ಭಾರತದ ಕೊನೆಯ ಹಳ್ಳಿಯಾಗಿದ್ದ ‘ಮಾಣಾ’ ಈಗ ಭಾರತದ ಪ್ರಥಮ ಗ್ರಾಮ!

ಭಾರತದ ಕೊನೆಯ ಹಳ್ಳಿಯಾಗಿದ್ದ ‘ಮಾಣಾ’ ಈಗ ಭಾರತದ ಪ್ರಥಮ ಗ್ರಾಮ!

ಡೆಹ್ರಾಡೂನ್: ಇದುವರೆಗೆ ಭಾರತದ ಕೊನೆ ಹಳ್ಳಿ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಹಳ್ಳಿಯನ್ನು ಈಗ ಭಾರತದ ಪ್ರಥಮ ಹಳ್ಳಿ ಅಂತಾ ಕರೆಯಲಾಗಿದೆ. ಇಂತಹದ್ದೊಂದು ದೊಡ್ಡ ಫ‌ಲಕವನ್ನು ಮಾಣಾದ ಪ್ರವೇಶದ್ವಾರದಲ್ಲಿ ಬಿಆರ್‌ಎಸ್‌ (ಭಾರತ ಗಡಿರಸ್ತೆ ಸಂಸ್ಥೆ) ಹಾಕಿದೆ.

ಇದನ್ನೂ ಓದಿ: ಆಪರೇಷನ್ ಕಾವೇರಿ – ಸುಡಾನ್ ನಿಂದ 3 ನೇ ಬ್ಯಾಚ್ ನಲ್ಲಿ 135 ಭಾರತೀಯರು ತಾಯ್ನಾಡಿಗೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ  ಪ್ರಧಾನಿ ನರೇಂದ್ರ ಮೋದಿ ಮಾಣಾ ಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಗಡಿಭಾಗದಲ್ಲಿರುವ ಭಾರತದ ಹಳ್ಳಿಗಳನ್ನು ಇನ್ನು ಮುಂದೆ ದೇಶದ ಮೊದಲ ಹಳ್ಳಿಗಳೆಂದು ಕರೆಯಬೇಕೆಂದು ಕರೆ ನೀಡಿದ್ದರು. ಹೀಗಾಗಿ ಈ ಬದಲಾವಣೆ ಮಾಡಲಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುತಂತ್ರಿ ಚೀನಾ ಕೆಲ ತಿಂಗಳಿನಿಂದ ನೈಜ ನಿಯಂತ್ರಣ ರೇಖೆಯ ಬಳಿ ತನ್ನ ಉಪಟಳವನ್ನು ಜಾಸ್ತಿ ಮಾಡುತ್ತಿದೆ. ಅರುಣಾಚಲಪ್ರದೇಶದ ಹೆಸರುಗಳನ್ನು ತಾನೇ ಬದಲಾಯಿಸಿ, ಈ ರಾಜ್ಯ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಅದಕ್ಕೆ ಪ್ರತಿಯಾಗಿ ಮೋದಿ ಸರಕಾರ ಈ ಭಾಗದ ಜನತೆಗೆ ವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಈ ಬಗ್ಗೆ ಟ್ವೀಟ್‌ ಮಾಡಿ, ಇನ್ನು ಮುಂದೆ ಮಾಣಾ ದೇಶದ ಪ್ರಥಮ ಹಳ್ಳಿಯೆಂದು ಮಾಹಿತಿ ನೀಡಿದ್ದಾರೆ.

suddiyaana