ವಿಕೆಟ್ ಕೀಪರ್ ಗೆ ಭರ್ಜರಿ ರೇಸ್ – KL ರಾಹುಲ್ ಗೆ ಯಾರು ಬ್ಯಾಕಪ್?
ಯಾರಿಗೆ ಒಲಿಯುತ್ತೆ ಅದೃಷ್ಟ?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಇನ್ನೇನು ಟೀಂ ಅನೌನ್ಸ್ ಆಗ್ಬೇಕಿದೆ. 2026ರ ಜನವರಿ 11ರಿಂದ ಏಕದಿನ ಸರಣಿ ಆರಂಭವಾಗುತ್ತೆ. ಕ್ಯಾಪ್ಟನ್ ಯಾರು ಅನ್ನೋ ಕನ್ಫ್ಯೂಷನ್ ನಡುವೆ ವಿಕೆಟ್ ಕೀಪರ್ ಬ್ಯಾಟರ್ಗಳ ನಡುವೆ ರೇಸ್ ನಡೀತಿದೆ. ಕೆಎಲ್ ರಾಹುಲ್ ಪರ್ಮನೆಂಟ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ರೂ ಬ್ಯಾಕಪ್ ಯಾರು ಅನ್ನೋ ಪ್ರಶ್ನೆ ಇದೆ. ಅದ್ರಲ್ಲೂ ಈ ಮೂವರ ನಡುವೆ ಟಫ್ ಫೈಟ್ ಇದೆ.
ಇದನ್ನೂ ಓದಿ : NZ ವಿರುದ್ಧ ಯಾರು ಕ್ಯಾಪ್ಟನ್? – ಗೆಲ್ಲೋ KL ಸಾಕಾ.. ಸೋಲೋ ಗಿಲ್ ಬೇಕಾ?
ಏಕದಿನ ಸರಣಿಗೆ ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್.. 2027ರ ವಿಶ್ವಕಪ್ವರೆಗೆ ಖಾಯಂ ಆಟಗಾರ. ಆದ್ರೆ ಈಗ ಇರುವಂತ ಕನ್ಫ್ಯೂಷನ್ ಅಂದ್ರೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ನಾಯಕ ಯಾರು ಅನ್ನೋದು. ಶುಭ್ಮನ್ ಗಿಲ್ ಫಾರ್ಮ್ನಲ್ಲಿ ಇಲ್ಲ. ಹಾಗೇನಾದ್ರೂ ರಾಹುಲ್ ಕ್ಯಾಪ್ಟನ್ ಆದ್ರೆ ಹಾಗೇ ಶ್ರೇಯಸ್ ಅಯ್ಯರ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೆ ಬ್ಯಾಕಪ್ ವಿಕೆಟ್ ಕೀಪರ್ ಯಾರು ಅನ್ನೋ ಗೊಂದಲ ಬಹುಶಃ ಇರಲ್ಲ. ಬಟ್ ಗಿಲ್ ಕ್ಯಾಪ್ಟನ್ ಆಗಿ ವಾಪಸ್ ಬರೋದ್ರಿಂದ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಗಿಲ್ ಕಾಣಿಸಿಕೊಳ್ಬೋದು.
ಕಿಶನ್, ಪಂತ್ ಮತ್ತು ಜುರೇಲ್ ನಡುವೆ ಬ್ಯಾಕಪ್ ವಾರ್!
ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ರೆ ಮೀಸಲು ವಿಕೆಟ್ ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್, ರಿಷಭ್ ಪಂತ್ ಮತ್ತು ಧ್ರುವ್ ಜುರೇಲ್ ನಡುವೆ ತೀವ್ರ ಸ್ಪರ್ಧೆ ಇದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಗೆ ಈ ಮೂವರಲ್ಲಿ ಯಾರನ್ನ ಫೈನಲ್ ಮಾಡೋದು ಅನ್ನೋ ಕನ್ಫ್ಯೂಷನ್ ಶುರುವಾಗಿದೆ. ಬಟ್ ಪಂತ್ ಮತ್ತು ಜುರೇಲ್ನ ಓವರ್ಟೇಕ್ ಮಾಡಿ ಇಶಾನ್ ಕಿಶನ್ ಸ್ಥಾನ ಗಿಟ್ಟಿಸಿಕೊಳ್ಳೋ ಸಾಧ್ಯತೆ ಇದೆ. ಯಾಕಂದ್ರೆ ಕಿಶನ್ ಇತ್ತೀಚಿನ ಡೊಮೆಸ್ಟಿಕ್ ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹಾಗೇ ಟಿ-20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಸೋ ಕಿಶನ್ರನ್ನೇ ಏಕದಿನ ಸರಣಿಗೆ ಫೈನಲ್ ಮಾಡೋ ಸಾಧ್ಯತೆ ಇದೆ. ಯಾಕಂದ್ರೆ ಆಫ್ಟರ್ ಎ ಲಾಂಗ್ ಗ್ಯಾಪ್ ಕಿಶನ್ ಭಾರತೀಯ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ. ಸೋ ಏಕದಿನದಲ್ಲಿ ಚಾನ್ಸ್ ಕೊಟ್ಟು ಆ ನಂತ್ರ ಟಿ-20 ಸರಣಿಯಲ್ಲಿ ಆಡಿಸಿ ನೆಕ್ಸ್ಟ್ ವಿಶ್ವಕಪ್ಗೆ ಸಿದ್ಧವಾಗುವಂತೆ ಮಾಡೋ ಪ್ಲ್ಯಾನ್ನಲ್ಲಿದ್ದಾರೆ. ಹೀಗಾಗಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನ ಆಡಬಾರದು, ಕೆಲ ಪಂದ್ಯಗಳಲ್ಲಿ ರೆಸ್ಟ್ ಪಡೆಯಬೇಕು ಅಂತಾ ಬಿಸಿಸಿಐ ಕೂಡ ಕಿಶನ್ಗೆ ಸೂಚನೆ ನೀಡಿದೆ.
ಸೈಯದ್ ಮುಷ್ತಾಕ್ ಅಲಿಯಲ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್!
ಇತ್ತೀಚೆಗಷ್ಟೇ ಇಶಾನ್ ಕಿಶನ್ ನೇತೃತ್ವದಲ್ಲಿ ಜಾರ್ಖಂಡ್ ತಂಡವು ತಮ್ಮ ಚೊಚ್ಚಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇಶಾನ್ ಕಿಶನ್ ಈ ಟೂರ್ನಿಯಲ್ಲಿ 517 ರನ್ ಗಳಿಸಿದರು. ಟೂರ್ನಮೆಂಟ್ ಫೈನಲ್‌ನಲ್ಲಿ (45 ಎಸೆತಗಳಲ್ಲಿ) ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಕಿಶನ್ ಪಾತ್ರರಾದರು. ಎರಡು ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದ ಇಶಾನ್ ಕಿಶನ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಪ್ರಸ್ತುತ ಪಾಟ್ನಾದಲ್ಲಿರುವ ಕಿಶನ್ ಜನವರಿ 2 ರಂದು ಜಾರ್ಖಂಡ್ ತಂಡವನ್ನು ಸೇರಲಿದ್ದಾರೆ. ಹಾಗೇ ಜನವರಿ 3 ಮತ್ತು 6 ರಂದು ಕೇರಳ ಮತ್ತು ಮಧ್ಯಪ್ರದೇಶ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಏಕದಿನ ತಂಡದಿಂದ ದೂರವೇ ಉಳಿದಿರುವ ಪಂತ್!
ಇನ್ನು ಟೆಸ್ಟ್ ತಂಡದ ವೈಸ್ ಕ್ಯಾಪ್ಟನ್ ರಿಷಭ್ ಪಂತ್ ಕಳೆದೊಂದು ವರ್ಷದಿಂದ ಏಕದಿನ ತಂಡದಲ್ಲಿ ಆಡಿಲ್ಲ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿಯನ್ನು ಮುನ್ನಡೆಸುತ್ತಿದ್ದಾರೆ, ಆದರೆ ಮೂರು ಪಂದ್ಯಗಳಲ್ಲಿ 97 ರನ್ ಗಳಿಸಿ ನಿರಾಶಾದಾಯಕ ಫಾರ್ಮ್‌ನಲ್ಲಿದ್ದಾರೆ, ಇದರಲ್ಲಿ 70 ರನ್‌ಗಳ ಗರಿಷ್ಠ ಸ್ಕೋರ್ ಸೇರಿದೆ. ಇನ್ನು ಉತ್ತರ ಪ್ರದೇಶ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಜುರೆಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಮೂರು ಪಂದ್ಯಗಳಲ್ಲಿ 307 ರನ್ ಗಳಿಸಿದ್ದಾರೆ, ಇದರಲ್ಲಿ ಬರೋಡಾ ವಿರುದ್ಧದ ಅವರ ಮೊದಲ ಲಿಸ್ಟ್ ಎ ಶತಕವೂ ಸೇರಿದೆ. ಇಲ್ಲಿ ಜುರೇಲ್ ಸ್ಟ್ರಾಂಗ್ ಆಗಿ ಕಾಣ್ತಿದ್ರೂ ಅವ್ರನ್ನ ಟೆಸ್ಟ್ ಕ್ರಿಕೆಟ್ಗೆ ಬ್ಯಾಕಪ್ ಆಗಿ ಮಾತ್ರ ಚಾನ್ಸ್ ಕೊಡೋಕೆ ಬಿಸಿಸಿಐ ಬಾಸ್ಗಳು ಚಿಂತನೆ ನಡೆಸಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಏಕದಿನ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೆ ರುತುರಾಜ್ ಗಾಯಕ್ವಾಡ್ರನ್ನ ಹೊರಗಿಡೋ ಸಾಧ್ಯತೆ ಇದೆ.

ನೋಡಿರಿ

