ವಿದೇಶಿ ಪ್ರಯಾಣದಲ್ಲಿ ದಾಖಲೆ ಬರೆದ ಭಾರತೀಯರು – ಬರೋಬ್ಬರಿ $10 ಬಿಲಿಯನ್ ಖರ್ಚು..!
ಕೊರೊನಾ ಬಂದ ಮೇಲೆ ಜನಜೀವನ ಮೊದಲಿನಂತಿಲ್ಲ. ವ್ಯಾಪಾರ ಡಲ್ ಆಗಿದೆ. ಕೆಲಸಗಳೂ ನಡೆಯುತ್ತಿಲ್ಲ. ಆದಾಯವೂ ಬರ್ತಿಲ್ಲ ಅಂತಾ ಜನ ಮಾತಾಡೋದನ್ನ ಕೇಳೇ ಇರ್ತೀವಿ. ಇಷ್ಟೆಲ್ಲಾ ಅಂದ್ರೂ ಕೂಡ ಜನ ವಿದೇಶಿ ಪ್ರಯಾಣ ಮಾಡೋದನ್ನ ಮಾತ್ರ ಮರೆತಿಲ್ಲ. ಅದೂ ಕೂಡ ಕೊರೊನಾ ನಂತರ ಈ ವಿದೇಶ ಪ್ರಯಾಣ ಮತ್ತಷ್ಟು ಹೆಚ್ಚಾಗಿದ್ದು, ಹೊಸ ದಾಖಲೆಯನ್ನೇ ಬರೆದಿದೆ.
ಇದನ್ನೂ ಓದಿ : ಮೊಬೈಲ್ ನಲ್ಲಿ ಸೆರೆಯಾಯ್ತು ಹಾರುವ ವಿಚಿತ್ರ ಹಾವು – ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!
ಹೌದು. ಏಪ್ರಿಲ್-ಡಿಸೆಂಬರ್‌ನಲ್ಲಿ ವಿದೇಶಿ ಪ್ರಯಾಣಕ್ಕಾಗಿ ಭಾರತೀಯರು ಸುಮಾರು $10 ಬಿಲಿಯನ್ ಖರ್ಚು ಮಾಡಿದ್ದಾರೆ. ಇದಕ್ಕೂ ಮೊದಲು ಅಂದ್ರೆ ಕೊರೊನಾ ಪೂರ್ವದ 2019-20 ರಲ್ಲಿ ಇಡೀ ಹಣಕಾಸು ವರ್ಷದಲ್ಲಿ ವಿದೇಶಿ ಪ್ರಯಾಣಕ್ಕಾಗಿ ಅತೀ ಹೆಚ್ಚು ಅಂದ್ರೆ $7 ಬಿಲಿಯನ್ ಹಣ ಖರ್ಚು ಮಾಡಲಾಗಿತ್ತು.
ಭಾರತೀಯರು ಏಪ್ರಿಲ್ ಮತ್ತು ಡಿಸೆಂಬರ್ ತಿಂಗಳ ನಡುವೆ ಸುಮಾರು $10 ಶತಕೋಟಿ ಡಾಲರ್‌ಗಳನ್ನು ವಿದೇಶ ಪ್ರಯಾಣಕ್ಕಾಗಿ ಖರ್ಚು ಮಾಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಡೇಟಾವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದು ಯಾವುದೇ ಹಣಕಾಸು ವರ್ಷದಲ್ಲಿ ಮಾಡಿದ ವೆಚ್ಚಕ್ಕಿಂತಲೂ ಹೆಚ್ಚಿನ ಮೊತ್ತವಾಗಿದೆ. ಇದಕ್ಕೂ ಮೊದಲು, 2019-20 ರಲ್ಲಿ ಇಡೀ ಹಣಕಾಸು ವರ್ಷದಲ್ಲಿ ವಿದೇಶ ಪ್ರಯಾಣಕ್ಕಾಗಿ ಅತಿ ಹೆಚ್ಚು ಅಂದ್ರೆ $7 ಬಿಲಿಯನ್ ಖರ್ಚು ಮಾಡಲಾಗಿತ್ತು.
2022 ರ ಡಿಸೆಂಬರ್ ನಲ್ಲಿ ಭಾರತೀಯರು ಪ್ರಯಾಣಕ್ಕಾಗಿ $1.137 ಬಿಲಿಯನ್ ಖರ್ಚು ಮಾಡಿದ್ದಾರೆ ಎಂದು ಆರ್‌ಬಿಐ ಅಂಕಿಅಂಶಗಳು ತಿಳಿಸಿವೆ. ಶಿಕ್ಷಣ, ಉಡುಗೊರೆಗಳು ಮತ್ತು ಹೂಡಿಕೆಗಳಿಗೆ ಖರ್ಚು ಮಾಡಿದ ವಿದೇಶಿ ವಿನಿಮಯವೂ ಹೆಚ್ಚಾಗಿದೆ. ವಿದೇಶಕ್ಕೆ ಕಳುಹಿಸಲಾದ ಒಟ್ಟು ಹಣವು $19.354 ಬಿಲಿಯನ್ ಆಗಿದೆ. FY22 ರಲ್ಲಿ ಈ ವಿಭಾಗದಲ್ಲಿ ಇದುವರೆಗೆ $19.61 ಬಿಲಿಯನ್ ಆಗಿತ್ತು.