ಇಂದು INDO-PAK ಫೈಟ್ – ಸಿಂಹಿಣಿಯರ ಹ್ಯಾಟ್ರಿಕ್ ಟಾರ್ಗೆಟ್
ಮಹಿಳಾ ಏಷ್ಯಾಕಪ್ ಕೂಡ ನಮ್ದೇ!

ಇಂದು INDO-PAK ಫೈಟ್ – ಸಿಂಹಿಣಿಯರ ಹ್ಯಾಟ್ರಿಕ್ ಟಾರ್ಗೆಟ್ಮಹಿಳಾ ಏಷ್ಯಾಕಪ್ ಕೂಡ ನಮ್ದೇ!

ದುಬೈನಲ್ಲಿ ನಡೆಯುತ್ತಿರೋ ಮಹಿಳಾ ಏಷ್ಯಾಕಪ್​ನಲ್ಲಿಂದು ಹೈವೋಲ್ಟೇಜ್ ಮ್ಯಾಚ್ ಇದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಂದು ಮುಖಾಮುಖಿಯಾಗಲಿವೆ. ಒಂದ್ಕಡೆ ಭಾರತ ಹ್ಯಾಟ್ರಿಕ್ ಗೆಲುವಿನ ಟಾರ್ಗೆಟ್​ನಲ್ಲಿದ್ರೆ ಅತ್ತ ಪಾಕಿಸ್ತಾನ ಸೆಮಿಫೈನಲ್ ರೇಸ್​ನಲ್ಲಿ ಉಳಿಯೋ ಗುರಿಯಲ್ಲಿದೆ.

ಇದನ್ನೂ ಓದಿ : 18 ಶತಕ.. 10,868* ರನ್ಸ್ – ಮಹಿಳಾ ಕ್ರಿಕೆಟ್ ಮಹಾರಾಣಿ ಸ್ಮೃತಿ

2026ರ ಮಹಿಳಾ ಏಷ್ಯಾಕಪ್ T20 ಟೂರ್ನಿಯಲ್ಲಿಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಫೈಟ್ ನಡೆಯಲಿದೆ. ರಾತ್ರಿ 8 ಗಂಟೆಗೆ ಮ್ಯಾಚ್ ಸ್ಟಾರ್ಟ್ ಆಗುತ್ತೆ.  ಈ ಮ್ಯಾಚಲ್ಲೂ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಯಾಕಂದ್ರೆ ನಮ್ಮ ಸಿಂಹಿಣಿಯರು ಕಂಪ್ಲೀಟ್ ಆಗಿ ಮೇಲುಗೈ ಸಾದಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಇತ್ತೀಚಿನ 11 ಪಂದ್ಯಗಳಲ್ಲಿ 10ರಲ್ಲಿ ಭಾರತ ಮಹಿಳಾ ತಂಡ ಗೆದ್ದು ಬೀಗಿದೆ. ಸೋ ಟೀಂ ಇಂಡಿಯಾನೇ ಇಲ್ಲೂ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಈಗಾಗ್ಲೇ ಥಾಯ್ಲೆಂಡ್ ವಿರುದ್ಧ 94 ರನ್‌ಗಳ ಭರ್ಜರಿ ಜಯ ಹಾಗೂ ಹಾಂಗ್ ಕಾಂಗ್ ವಿರುದ್ಧ 137 ರನ್‌ಗಳ ದೂಳಿಪಟ ಜಯ ಸಾಧಿಸಿ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಆದ್ರೆ ಪಾಕಿಸ್ತಾನ ವಿರುದ್ಧದ ಮ್ಯಾಚ್​ನ ಅಷ್ಟು ಈಸಿಯಾಗಿ ತಗೊಳ್ಳೋಕೂ ಆಗಲ್ಲ.

ಭಾರತದ ಬ್ಯಾಟಿಂಗ್ ನಲ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನ ಕಾಣ್ತಿಲ್ಲ!

ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಎ ಗ್ರೂಪ್​ನಲ್ಲಿದ್ದು ಈಗಾಗ್ಲೇ ಆಡಿರುವ ಎರಡಕ್ಕೆ ಎರಡೂ ಪಂದ್ಯಗಳನ್ನ ಒನ್​ ಸೈಡೆಡ್​ ಆಗಿ ಗೆದ್ದಿದೆ. ಥಾಯ್ಲೆಂಡ್ ಮತ್ತು ಹಾಂಗ್ ಕಾಂಗ್ ವಿರುದ್ಧ ಗೆದ್ದಿದ್ರೂ ಪಾಕ್ ವಿರುದ್ಧದ ಪಂದ್ಯವನ್ನ ಸ್ವಲ್ಪ ಸೀರಿಯಸ್ ಆಗಿ ತಗೊಳ್ಬೇಕಿದೆ. ಯಾಕಂದ್ರೆ ಹಿಂದಿನ ಎರಡೂ ಪಂದ್ಯಗಳು ವೀಕ್​ ಟೀಂಗಳ ಎದುರಲ್ಲೇ ಆಗಿದೆ. ಹಾಗಂತ ಪಾಕ್ ಟೀಂ ಏನ್ ಸ್ಟ್ರಾಂಗ್ ಇಲ್ಲ. ಬಟ್ ಭಾರತದ ಬ್ಯಾಟಿಂಗ್ ಬಗ್ಗೆ ಸ್ವಲ್ಪ ಟೆನ್ಷನ್ ಇದೆ. ಲಾಸ್ಟ್ ಮ್ಯಾಚಲ್ಲಿ ಸ್ಮೃತಿ ಮಂದಾನ ಬಿಟ್ರೆ ಬೇರೆಯವ್ರ ಕಡೆಯಿಂದ ರನ್ಸ್ ಬಂದಿಲ್ಲ.  ಹರ್ಮನ್‌ಪ್ರೀತ್‌ ಕೌರ್, ಶಫಾಲಿ ವರ್ಮಾ, ರಿಚಾ ಘೋಷ್‌ ಫಾರ್ಮ್​ನಲ್ಲಿಲ್ಲ. ಹೀಗಾಗಿ ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ರೆ ನೆಕ್ಸ್​ಟ್ ಸೆಮೀಸ್​ ಪಂದ್ಯಕ್ಕೆ ಪ್ಲಸ್ ಆಗಲಿದೆ. ಮತ್ತೊಂದೆಡೆ ಪಾಕಿಸ್ತಾನ ತನ್ನ ಮೊದಲ ಮ್ಯಾಚಲ್ಲಿ ಥಾಯ್ಲೆಂಡ್ ವಿರುದ್ಧ ಗೆದ್ದಿದ್ರೂ ಈ ಮ್ಯಾಚಲ್ಲಿ ಸೋತ್ರೆ ಕೊನೆಗೆ ಹಾಂಕಾಂಗ್ ವಿರುದ್ಧ ಗೆಲ್ಲಲೇಬೇಕಾದ ಪ್ರೆಶರ್ ಇರುತ್ತೆ. ಫಾತಿಮಾ ಸನಾ ನಾಯಕತ್ವದ ಪಾಕ್ ಟೀಂ ಭಾರತದ ವಿರುದ್ಧ ಗೆಲ್ಲಲೇಬೇಕು ಅನ್ನೋ ಪ್ಲ್ಯಾನ್​ನಲ್ಲಿರ್ತಾರೆ. ಹೀಗಾಗಿ ಇವತ್ತಿನ ಪಂದ್ಯ ಬಾರೀ ರೋಚಕತೆ ಸೃಷ್ಟಿಸಿದೆ. ಬಟ್ ಓವರ್ ಆಲ್ ಏಷ್ಯಾಕಪ್ ಇತಿಹಾಸವನ್ನ ಕೆದಕಿದ್ರೆ ನಮ್ಮ ವನಿತೆಯರು ಕಂಪ್ಲೀಟ್ ಡಾಮಿನೇಷನ್ ಮಾಡಿದ್ದಾರೆ.

9 ಆವೃತ್ತಿ.. 7 ಸಲ ಕಪ್ ಗೆದ್ದಿರುವ ಭಾರತ!

ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಪ್ರಸ್ತುತ 10ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿ ನಡೆಯುತ್ತಿದ್ದು ಈ ಪೈಕಿ ಭಾರತ ಬರೋಬ್ಬರಿ 7 ಬಾರಿ ಟೈಟಲ್ ವಿನ್ ಆಗಿದೆ. 2 ಸಲ ರನ್ನರ್ ಅಪ್ ಆಗಿದ್ದಾರೆ.  ಅದ್ರಲ್ಲೂ ಏಕದಿನ ಮಾದರಿಯ ಏಷ್ಯಾಕಪ್​ನಲ್ಲಂತೂ ಕಂಪ್ಲೀಟ್ ಕ್ಲೀನ್ ಸ್ವೀಪ್ ಮಾಡಿದೆ. ಅಂದ್ರೆ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆದಾಗ ಭಾರತ ಆಡಿದ ನಾಲ್ಕೂ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದೆ. ಸೋ ಈ ಆವೃತ್ತಿಯಲ್ಲೂ ಕಪ್ ನಮ್ದೇ ಅನ್ನೋ ಟ್ರೆಂಡ್ ಶುರುವಾಗಿದೆ. 2025ರಲ್ಲಿ ನಡೆದಿದ್ದ ಮೆನ್ಸ್ ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಗೆದ್ದಿದೆ. ಈಗ ಮಹಿಳಾ ಏಷ್ಯಾಕಪ್​ನಲ್ಲೂ ಭಾರತವೇ ವಿನ್ ಆಗುವ ಫೇವರೆಟ್ ಟೀಂ ಆಗಿದೆ.

Shantha Kumari

Leave a Reply

Your email address will not be published. Required fields are marked *