ರೈಲ್ವೇ ಪ್ರಯಾಣಿಕರಿಗೆ ಬಿಗ್‌ಶಾಕ್! – ಇನ್ಮುಂದೆ ರೈಲ್ವೇ ಟಿಕೆಟ್ ಬುಕಿಂಗ್‌ಗೆ ಆಧಾರ್ ಲಿಂಕ್ ಕಡ್ಡಾಯ!

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಹೊಸ ರೂಲ್ಸ್ ಜಾರಿ ಮಾಡಿದೆ. ಇನ್ನುಮುಂದೆ ರೈಲು ಟಿಕೆಟ್ ಬುಕ್ ಮಾಡುವಾಗ ದಾಖಲೆಗಳನ್ನ ಕಡ್ಡಾಯವಾಗಿ ನೀಡಲೇಬೇಕು.
ಇದನ್ನೂ ಓದಿ: ಅಶ್ವಿನಿ ಮುಖ, ಕಿವಿಗೆ ನೀರು ಎರಚಿದ ರಾಶಿಕಾ! – ಟಾಸ್ಕ್ ವೇಳೆ ರಾಶಿಕಾ ಮಾನವೀಯತೆ ಮರೆತ್ರಾ?
ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಟಿಕೆಟ್ ದಲ್ಲಾಳಿಗಳನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಐಆರ್‌ಸಿಟಿಸಿ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ, ರೈಲ್ವೇ ಟಿಕೆಟ್ ಕಾಯ್ದಿರಿಸಲು ಸಮಸ್ಯೆಯಾಗಲಿದೆ. ಈ ನಿಯಮವನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತ 2025ರ ಡಿ.29ರಂದು ಜಾರಿಯಾಗಿತ್ತು. ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಕೇವಲ ಆಧಾರ್ ಲಿಂಕ್ ಮಾಡಿದ ಖಾತೆಗಳಿಂದಲೇ ಬುಕಿಂಗ್ ಮಾಡಲು ಸಾಧ್ಯ. ಲಿಂಕ್ ಇಲ್ಲದವರು ಮಧ್ಯಾಹ್ನ 12 ಗಂಟೆ ನಂತರ ಬುಕ್ ಮಾಡಬಹುದಾಗಿದೆ.
ಇನ್ನೂ ಎರಡನೇ ಹಂತ ಜ.5 ಜಾರಿಯಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೇವಲ ಆಧಾರ್ ಲಿಂಕ್ ಆಗಿರುವ ಖಾತೆಗಳಿಂದ ಮಾತ್ರ ಬುಕಿಂಗ್ ಮಾಡಲು ಸಾಧ್ಯ. ಲಿಂಕ್ ಇಲ್ಲದವರು ಸಂಜೆ 4 ಗಂಟೆ ನಂತರ ಮಾತ್ರ ಬುಕ್ ಮಾಡಬಹುದು. ಮೂರನೇ ಹಂತ ಜ.12ರಿಂದ ಜಾರಿಯಾಗಲಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ (ಅಂದರೆ ಇಡೀ ದಿನ) ಕೇವಲ ಆಧಾರ್ ಲಿಂಕ್ ಮಾಡಿದ ಖಾತೆಗಳಿಂದಲೇ ಆನ್‌ಲೈನ್ ಬುಕಿಂಗ್ ಮಾಡಲು ಅವಕಾಶವಿರುತ್ತದೆ.
ಈ ನಿಯಮ ಕೇವಲ ಆನ್‌ಲೈನ್ ಬುಕಿಂಗ್‌ಗೆ ಅಂದರೆ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆಪ್‌ಗೆ ಅನ್ವಯಿಸುತ್ತದೆ. ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸುವುದಕ್ಕೆ ಯಾವುದೇ ಬದಲಾವಣೆ ಇಲ್ಲ. ಟಿಕೆಟ್ ದಲ್ಲಾಳಿಗಳು ಮತ್ತು ಫೇಕ್ ಖಾತೆಗಳ ಮೂಲಕ ಬೃಹತ್ ಬುಕಿಂಗ್ ಮಾಡುವುದನ್ನು ತಡೆಯಬಹುದು. ಹೀಗಾಗಿ ಇದರಿಂದ ನಿಜವಾದ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಪಡೆಯುವ ಅವಕಾಶ ಹೆಚ್ಚಾಗುತ್ತದೆ.
ಹೊಸ ನಿಯಮದಲ್ಲಿ ಏನೇನಿದೆ?
- ಹೊಸ ನಿಯಮಗಳು ರೈಲ್ವೆ ಕೌಂಟರ್‌ಗಳಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ
- ತಮ್ಮ ಆಧಾರ್ ಅನ್ನು IRCTC ಖಾತೆಯೊಂದಿಗೆ ಲಿಂಕ್ ಮಾಡದ ಬಳಕೆದಾರರಿಗೆ ಆರಂಭಿಕ ಆದ್ಯತೆಯ ಬುಕಿಂಗ್ ವಿಂಡೋದಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗುವುದಿಲ್ಲ .
- ಆಧಾರ್ ಲಿಂಕ್ ಮಾಡಲು, IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಮಾಡಿ , ‘ ಪ್ರೊಫೈಲ್’ ವಿಭಾಗಕ್ಕೆ ಹೋಗಿ ಮತ್ತು ಆಧಾರ್ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಟಿಕೆಟ್ ಕೌಂಟರ್‌ಗಳಲ್ಲಿಯೂ ಸಹ OTP ಪರಿಶೀಲನೆ ಕಡ್ಡಾಯವಾಗಿದೆ . ಬುಕಿಂಗ್ ಅನ್ನು ಖಚಿತಪಡಿಸಲು ನಿಮ್ಮ ಫೋನ್‌ಗೆ OTP ಕಳುಹಿಸಲಾಗುವುದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.
- ಯಾವುದೇ ಬುಕಿಂಗ್ ಅಥವಾ ಒಟಿಪಿ ಸಂಬಂಧಿತ ಸಮಸ್ಯೆಗಳಿದ್ದಲ್ಲಿ, ಪ್ರಯಾಣಿಕರು ದೂರು ದಾಖಲಿಸಲು ಐಆರ್‌ಸಿಟಿಸಿ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು.
ಹೊಸ ನಿಯಮ ಎಲ್ಲಿ ಅನ್ವಯವಾಗುತ್ತದೆ?
ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕಕ್ಕಿಂತ ಮುಂಚಿತವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದಾಗ, ಅದು ಮುಂಗಡ ಕಾಯ್ದಿರಿಸುವಿಕೆ ಅವಧಿ (ARP) ಅಡಿಯಲ್ಲಿ ಬರುತ್ತದೆ . ಈ ಹಿಂದೆ ಭಾರತೀಯ ರೈಲ್ವೆ ಇಲಾಖೆ, ರೈಲು ಹೊರಡುವ 120 ದಿನಗಳ ಮೊದಲು ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಿತ್ತು. ನವೆಂಬರ್ 2024ರಲ್ಲಿ, ಈ ಅವಧಿಯನ್ನು 60 ದಿನಗಳಿಗೆ ಇಳಿಸಲಾಯಿತು . ಇದರರ್ಥ ಪ್ರಯಾಣಿಕರು ರೈಲು ಹೊರಡುವ ದಿನಾಂಕಕ್ಕಿಂತ ನಿಖರವಾಗಿ 60 ದಿನಗಳ ಮೊದಲು ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಬಹುದು . ಇದೀಗ ಹೊಸ ನಿಯಮದ ಪ್ರಕಾರ, ಭಾರತೀಯ ರೈಲ್ವೆಯು ಆಧಾರ್-ಲಿಂಕ್ ಮಾಡಲಾದ ಗರಿಷ್ಠ IRCTC ಬಳಕೆದಾರರು ಮೊದಲ ದಿನವೇ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ.

ನೋಡಿರಿ

