ಭಾರತದ ಶ್ರೀಮಂತ ರಾಜ್ಯಗಳ್ಯಾವುವು? – ಇಂಡಿಯಾದ ‘ಮಹಾ’ ಶಕ್ತಿ ಕರುನಾಡು
ದೇಶಕ್ಕೆ ಕರ್ನಾಟಕದ ಕೊಡುಗೆಯೇನು?

ಭಾರತದ ಶ್ರೀಮಂತ ರಾಜ್ಯಗಳ್ಯಾವುವು? – ಇಂಡಿಯಾದ ‘ಮಹಾ’ ಶಕ್ತಿ ಕರುನಾಡುದೇಶಕ್ಕೆ ಕರ್ನಾಟಕದ ಕೊಡುಗೆಯೇನು?

ನಮ್ಮ ದೇಶ ನಮ್ಮ ನಮ್ಮ ಹೆಮ್ಮ.. ಜಗತ್ತಿಗೆ ನಮ್ಮ ದೇಶದ ಕೂಡುಗೆ ಸಾಕಷ್ಟಿದೆ.. ನಮ್ಮ ದೇಶ ಶ್ರೀಮಂತ ಸಂಸ್ಕತಿ ಹೊಂದಿದೆ, ವಿಭಿನ್ನ ಸಂಪ್ರದಾಯ, ವೈವಿಧ್ಯಮಯ ಸಮುದಾಯ, ಪಂಪರೆಯನ್ನ ಹೊಂದಿದೆ. ವಾಸ್ತು ಶಿಲ್ಪ, ಇತಿಹಾಸಕ್ಕೆ ಹೆಸರುವಾಗಿ.. ನಮ್ಮ ಭಾರತ ಪ್ರಪಂಚಕ್ಕೆ ಶಾಂತಿ, ಸಹನೆ, ಅಹಿಂಸೆ ತತ್ವಗಳನ್ನು ಪ್ರತಿಪಾದಿಸುವ ಬೀಡು. ನಾನಾ ರೀತಿಯ ಜನ,, ನಾನಾ ರೀತಿಯ ಸಂಸ್ಕೃತಿ , ಆಚರ ವಿಚಾರಗಳು.. ಹಲವು ಬಾಷೆಗಳ ಜೊತೆ ಬೆರತ ದೇಶದ ನಮ್ಮ ಭಾರತ.. ನಮ್ಮ ದೇಶದ ಒಂದೊಂದು ರಾಜ್ಯವು ಭಿನ್ನ, ವಿಭಿನ್ನ. ಹಾಗಿದ್ರೆ ಯಾವ್ಯಾವ ರಾಜ್ಯದ ಕೂಡುಗೆ ನಮ್ಮ ದೇಶಕ್ಕೆ ಹೆಚ್ಚಿದೆ? ಯಾವ ರಾಜ್ಯ ದೇಶೀಯ ಉತ್ಪನ್ನದ ವಿಷಯದಲ್ಲಿ ಮುಂದಿದೆ? ಯಾವ ರಾಜ್ಯ ಟಾಪ್‌ ಪಟ್ಟಿಯಲ್ಲಿವೆ ಅನ್ನೋ ಮಾಹಿತಿ ಇಲ್ಲಿದೆ.

ಭಾರತದ ಶ್ರೀಮಂತ ರಾಜ್ಯ ಮಹಾರಾಷ್ಟ್ರ

ಭಾರತದ ಶ್ರೀಮಂತ ರಾಜ್ಯ ಅಂದ್ರೆ ಮಹಾರಾಷ್ಟ್ರ. ರಾಜ್ಯದ ರಾಜಧಾನಿಯಾಗಿರುವ ಮುಂಬೈ ನಗರ ಹಣಕಾಸು ಕೇಂದ್ರವಾಗಿದ್ದು, ₹ 31 ಟ್ರಿಲಿಯನ್‌ಗಿಂತ ಹೆಚ್ಚಿನ GSDP ಒಳಗೊಂಡಿದೆ.

ದೇಶದ ಶಕ್ತಿ ಕೇಂದ್ರ ಮಹಾರಾಷ್ಟ್ರ

ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳಾದ ಮುಂಬೈ ಷೇರು  ಮಾರ್ಕೆಟ್‌, ಭಾರತೀಯ ರಿಸರ್ವ್ ಬ್ಯಾಂಕ್, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಒಳಗೊಂಡಂತೆ ದೊಡ್ಡ ದೊಡ್ಡ ಕಂಪನಿಗಳಾದ ಟಾಟಾ, ಗೋದ್ರೇಜ್, ರಿಲಯನ್ಸ್ ಸಂಸ್ಥೆಗಳ ಮುಖ್ಯ ಕಚೇರಿಗಳಿವೆ. ಅಷ್ಟೇ ಅಲ್ಲ ವಿದೇಶಿ ಬ್ಯಾಂಕುಗಳ ಶಾಖೆಗಳು ಮುಂಬೈನಲ್ಲಿವೆ. ಉತ್ಪಾದನಾ ಕ್ಷೇತ್ರಗಳಲ್ಲೂ ಮಹಾರಾಷ್ಟ್ರ ಮೇಲುಗೈ ಸಾಧಿಸಿದ್ದು, ವಾಹನ, ತಂತ್ರಜ್ಞಾನ ಮತ್ತು ಗ್ರಾಹಕ ಸರಕುಗಳ ಕ್ಷೇತ್ರಗಳನ್ನು ಒಳಗೊಂಡಿರುವ  ಕೈಗಾರಿಕಾ ನೆಲೆಯನ್ನು ಹೊಂದಿದೆ. ಇಲ್ಲಿನ ಸಾಂಸ್ಕೃತಿಕ ಕೊಡುಗೆಗಳು ಅಪಾರವಾಗಿದ್ದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿ.

ಉತ್ವಾದನಾ ವಲಯದಲ್ಲಿ ತಮಿಳುನಾಡು ಹೆಸರುವಾಸಿ

ತಮಿಳುನಾಡು ದಕ್ಷಿಣ ರಾಜ್ಯಗಳಲ್ಲಿ ಒಂದು. ಭವ್ಯ ಪರಂಪರೆಯನ್ನು ಸಾರುವ ತಮಿಳುನಾಡಲ್ಲಿ ಉತ್ಪಾದನಾ ವಲಯದಲ್ಲಿ ಹೆಸರು ಮಾಡಿದೆ. ತಮಿಳು ನಾಡಿನ GDPS 31.55 ಕೋಟಿಯಿದೆ.

ತಮಿಳುನಾಡಿನ ಸಾಧನೆ

ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜವಳಿ ವ್ಯಾಪಾರ, ಉಡುಪು-ಬಟ್ಟೆಗಳ ಉದ್ಯಮಕ್ಕೆ ಪ್ರಖ್ಯಾತ ಪಡೆದಿದೆ. ಆಟೋಮೋಟಿವ್ ಉದ್ಯಮವು  ಜಾಗತಿಕ ಮಟ್ಟದಲ್ಲಿ ಕೂಡುಗೆ ನೀಡಿದೆ. ದೇಶೀಯ ಆಟಗಾರರಿಂದಲೂ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಗಣನೀಯ ದಾಪುಗಾಲು ಇಟ್ಟಿರುವ ತಮಿಳುನಾಡು, ಪ್ರಪಂಚದಾದ್ಯಂತ ಹೂಡಿಕೆಗಳನ್ನು ಮಾಡಿದೆ. ಹಾಗೇ ರಾಜ್ಯದ ಪ್ರತಿಭಾವಂತರ ಸಾಧನೆಯಿಂದ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ.

ಭಾರತದ 3ನೇ ಶ್ರೀಮಂತ ರಾಜ್ಯ ಕರುನಾಡು

ಕರ್ನಾಟಕ ರಾಜ್ಯ 28.09 ಲಕ್ಷ ಕೋಟಿ ಜಿಎಸ್‌ಡಿಪಿಯು  ಹೊಂದಿದೆ. ಬೆಂಗಳೂರಿನಲ್ಲಿರುವ ಐಟಿ-ಬಿಟಿ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಐಟಿ ಸಂಸ್ಥೆಗಳು, ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿ ಹೆಚ್ಚಿದ್ದು, ಆರ್ಥಿಕತೆ ಅಭಿವೃದ್ಧಿಗೆ ಸಹಾಯ ಮಾಡುತ್ತಿದೆ. ಆವಿಷ್ಕಾರ ಮತ್ತು ತಾಂತ್ರಿಕ ಪ್ರಗತಿಯು ಅಭಿವೃದ್ಧಿಯತ್ತ ಸಾಗುತ್ತಿದೆ. ಜೈವಿಕ ತಂತ್ರಜ್ಞಾನ ಉದ್ಯಮವು ಸಹ ಕರ್ನಾಟಕಕ್ಕೆ ಪ್ಲೆಸ್ ಆಗಿದೆ. ಭಾರತವು ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ.

ಗುಜರಾತ್‌ಗೆ ಬಲ ತುಂಬಿದ ಸರ್ದಾರ್ ಸರೋವರ ಅಣೆಕಟ್ಟು

ಗುಜರಾತ್ ಪ್ರಮುಖ ಕೈಗಾರಿಕೆಗಳನ್ನು ಒಳಗೊಂಡ ರಾಜ್ಯ  27.9 ಲಕ್ಷ ಕೋಟಿ GSDP ಹೊಂದಿದೆ.  ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಕೆಮಿಕಲ್ ಮತ್ತು ಔಷಧೀಯ ಕ್ಷೇತ್ರಗಳಿಗೆ ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಗುಜರಾತಿನ ಕೈಗಾರಿಕಾ ವಲಯಗಳು, ಉತ್ಪಾದನಾ, ರಫ್ತು, ಹೂಡಿಕೆಗಳು ದೇಶದ ಆರ್ಥಿಕತೆಯ ಭಾಗವಾಗಿದೆ. ಸರ್ದಾರ್ ಸರೋವರ ಅಣೆಕಟ್ಟಿನಿಂದ ಕೃಷಿ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುತ್ತಿದ್ದು, ರಾಜ್ಯದ ಆಹಾರ ಭದ್ರತೆ ಮತ್ತು ಗ್ರಾಮೀಣ ಆರ್ಥಿಕತೆಗೆ ಆಧಾರವಾಗಿದೆ.

ಕೃಷಿ ಕ್ಷೇತ್ರದಲ್ಲಿ ಉತ್ತರಪ್ರದೇಶ ಕಮಾಲ್

ಉತ್ತರ ಪ್ರದೇಶವು ರಾಷ್ಟ್ರದ ಕೃಷಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸುಮಾರು 24.99 ಲಕ್ಷ ಕೋಟಿ GSDP ಹೊಂದಿದ್ದು, ಆಹಾರ ಧಾನ್ಯಗಳಿಂದ ಭಾರತದ ಆಹಾರ ಭದ್ರತೆಗೆ ಅಪಾರ ಕೊಡಗೆ ನೀಡಿದೆ. ಗಂಗಾ ತೀರದ ಪ್ರದೇಶಗಳಲ್ಲಿ ಬೆಳೆಯುವ ಗೋಧಿ, ಅಕ್ಕಿ, ಕಬ್ಬು, ಆಲೂಗಡ್ಡೆ ಸೇರಿದಂತೆ ಹಲವು ಬೆಳೆಗಳಿಂದ ಉತ್ತರ ಪ್ರದೇಶ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಸೇವಾ ವಲಯ, ಪ್ರವಾಸೋದ್ಯಮ, ಐಟಿ ಆರ್ಥಿಕ ವಲಯಕ್ಕೆ ಮತ್ತಷ್ಟು ಬಲ ನೀಡಿವೆ.

ಸಂಪ್ರದಾಯ & ಆಧುನಿಕತೆಯ ವಿಶಿಷ್ಟ ಮಿಶ್ರಣ ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಆರ್ಥಿಕತೆಯು ₹ 13 ಟ್ರಿಲಿಯನ್ಗಿಂತ ಹೆಚ್ಚಿನ GSDP ಯೊಂದಿಗೆ, ಸಾಂಸ್ಕೃತಿಕ ಪರಂಪರೆ ಮತ್ತು ಕಾರ್ಯತಂತ್ರದ ವ್ಯಾಪಾರಗಳಿಗೆ ಆದ್ಯತೆ ಹೊಂದಿದೆ. ರಾಜ್ಯದ ರಾಜಧಾನಿಯಾಗಿರುವ ಕೊಲ್ಕತ್ತಾದಲ್ಲಿ ಐತಿಹಾಸಿಕ ವ್ಯಾಪಾರ ಬಂದರು, ವಾಣಿಜ್ಯ ಕೇಂದ್ರಗಳು ಪ್ರಮುಖವಾಗಿದೆ. ಸಾಂಸ್ಕತಿಕ ಕೇಂದ್ರವಾಗಿರುವ ಕೊಲ್ಕತ್ತಾ ಬ್ರಿಟಿಷರು ರಾಜಧಾನಿಯಾಗಿಟ್ಟುಕೊಂಡಿದ್ದಾಗ ವಾಸ್ತುಶಿಲ್ಪ, ಕಲೆಗಳ ಗುರುತುಗಳು ಇಲ್ಲಿ ನೋಡಬಹುದಾಗಿದೆ. ಐತಿಹಾಸಿಕ ಸ್ಥಳಗಳ ಜೊತೆಗೆ ಜೂಟ್, ಟೀ, ಸ್ಟೀಲ್, ಟೆಕ್ಸ್ ಟೈಲ್ಸ್ ಸೇರಿದಂತೆ ಹಲವು ಉದ್ಯಮಗಳು ಹೆಸರುವಾಸಿಯಾಗಿದೆ. ಪಶ್ಚಿಮ ಬಂಗಾಳವು ಸಂಪ್ರದಾಯ ಮತ್ತು ಆಧುನಿಕತೆಯ ವಿಶಿಷ್ಟ ಮಿಶ್ರಣವಾಗಿದ್ದು, ರಾಜ್ಯದ ಬೆಳವಣಿಗೆ ಗಮನ ಸೆಳೆಯುತ್ತದೆ.

ದಕ್ಷಿಣ ರಾಜ್ಯವಾಗಿರುವ ಆಂಧ್ರಪ್ರದೇಶ ₹ 11.3 ಟ್ರಿಲಿಯನ್ನ GSDP ಯಿಂದ ಗುರುತಿಸಲ್ಪಟ್ಟಿದೆ. ರಾಜ್ಯದಲ್ಲಿನ ವಿವಿಧ ಕ್ಷೇತ್ರಗಳ ಬೆಳವಣಿಗೆ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದೆ. ರಾಜಧಾನಿ ಅಮರಾವತಿಯಲ್ಲಿ ಜಾಗತಿಕ ಐಟಿ ಕಂಪನಿಗಳು, ಸಂಸ್ಥೆಗಳು ಹೆಚ್ಚಾಗಿದೆ. ಉನ್ನತ-ಬೆಳವಣಿಗೆಯ ಕೈಗಾರಿಕೆಗಳು, ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಉತ್ತಮ ಕ್ಷೇತ್ರಗಳಲ್ಲಿನ ಉದ್ಯೋಗಗಳಿಂದ ಉಜ್ವಲ ಆರ್ಥಿಕ ಭವಿಷ್ಯದೊಂದಿಗೆ ಆಂಧ್ರಪ್ರದೇಶ ಮುನ್ನುಗುತ್ತಿದೆ.

Shwetha M