ಟೀಂ ಇಂಡಿಯಾ ಪ್ಲೇಯರ್ ಬಾಳಲ್ಲಿ ಬಿರುಗಾಳಿ! – 26ನೇ ವಯಸ್ಸಲ್ಲೇ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಮತ್ತೊಬ್ಬ ಕ್ರಿಕೆಟಿಗ!

ಭಾರತೀಯ ಕ್ರಿಕೆಟ್‌ನಲ್ಲಿ ವಿಚ್ಛೇದನದ ಪರ್ವ ಮುಂದುವರೆದಿದೆ. ಶಿಖರ್ ಧವನ್, ಚಹಲ್, ಪಾಂಡ್ಯ ಸೇರಿದಂತೆ ಹಲವರು ಡಿವೋರ್ಸ್ ಪಡೆದಿದ್ರು. ಇದೀಗ ಮತ್ತೊಬ್ಬ ಕ್ರಿಕೆಟರ್ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಇದನ್ನೂ ಓದಿ: ಈ ಪಾನೀಯ ಕುಡಿದ್ರೆ ಮಂಜಿನಂತೆ ಕರಗುತ್ತೆ ಬೊಜ್ಜು! – ಈ ಡ್ರಿಂಕ್ಸ್‌ನಿಂದ ಎಷ್ಟೊಂದು ಪ್ರಯೋಜನ!
ಭಾರತೀಯ ಕ್ರಿಕೆಟ್‌ನ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಪತ್ನಿ ಇಶಾನಿ ಜೋಹರ್ ಜೊತೆಗಿನ 4 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಇಶಾನಿಗೆ ಹಾಗೂ ರಾಹುಲ್ ಡಿವೋರ್ಸ್ ಪಡೆದಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ರಾಹುಲ್, ನಾನು ನನ್ನ ಜೀವನ ಅರ್ಥ ಮಾಡಿಕೊಳ್ಳುವ ಮೊದಲೇ ಮದುವೆಯಾಗಿದ್ದೆ. ಆ ಬಳಿಕ ನಿರೀಕ್ಷಿಸದ ಪಾಠಗಳು ಎದುರಾಗಿತ್ತು. ಕೆಲವು ಸಂಬಂಧಗಳು ಶಾಶ್ವತವಾಗಿ ನಮ್ಮೊಂದಿಗೆ ಉಳಿಯದಿದ್ದರೂ ಕೂಡ ಆ ಸಂಬಂಧಗಳಿಂದ ಕಲಿತ ಪಾಠ ಎಂದಿಗೂ ನಮ್ಮೊಂದಿಗೆ ಇರುತ್ತದೆ. ನಾನು ಬುದ್ಧಿವಂತನಾಗಿ, ಹೆಚ್ಚು ಅರಿವಿನೊಂದಿಗೆ ಜೀವನ ಮುಂದುವರಿಸಲು ಇಷ್ಟಪಡುತ್ತೇನೆ. ಈಗ ಅಧಿಕೃತವಾಗಿ ಅಧ್ಯಾಯ ಕೊನೆಗೊಂಡಿದೆ ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಇಶಾನಿ ಜೊತೆ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಛೇದನ ಪಡೆದುಕೊಂಡಿದ್ದಾರೆ. ವಿಚ್ಚೇದನಕ್ಕೆ ಕಾರಣವೇನು ಎಂಬುದು ಬಹಿರಂಗಗೊಂಡಿಲ್ಲ.

ನೋಡಿರಿ

