ಇನ್ನುಮುಂದೆ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾದ ಅವಶ್ಯಕತೆ ಇಲ್ಲ!

ಇನ್ನುಮುಂದೆ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾದ ಅವಶ್ಯಕತೆ ಇಲ್ಲ!

ಅನೇಕ ರಾಷ್ಟ್ರಗಳು ಈಗ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಥೈಲ್ಯಾಂಡ್, ಶ್ರೀಲಂಕಾ, ವಿಯೆಟ್ನಾಂ, ಮಲೇಷ್ಯಾ ಸೇರಿದಂತೆ ಸಾಕಷ್ಟು ದೇಶಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡಲು ಅವಕಾಶ ಮಾಡಿಕೊಡುತ್ತಿದೆ. ಪ್ರಸ್ತುತ ಆ ಸಾಲಿನಲ್ಲಿ ಇರಾನ್‌ ಕೂಡ ಸೇರಿದೆ.

ಹೌದು, ಇನ್ನು ಮುಂದೆ ಇರಾನ್ ಗೆ ಹೋಗಲು ಭಾರತೀಯರಿಗೆ ವೀಸಾ ಅವಶ್ಯಕತೆ ಇಲ್ಲ.. ಭಾರತೀಯ ನಾಗರಿಕರು ಸೇರಿದಂತೆ 32 ಇತರ ರಾಷ್ಟ್ರಗಳಿಗೆ ವೀಸಾ ಕಡ್ಡಾಯ ನೀತಿಯನ್ನು ಇರಾನ್ ಸರ್ಕಾರ ಮನ್ನಾ ಮಾಡಿದೆ. ಈ ಬಗ್ಗೆ ಸ್ವತಃ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಚಿವ ಎಜ್ಜತೊಲ್ಲಾಹ್ ಜರ್ಘಮಿ ಅವರು ಭಾರತದಿಂದ ಭೇಟಿ ನೀಡುವವರಿಗೆ ವೀಸಾ ಅವಶ್ಯಕತೆಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಇರಾನ್ ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಎಲ್ಲಿವರೆಗೆ? – ಬಿಸಿಸಿಐ ತೀರ್ಮಾನ ಏನು?

ಇರಾನ್‌ ಸರ್ಕಾರ ಪ್ರವಾಸೋದ್ಯಮ ಆಗಮನವನ್ನು ಹೆಚ್ಚಿಸುವ ಮತ್ತು ವಿಶ್ವದಾದ್ಯಂತದ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ. ಹೀಗಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇರಾನ್‌ನ ಹೊಸ ವೀಸಾ-ಮನ್ನಾ ಕಾರ್ಯಕ್ರಮಕ್ಕೆ ಅನುಮೋದಿಸಿದ 33 ದೇಶಗಳು ಯಾವುದೆಂದು ಪಟ್ಟಿ ಮಾಡಲಾಗಿದೆ. ಭಾರತ, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಕುವೈತ್, ಲೆಬನಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಟುನೀಶಿಯಾ, ಮಾರಿಟಾನಿಯಾ, ತಾಂಜೇನಿಯಾ, ಜಿಂಬಾಬ್ವೆ, ಮಾರಿಷಸ್, ಸೀಶೆಲ್ಸ್, ಇಂಡೋನೇಷ್ಯಾ, ದರುಸ್ಸಲಾಮ್, ಜಪಾನ್, ಸಿಂಗಾಪುರ, ಕಾಂಬೋಡಿಯಾ, ಮಲೇಷ್ಯಾ, ಬ್ರೆಜಿಲ್, ಪೆರು, ಕ್ಯೂಬಾ, ಮೆಕ್ಸಿಕೋ, ವೆನೆಜುವೆಲಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಸೆರ್ಬಿಯಾ, ಕ್ರೊಯೇಷಿಯಾ ಮತ್ತು ಬೆಲಾರಸ್ ಗೆ ಇರಾನ್‌ ಸರ್ಕಾರ ವೀಸಾ ಮುಕ್ತ ಪ್ರವೇಶ ಕಲ್ಪಿಸಿದೆ.

ಇದಕ್ಕೂ ಮೊದಲು ಇರಾನ್ ತುರ್ಕಿಯೆ, ರಿಪಬ್ಲಿಕ್ ಆಫ್ ಅಜರ್‌ಬೈಜಾನ್, ಓಮನ್, ಚೀನಾ, ಅರ್ಮೇನಿಯಾ, ಲೆಬನಾನ್ ಮತ್ತು ಸಿರಿಯಾದಿಂದ ಸಂದರ್ಶಕರಿಗೆ ವೀಸಾ ಮನ್ನಾ ಕಾರ್ಯಕ್ರಮಗಳನ್ನು ಹೊಂದಿತ್ತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಇರಾನ್ ವರ್ಷದ ಮೊದಲ ಎಂಟು ತಿಂಗಳಲ್ಲಿ (ಮಾರ್ಚ್ 21 ರಂದು ಪ್ರಾರಂಭವಾಯಿತು) ಇರಾನ್‌ಗೆ ವಿದೇಶಿ ಆಗಮನದ ಸಂಖ್ಯೆ 4.4 ಮಿಲಿಯನ್ ತಲುಪಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.48.5% ಹೆಚ್ಚಳವಾಗಿದೆ.

Shwetha M