನ್ನಿಂಗ್ಟನ್ ಓವಲ್‌ನಲ್ಲಿ 5 ನೇ ಮತ್ತು ಅಂತಿಮ ಟೆಸ್ಟ್‌ಗೆ 4 ದಿನಗಳ ವಿರಾಮ
ಚೇತರಿಸಿಕೊಳ್ಳಲು ಮತ್ತು ಗರಿಷ್ಠ ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಸಮಯ
ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಹೊಸ ಪೀಳಿಗೆಯ ನಾಯಕರಾಗಿದ್ದಾರೆ
ಹೆಡಿಂಗ್ಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಬೌಲಿಂಗ್ ಲೈನ್-ಅಪ್‌ನಲ್ಲಿ ಸ್ಥಿರತೆ ಇರ್ಲಿಲ್ಲ
ಭಾರತಕ್ಕೆ ಜಸ್ಪ್ರೀತ್ ಬುಮ್ರಾ ಅವರಂತಹ ಬದಲಿ ಬೌಲರ್
ಬುಮ್ರಾ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ಗಳಲ್ಲಿ ಉತ್ತಮ ರೆಕಾರ್ಡ್ಸ್ ಹೊಂದಿದ್ದಾರೆ
9 ಇನ್ನಿಂಗ್ಸ್‌ಗಳಲ್ಲಿ 26.47 ಸರಾಸರಿ ಮತ್ತು 2.77 ಎಕಾನಮಿ, 42 ವಿಕೆಟ್
ಭಾರತಕ್ಕೆ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್ ಆರಂಭ
2027 ರಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರ
ಇನ್ನೊಂದು ವಿಚಾರ ಅಂದ್ರೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೀಂ ಇಂಡಿಯಾದ ಮೊದಲ ಪ್ರಾಕ್ಟೀಸ್ ಸೆಷನ್ನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಕಾಣಿಸಿಕೊಂಡಿಲ್ಲ. ಕೃಷ್ಣ ಜೊತೆಗೆ ಬುಮ್ರಾ ಕೂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಈ ಇಬ್ಬರೂ ಆಟಗಾರರು ಫಿಟ್‌ನೆಸ್ ಡ್ರಿಲ್‌ಗಳಲ್ಲಿ ಮಾತ್ರ ಭಾಗಿಯಾಗಿದ್ರು. ಬುಮ್ರಾ ಜೊತೆಗೆ ಪ್ರಸಿದ್ಧ್ ಕೂಡ ಗೈರಾಗಿರುವುದು ಮುಂದಿನ ಟೆಸ್ಟ್ ಪಂದ್ಯದಿಂದ ಇವರಿಬ್ಬರು ಹೊರಗುಳಿಯುತ್ತಾರಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬುಮ್ರಾ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಗ್ಯಾರಂಟಿಯಾಗಿದೆ. ಸೋ ಅಭ್ಯಾಸದಿಂದ ಹೊರಗುಳಿದರೆ ಯಾವುದೇ ಅಚ್ಚರಿಯಿಲ್ಲ. ಆದರೆ ಪ್ರಸಿದ್ಧ್ ಬೌಲಿಂಗ್ ಮಾಡದಿರುವುದು ಪ್ಲೇಯಿಂಗ್ 11 ನಿಂದ ಕೈಬಿಡಬಹುದೇ ಎಂಬ ಅನುಮಾನವನ್ನು ಮೂಡಿಸಿದೆ. ಕಳೆದ ಪಂದ್ಯದಲ್ಲಿ, ಪ್ರಸಿದ್ಧ್ 5 ವಿಕೆಟ್‌ಗಳನ್ನು ಬೇಟೆಯಾಡಿದ್ರೂ ಪ್ರತಿ ಓವರ್‌ಗೆ 6 ರನ್‌ಗಳ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ, ಅವರು 20 ಓವರ್‌ಗಳಲ್ಲಿ 128 ರನ್‌ಗಳನ್ನು ಬಿಟ್ಟುಕೊಟ್ಟರೆ, ಎರಡನೇ ಇನ್ನಿಂಗ್ಸ್‌ನಲ್ಲಿ 15 ಓವರ್‌ಗಳಲ್ಲಿ 92 ರನ್‌ಗಳನ್ನು ಬಿಟ್ಟುಕೊಟ್ಟಿದ್ರು. ಅಲ್ಡೇ ಎಡ್ಜ್ ಬಾಸ್ಟನ್ ಪಿಚ್ ಸ್ಪಿನ್ನರ್ ಸ್ನೇಹಿ ಆಗಿರೋದ್ರಿಂದ ಪ್ರಸಿದ್ಧ್ ಬದಲು ಕುಲ್ದೀಪ್ ಯಾದವ್ಗೆ ಮಣೆ ಹಾಕುವ ಸಾಧ್ಯತೆ ಇದೆ. ಹೇಳಿ ಕೇಳಿ ಆಂಗ್ಲ ಬ್ಯಾಟರ್ಗಳು ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದಾರೆ. ಇದರಿಂದ ಕುಲ್ದೀಪ್ ಯಾದವ್ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು.
ಇನ್ನು ಬ್ಯಾಟಿಂಗ್ ವಿಭಾಗದಲ್ಲೂ ಟೆನ್ಷನ್ ಇದ್ದದ್ದೇ. ವರದಿಗಳ ಪ್ರಕಾರ ಸಾಯಿ ಸುದರ್ಶನ್ ಕೂಡ ಗಾಯಗೊಂಡಿದ್ದಾರೆ. ಸುದರ್ಶನ್ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಆಡುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸುದರ್ಶನ್ ಭುಜದ ಗಾಯಕ್ಕೆ ಒಳಗಾಗಿದ್ದರು. ಫೀಲ್ಡಿಂಗ್ ಜೊತೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸದ ವೇಳೆ ಸುದರ್ಶನ್ ಕೂಡ ಇರಲಿಲ್ಲ. ಹಾಗೇನಾದ್ರೂ ಎರಡನೇ ಟೆಸ್ಟ್ ಆಡದಿದ್ದರೆ ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಅಥವಾ ನಿತೀಶ್ ಕುಮಾರ್ ರೆಡ್ಡಿ ಪ್ಲೇಯಿಂಗ್-11ನಲ್ಲಿ ಸೇರಿಕೊಳ್ಳಬಹುದು. ಕರುಣ್ ನಾಯರ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಬರಬಹುದು. ಇನ್ನು ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದೊಂದಿಗೆ ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದಗ್ಯೂ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 30 ರನ್‌ಗಳಿಸಿ ನಿರಾಸೆ ಮೂಡಿಸಿದರು.

ನೋಡಿರಿ

