2030ಕ್ಕೆ ಭಾರತದಲ್ಲಿ ವಿಶ್ವದ ಅತಿದೊಡ್ಡ “ಹಸಿರು ರೈಲ್ವೆ”

2030ಕ್ಕೆ ಭಾರತದಲ್ಲಿ ವಿಶ್ವದ ಅತಿದೊಡ್ಡ “ಹಸಿರು ರೈಲ್ವೆ”

ನವದೆಹಲಿ: 2030ರ ಒಳಗೆ ಭಾರತೀಯ ರೈಲ್ವೆ, ‘ಹಸಿರು ರೈಲ್ವೆ’ಯಾಗಿ ಪರಿವರ್ತನೆ ಹೊಂದುವ ಮೂಲಕ ‘ಶೂನ್ಯ ಕಾರ್ಬನ್ ಉಗುಳುವಿಕೆ’ ಗುರಿಯನ್ನು ಸಾಧಿಸುತ್ತ ಮುಂದಾಗಿದೆ. ಇದಕ್ಕಾಗಿ ಭಾರತೀಯ ರೈಲ್ವೆಯು ಇಡೀ ಬ್ರಾಡ್​ಗೇಜ್ ಜಾಲವನ್ನು ವಿದ್ಯುದೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, 2030ರ ವೇಳೆಗೆ ವಿಶ್ವದ ಅತಿದೊಡ್ಡ ‘ಹಸಿರು ರೈಲ್ವೆ’ ಜಾಲವಾಗಿ ಗುರುತಿಸಿಕೊಳ್ಳಲಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು. ಮಾಲಿನ್ಯರಹಿತ ಇಂಧನ ದಕ್ಷತೆ ಹೆಚ್ಚಿಸುವತ್ತ ಇಲಾಖೆ ಗಮನಹರಿಸಿದೆ. ಈಗಾಗಲೇ ತನ್ನ ವಿದ್ಯುದೀಕರಣಗೊಂಡ ಜಾಲವನ್ನು ಶೇಕಡಾ 83ಕ್ಕೆ ವಿಸ್ತರಣೆ ಮಾಡಿದೆ. 2014ರ ನಂತರ ಈವರೆಗೆ 32,0000 ರೂಟ್ ಕಿಲೋಮೀಟರ್​ಗಳ ಹಳಿಗಳನ್ನು ವಿದ್ಯುದೀಕರಣ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:2023 ರ ಡಿಸೆಂಬರ್ ನಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ  ಪ್ರಾರಂಭ!

2030ರ ಒಳಗೆ ‘ಹಸಿರು ರೈಲ್ವೆ’ಯಾಗಿ ಪರಿವರ್ತನೆ ಹೊಂದುವ ಮೂಲಕ ಶೂನ್ಯ ಕಾರ್ಬನ್ ಉಗುಳುವಿಕೆ ಗುರಿಯನ್ನು ಸಾಧಿಸುವುದು ರೈಲ್ವೆ ಇಲಾಖೆಯ ಗುರಿಯಾಗಿದೆ ಎಂದು ವರದಿ ಮಾಡಿದೆ.

2022-23ರಲ್ಲಿ 1,973 ರೂಟ್ ಕಿಲೋಮೀಟರ್​ ಹಳಿ ವಿದ್ಯುದೀಕರಣಗೊಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 41ರ ಪ್ರಗತಿ ಸಾಧಿಸಲಾಗಿದೆ. ಪೂರ್ವ ಕರಾವಳಿ ರೈಲ್ವೆ, ದಕ್ಷಿಣ ಪೂರ್ವ ರೈಲ್ವೆ, ಪಶ್ಚಿಮ ರೈಲ್ವೆ, ಪೂರ್ವ ರೈಲ್ವೆ ಮತ್ತು ಉತ್ತರ ಕೇಂದ್ರ ರೈಲ್ವೆ ವಿಭಾಗಗಳು ಸಂಪೂರ್ಣ ವಿದ್ಯುದೀಕರಣಗೊಂಡಿವೆ. ಇದಕ್ಕೆ ಪೂರಕವಾಗಿ 1,161 ಕಿಲೋಮೀಟರ್ ದ್ವಿಗುಣ ಹಳಿ ವಿದ್ಯುದೀಕರಣ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2021-22ರಲ್ಲಿ 6,366 ರೂಟ್ ಕಿಲೋಮೀಟರ್ ಹಳಿಯನ್ನು ವಿದ್ಯುದೀಕರಣಗೊಳಿಸಲಾಗಿತ್ತು. 2020-21ರಲ್ಲಿ 6,015 ರೂಟ್ ಕಿಲೋಮೀಟರ್ ಹಳಿಯನ್ನು ವಿದ್ಯುದೀಕರಣಗೊಳಿಸಲಾಗಿತ್ತು. ಇದರ ಹೊರತಾಗಿ, ನವದೆಹಲಿ – ಕಠ್​ಗೋಡಂ, ನವದೆಹಲಿ – ಸಮ್​​ಖಿಯಲಿ, ಚೆನ್ನೈ – ಕನ್ಯಾಕುಮಾರಿ ನಡುವಣ ಹಳಿಗಳಲ್ಲಿ ತಡೆರಹಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

suddiyaana