ಟೀಂ ಇಂಡಿಯಾದ ದಂಡಂ ದಶಗುಣಂ – 300+ ರನ್ಸ್ ಕೊಟ್ರೂ ಗೆಲ್ಲೋಕಾಗಲ್ಲ!
ಭಾರತದ ಬ್ಯಾಟಿಂಗ್ ಗೆ ಬೆಚ್ಚಿದ ಕಿವೀಸ್

ಟೆಸ್ಟ್ ಮ್ಯಾಚ್ಗಳಲ್ಲಿ ಸೋಲಿಸ್ಬೋದು.. ಏಕದಿನದಲ್ಲೂ ಏರುಪೇರಾಗ್ಬೋದು.. ಆದ್ರೆ ಟಿ-20ಐ ಅಂತಾ ಬಂದಾಗ ಭಾರತವನ್ನ ಟಚ್ ಕೂಡ ಮಾಡೋಕೆ ಆಗಲ್ಲ ಅನ್ನೋದನ್ನ ನಮ್ಮ ಪ್ಲೇಯರ್ಸ್ ಮತ್ತೆ ಪ್ರೂವ್ ಮಾಡಿದ್ದಾರೆ. ಡಿಫೆನ್ಸ್ಗೂ ಸೈ, ಚೇಸಿಂಗ್ಗೂ ಜೈ ಅಂತಾ ತೋರಿಸಿಕೊಟ್ಟಿದ್ದಾರೆ.
ಮಾರ್ಡ್ರೆನ್ ಕ್ರಿಕೆಟ್ನಲ್ಲಿ ಬ್ಯಾಟರ್ಗಳ ಅಬ್ಬರ ಹೇಗಿರಬೇಕು ಅಂದ್ರೆ ಟೀಂ ಇಂಡಿಯಾದ ಟಿ-20ಐ ಟೀಂ ಬೆಸ್ಟ್ ಎಕ್ಸಾಂಪಲ್ ಎನ್ನುವಂತಾಗಿದೆ. ಅದೆಂಥದ್ದೇ ವರ್ಲ್ಡ್ ಕ್ಲಾಸ್ ಬೌಲರ್ ಆಗಿದ್ರೂ ದಂಡಂ ದಶಗುಣಂ ಅಷ್ಟೇ. ಸಿಂಗಲ್ಸ್ ಅಂತೆಲ್ಲಾ ರನ್ಸ್ ಓಡೋ ಸೀನೇ ಇಲ್ಲ. ನೆಲದ ಮೇಲೆ ಹೊಡೆದ್ರೆ ಫೋರ್, ಏರಿಯಲ್ ರೂಟ್ ತಗೊಂಡ್ರೆ ಸೀದಾ ಸಿಕ್ಸ್. ವ್ಹಾವ್.. ಭಾರತದ ಬ್ಯಾಟಿಂಗ್ನ ನೋಡೋದೇ ಕಣ್ಣಿಗೆ ಹಬ್ಬ. ಈಗ ನ್ಯೂಜಿಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲೂ ದಾಖಲೆಯ ಚೇಸಿಂಗ್ ಮಾಡಿದ್ದಾರೆ.
ಇದನ್ನೂ ಓದಿ : ಚಿನ್ನದ ಸರ ಹಾಕಿಕೊಂಡು ಮಿರ ಮಿರ ಮಿಂಚಿದ ಗಿಲ್ಲಿ – ನಂಗೇ ಅನ್ಕೊಂಡೆ ವಾಪಸ್ ಕೇಳಿದಾಗ ಶಾಕ್ ಆಯ್ತು ಅಂದ ಬಿಗ್ಬಾಸ್ ವಿನ್ನರ್
ಸೂರ್ಯ, ಕಿಶನ್ ಬಿರುಗಾಳಿಗೆ ಕಿವೀಸ್ ಪಡೆ ಧೂಳೀಪಟ!
ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಚೂಸ್ ಮಾಡಿಕೊಳ್ತು. ಹೀಗಾಗಿ ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೆ ಮತ್ತು ಟಿಮ್ ಸೈಫರ್ಟ್ ಇನ್ನಿಂಗ್ಸ್ ಆರಂಭಿಸಿದ್ರು. ಓಪನಿಂಗ್ನಲ್ಲಿ ಇಬ್ಬರ ಪಾರ್ಟ್ನರ್ಶಿಪ್ ಚೆನ್ನಾಗಿ ಸ್ಟಾರ್ಟ್ ಆಯ್ತು. 12+ ರನ್ರೇಟ್ನಲ್ಲಿ ಬ್ಯಾಟ್ ಬೀಸ್ತಿದ್ರು. ಇನ್ನೇನು ಜೋಡಿ ಡೇಂಜರಸ್ ಆಗ್ತಿದೆ ಅನ್ನುವಾಗ್ಲೇ ಹರ್ಷಿತ್ ರಾಣಾ ಕಾನ್ವೆಯನ್ನ ಔಟ್ ಮಾಡಿ ಮೊದಲ ಬ್ರೇಕ್ ಥ್ರ್ಯೂ ತಂದುಕೊಟ್ರು. ಆ ನಂತ್ರ ರಚಿನ್ ರವೀಂದ್ರ ಸೆಟಲ್ ಆಗೋಕೆ ಟೈಂ ತಗೊಂಡ್ರೂ ಆಮೇಲೆ ಅಗ್ರೆಸ್ಸಿವ್ ಬ್ಯಾಟಿಂಗ್ ಶುರು ಮಾಡಿದ್ರು. 26 ಬಾಲಲ್ಲೇ 44 ರನ್ ಗಳಿಸಿದ್ದ ರಚಿನ್ಗೆ ಕುಲ್ದೀಪ್ ಪೆವಿಲಿಯನ್ ದಾರಿ ತೋರಿಸಿದ್ರು. ಆ ನಂತ್ರ ಯಾರಿಂದಲೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಮಿಚೆಲ್ ಸ್ಯಾಂಟ್ನರ್ 47 ರನ್ ಗಳಿಸಿ ನಾಟೌಟ್ ಆಗಿ ಉಳಿದ್ರು. ಅಂತಿಮವಾಗಿ ನ್ಯೂಜಿಲೆಂಡ್ 6 ವಿಕೆಟ್ ಕಳ್ಕೊಂಡು 206 ರನ್ಸ್ ಕಲೆ ಹಾಕಿತ್ತು. ಭಾರತದ ಪರ್ ಕುಲ್ದೀಪ್ 2 ವಿಕೆಟ್ ಪಡೆದರೆ ಪಾಂಡ್ಯ, ದುಬೆ, ವರುಣ್ ಹಾಗೇ ರಾಣಾ ತಲಾ ಒಂದೊಂದು ವಿಕೆಟ್ ಪಡೆದ್ರು.
6 ರನ್ ಗೆ 2 ವಿಕೆಟ್.. 209ಕ್ಕೆ 3 ವಿಕೆಟ್.. ಭಾರತದ ಚೇಸಿಂಗ್ ದಾಖಲೆ!
209 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಒಳ್ಳೆ ಓಪನಿಂಗ್ ಸಿಗ್ಲಿಲ್ಲ. ಌಕ್ಚುಲಿ ಸಂಜು ಸ್ಯಾಮ್ಸನ್ ಸೆಕೆಂಡ್ ಬಾಲಲ್ಲೇ ಔಟ್ ಆಗ್ಬೇಕಿತ್ತು. ಬಟ್ ಅದು ಫೀಲ್ಡಿರ್ ಕೈಯಿಂದ ಸ್ಲಿಪ್ ಆಗಿ ಬೌಂಡರಿ ಗೆರೆ ದಾಟಿತ್ತು. ಕೊನೆಗೆ ಅದೇ ಓವರ್ನಲ್ಲೇ 5 ನೇ ಬಾಲಲ್ಲಿ ಸಂಜು ಕ್ಯಾಚ್ ಕೊಟ್ರು. ಇನ್ನು ಎರಡನೇ ಓವರ್ನ ಫಸ್ಟ್ ಬಾಲಲ್ಲೇ ಅಭಿಷೇಕ್ ಗೋಲ್ಡನ್ ಡಕ್ ಆದ್ರು. ಅಲ್ಲಿಗೆ ಭಾರತ 6 ರನ್ಗೆ 2 ವಿಕೆಟ್ ಕಳ್ಕೊಂಡಿತ್ತು. ಅದ್ರಲ್ಲೂ ಅಭಿಷೇಕ್ ಔಟ್ ಆಗಿದ್ದಕ್ಕೆ ಈ ಟಾರ್ಗೆಟ್ ಭಾರತ ಚೇಸ್ ಮಾಡುತ್ತಾ ಅಂತಾ ಎಲ್ರೂ ಅನ್ಕೊಳ್ತಿದ್ರು. ಆದ್ರೆ ಇಶಾನ್ ಕಿಶನ್ ಸಿಡಿಯೋಕೆ ಶುರು ಮಾಡಿದ್ರು ನೋಡಿ.. ನ್ಯೂಜಿಲೆಂಡ್ ಯಾವ ಬೌಲರ್ಗಳಿಗೂ ಕೇರೇ ಮಾಡ್ಲಿಲ್ಲ. ಪ್ರತೀ ಬಾಲಲ್ಲಿ ಸಿಕ್ಸ್ ಇಲ್ಲ ಫೋರ್.. ಒಂದ್ಕಡೆ ಕಿಶನ್ ಅಬ್ಬರಿಸ್ತಿದ್ರೆ ಇನ್ನೊಂದ್ಕಡೆ ಸೂರ್ಯ ಸೈಲೆಂಟಾಗೇ ಬಾಲ್ಗಳನ್ನ ಫೇಸ್ ಮಾಡಿ ಆದಷ್ಟು ಕಿಶನ್ಗೆ ಸ್ಟ್ರೈಕ್ ಕೊಡ್ತಿದ್ರು. ಹೀಗೆ ಜಸ್ಟ್ 32 ಬಾಲಲ್ಲೇ 11 ಫೋರ್, 4 ಸಿಕ್ಸರ್ ಸಹಿತ 76 ರನ್ ಬಾರಿಸಿದ್ದ ಕಿಶನ್ ಇಶ್ ಸೋಧಿ ಬೌಲಿಂಗ್ನಲ್ಲಿ ವಿಕೆಟ್ ಕೊಟ್ರು. ಆ ನಂತ್ರ ಸೂರ್ಯನ ಸರದಿ. 2025ರುದ್ದಕ್ಕೂ ಗ್ರಹಣ ಹಿಡಿದಿದ್ದ ಸೂರ್ಯ ರಾಯ್ಪುರದಲ್ಲಿ ಬೆಂಕಿಯುಂಡೆಯಂತಾಗಿದ್ದ. 360 ಡಿಗ್ರಿ ಬ್ಯಾಟಿಂಗ್ ಸ್ಟೈಲಲ್ಲೇ ಕಿವೀಸ್ ಆಟಗಾರರನ್ನ ಬೆಂಡೆತ್ತಿದ್ರು. ಸೂರ್ಯನಿಗೆ ದುಬೆ ಕೂಡ ಸಾಥ್ ಕೊಟ್ರು. ಅಂತಿಮವಾಗಿ ಸೂರ್ಯ 37 ಎಸೆತಗಳಲ್ಲಿ 82 ರನ್ಸ್ ಬಾರಿಸಿ ಅಜೇಯರಾಗಿ ಉಳಿದ್ರು. ಹಾಗೇ ದುಬೆ 36 ರನ್ ಹೊಡೆದ ದುಬೆ ಮ್ಯಾಚ್ ಫಿನಿಶ್ ಮಾಡಿದ್ರು. 15.2 ಓವರ್ಗಳಲ್ಲೇ ಭಾರತ ಟಾರ್ಗೆಟ್ ಚೇಸ್ ಮಾಡಿ ಗೆದ್ದು ಬೀಗಿತು. ನ್ಯೂಜಿಲೆಂಡ್ ಪರ ಜೇಕಬ್ ಡಫಿ 9.50 ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ದು ಬಿಟ್ರೆ ಉಳಿದವ್ರೆಲ್ಲಾ ದಾರಾಳವಾಗಿ ರನ್ಸ್ ಕೊಟ್ರು. ಅದ್ರಲ್ಲೂ ಝಕರಿ ಫೋಕ್ಸ್ ಅಂತೂ 18 ಬಾಲಲ್ಲೇ 67 ರನ್ಸ್ ಕೊಟ್ಟು ಮೋಸ್ಟ್ ಎಕ್ಸ್ಪೆನ್ಸಿವ್ ಆದ್ರು.
ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ಪಾಕಿಸ್ತಾದ ದಾಖಲೆ ಬ್ರೇಕ್!
ಇನ್ನು ರಾಯ್ಪುರದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ದಾಖಲೆ ಬ್ರೇಕ್ ಮಾಡಿದೆ. ಟಿ20 ಕ್ರಿಕೆಟ್ನಲ್ಲಿ 200+ ರನ್ಗಳ ಗುರಿಯನ್ನು ವೇಗವಾಗಿ ತಲುಪಿದ ಐಸಿಸಿ ಪೂರ್ಣ ಸದಸ್ಯದ ಮೊದಲ ರಾಷ್ಟ್ರ ಎನಿಸಿಕೊಂಡಿದೆ. ಈ ಪಂದ್ಯವನ್ನು ಭಾರತ ಇನ್ನು 28 ಎಸೆತಗಳು ಬಾಕಿ ಇರುವಾಗಲೇ ಗೆದ್ದುಕೊಂಡಿತು. 2025ರಲ್ಲಿ ನ್ಯೂಜಿಲೆಂಡ್ ವಿರುದ್ಧದ 205 ರನ್ಗಳ ಗುರಿಯನ್ನು ಪಾಕಿಸ್ತಾನ 24 ಎಸೆತಗಳು ಬಾಕಿ ಇರುವಂತೆ ಗೆದ್ದಿದ್ದು ದಾಖಲೆಯಾಗಿತ್ತು. ಇಷ್ಟೇ ಅಲ್ದೇ ಹೆಚ್ಚು ಬಾರಿ 200+ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ದೇಶಗಳಲ್ಲಿ ಭಾರತ ಎರಡನೇ ಸ್ಥಾನಕ್ಕೆ ತಲುಪಿದೆ. ಭಾರತ ಇದುವರೆಗೆ 6 ಸಲ ಈ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ಏಳು ಬಾರಿ 200+ ರನ್ಸ್ ಚೇಸ್ ಮಾಡಿ ಫಸ್ಟ್ ಪ್ಲೇಸ್ನಲ್ಲಿದೆ. ಒಟ್ನಲ್ಲಿ ಟಿ-20ಐ ಫಾರ್ಮೆಟ್ನಲ್ಲಿ ಭಾರತವನ್ನ ಟಚ್ ಕೂಡ ಮಾಡೋಕೆ ಆಗಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಬಹುಶಃ ನಿನ್ನೆ ಮ್ಯಾಚಲ್ಲಿ ಹತ್ತತ್ರ 280 ಟಾರ್ಗೆಟ್ ಇದ್ರೂ ಹೊಡೀತಿದ್ರು. ಇದೇ ಕಾರಣಕ್ಕೆ ಪೊಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕಿವೀಸ್ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ ನಾವು ನಮ್ಮ ಸ್ಕೋರ್ ಡಿಫೆನ್ಸ್ ಮಾಡಿಕೊಳ್ಳೋಕೆ ಬಹುಶಃ 300 ರನ್ಸ್ ಹೊಡೀಬೇಕಿತ್ತು ಅಂದಿದ್ದಾರೆ. ಅಲ್ಲಿಗೆ ಭಾರತದ ಬ್ಯಾಟಿಂಗ್ ಪರಾಕ್ರಮ ಎಂಥಾದ್ದು ಅನ್ನೋಧನ್ನ ಹೇಳಿದ್ದಾರೆ. ಒಟ್ನಲ್ಲಿ 2ನೇ ಮ್ಯಾಚ್ನೂ ಗೆದ್ದಾಯ್ತು.. ಸರಣಿಯಲ್ಲಿ 2-0 ಲೀಡ್ ಸಿಕ್ಕಿದೆ. ಭಾನುವಾರ ಗುವಾಹಟಿಯಲ್ಲಿ 3ನೇ ಪಂದ್ಯ ಇದ್ದು ಇದನ್ನೂ ಗೆದ್ರೆ ಭಾರತಕ್ಕೆ ಸರಣಿ ಒಲಿಯುತ್ತೆ.

ನೋಡಿರಿ

