IPL ಪವರ್ ಗೆ PSL ಪಂಕ್ಚರ್ – ಲೀಗ್ ನೇ ಎತ್ತಂಗಡಿ ಮಾಡುತ್ತಾ PAK?
ಠಕ್ಕರ್ ಅಲ್ಲ ಠುಸ್ ಪಟಾಕಿ ಆಗಿದ್ದೇಗೆ?

IPL ಪವರ್ ಗೆ PSL ಪಂಕ್ಚರ್ – ಲೀಗ್ ನೇ ಎತ್ತಂಗಡಿ ಮಾಡುತ್ತಾ PAK?ಠಕ್ಕರ್ ಅಲ್ಲ ಠುಸ್ ಪಟಾಕಿ ಆಗಿದ್ದೇಗೆ?

ಜಗತ್ತಿನ ಅತೀ ಶ್ರೀಮಂತ ಲೀಗ್ ಆಗಿರುವಂಥ ಐಪಿಎಲ್​​ಗೆ ಜಗತ್ತಿನ ಯಾವುದೇ ಲೀಗ್​ಗಳೂ ಫೈಟ್ ಕೊಡೋಕೂ ಆಗಲ್ಲ. ಇದು ಗೊತ್ತಿದ್ರೂ ಪಾಕಿಸ್ತಾನ ಮಾತ್ರ ಐಪಿಎಲ್​ಗಿಂತ್ಲೂ ನಮ್ಮ ಪಿಎಸ್​​ಎಲ್ ಗ್ರೇಟ್ ಅಂತಾ ಆಗಾಗ ಬಡಾಯಿ ಕೊಚ್ಚಿಕೊಳ್ತಿರುತ್ತೆ. ಆದ್ರೀಗ ಅದೇ ಐಪಿಎಲ್​ ಅಬ್ಬರದ ನಡುವೆ ತಮ್ಮ ಪಿಎಸ್​ಎಲ್​ನ ಉಳಿಸಿಕೊಳ್ಳೋಕೆ ಶೆಡ್ಯೂಲ್​​ನೇ ಚೇಂಜ್ ಮಾಡೋ ಸ್ಥಿತಿಗೆ ಬಂದಿದ್ದಾರೆ.

ಇದನ್ನೂ ಓದಿ :  2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅದ್ಧೂರಿ ತೆರೆ – 13 ಚಿನ್ನದ ಪದಕ ಸೇರಿ 39 ಪದಕ ಗೆದ್ದ ಭಾರತ

ಎಲ್ಲಿಯ ಐಪಿಎಲ್​.. ಎಲ್ಲಿಯ ಪಿಎಸ್​ಎಲ್.. ಆಟಗಾರರ ಸಂಭಾವನೆ ವಿಚಾರದಲ್ಲಾಗ್ಲಿ ಅಥವಾ ಪ್ರಾಫಿಟ್​ನಲ್ಲಾಗ್ಲಿ, ಬ್ಯುಸಿನೆಸ್​ನಲ್ಲಾಗ್ಲಿ, ವ್ಯೂವರ್​ಶಿಪ್​ನಲ್ಲಾಗ್ಲಿ. ಭಾರತದ ಹತ್ತಿರಕ್ಕೂ ಸುಳಿಸೋಕೂ ಪಾಕಿಸ್ತಾನಕ್ಕೆ ಸಾಧ್ಯನೇ ಇಲ್ಲ. ಌಂಡ್ ವಿದೇಶಿ ಸ್ಟಾರ್ ಪ್ಲೇಯರ್​ಗಳ ಫಸ್ಟ್ ಪ್ರಿಯಾರಿಟಿ ಕೂಡ ಐಪಿಎಲ್ಲೇ ಆಗಿರುತ್ತೆ. ಸೋ ಯಾವ ವಿಚಾರದಲ್ಲೂ ಐಪಿಎಲ್​ಗೆ ಫೈಟ್ ಕೊಡೋಕೆ ಆಗಲ್ಲ ಅನ್ನೋದನ್ನ ತಿಳ್ಕೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಅತಿದೊಡ್ಡ ಬದಲಾವಣೆಗೆ ಮುಂದಾಗಿದೆ.

ಐಪಿಎಲ್ ಜೊತೆ ಕ್ಲಾಶ್ ತಪ್ಪಿಸಲು ಪಿಎಸ್ ಎಲ್ ಶೆಡ್ಯೂಲ್ ಬದಲಾವಣೆ!

ಇಂಡಿಯನ್ ಪ್ರೀಮಿಯರ್ ಲೀಗ್ ಜೊತೆಗಿನ ಕ್ಲಾಶ್ ತಪ್ಪಿಸೋಕೆ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಮತ್ತೆ ಫೆಬ್ರವರಿ-ಮಾರ್ಚ್ ಟೈಮ್​ಗೆ ಶಿಫ್ಟ್ ಮಾಡೋಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ಲ್ಯಾನ್ ಮಾಡಿದೆ. ವಿದೇಶಿ ಸ್ಟಾರ್ ಆಟಗಾರರನ್ನ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯೋಕೆ ಈ ಪ್ಲ್ಯಾನ್ ಮಾಡಿದೆ. ಲಾಹೋರ್‌ನಲ್ಲಿ ಪಿಸಿಬಿ ಅಧಿಕಾರಿಗಳು ಮತ್ತು ಫ್ರಾಂಚೈಸ್ ಮಾಲೀಕರ ನಡುವಿನ ಇತ್ತೀಚಿನ ಸಭೆಯಲ್ಲಿ ಐಪಿಎಲ್, ಪಿಎಸ್​ಎಲ್ ನಡುವಿನ ವೇಳಾಪಟ್ಟಿಯಿಂದ ಏನೆಲ್ಲಾ ಸಮಸ್ಯೆಗಳು ಆಗ್ತಾ ಇದೆ ಅನ್ನೋ ಬಗ್ಗೆ ಫ್ರಾಂಚೈಸಿಗಳು ಧ್ವನಿ ಎತ್ತಿವೆ. ಹೀಗಾಗಿ 2027 ರ ಪಿಎಸ್‌ಎಲ್ ಆವೃತ್ತಿಗೆ ಎರಡು ಸಂಭಾವ್ಯ ಅವಧಿಗಳ ಬಗ್ಗೆ ಚರ್ಚಿಸಲಾಗಿದೆ. ಬಟ್ ಪಿಸಿಬಿ ಇನ್ನೂ ಕೂಡ ಫೈನಲ್ ಡಿಸಿಷನ್ ತಗೊಂಡಿಲ್ಲ. ಪಿಎಸ್‌ಎಲ್‌ನ ಕೊನೆಯ ಎರಡು ಆವೃತ್ತಿಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದಿದ್ವು. ಭಾರತದ ಪ್ರೀಮಿಯರ್ ಟಿ20 ಲೀಗ್ ಮಾರ್ಚ್-ಮೇವರೆಗೆ ನಡೆಯುತ್ತೆ. ಸೋ ಐಪಿಎಲ್​ಗೆ ಠಕ್ಕರ್ ಕೊಡ್ಬೇಕು ಅಂತಾ ಐಪಿಎಲ್‌ನೊಂದಿಗೆ ನೇರ ಸ್ಪರ್ಧೆಗೆ ಇಳಿದಿದ್ರು. ಆದ್ರೆ ಐಪಿಎಲ್ ಮುಂದೆ ಪಿಎಸ್​ಎಲ್ ಇದ್ದೂ ಇಲ್ಲದಂತಾಗಿತ್ತು. ಹೀಗಾಗಿ ಐಪಿಎಲ್​ಗೂ ಮೊದ್ಲೇ ಪಿಎಸ್​ಎಲ್ ಆಯೋಜನೆ ಪ್ಲ್ಯಾನ್ ಇದೆ. ಆದ್ರೆ ಅದು ಕೂಡ ಸುಲಭ ಇಲ್ಲ.

ಶೆಡ್ಯೂಲ್ ಬದಲಿಸಿದ್ರೆ ಬೇರೆ ಲೀಗ್ ಗಳ ಜೊತೆ ಸಂಘರ್ಷ!

ಪಾಕಿಸ್ತಾನ ಈಗ ಐಪಿಎಲ್ ಜೊತೆಗಿನ ಸಮರದಿಂದ ಹಿಂದೆ ಸರಿಯೋಕೆ ಏಪ್ರಿಲ್, ಮೇನಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಆಯೋಜನೆಗೆ ಚಿಂತನೆ ಮಾಡ್ತಿದೆ. ಇದ್ರಿಂದಾಗಿ ಲಾಭ ಏನಂದ್ರೆ ಪಿಎಸ್‌ಎಲ್ ನಲ್ಲಿ ಭಾಗಿಯಾಗಲು ಓವರ್ ಸೀಸ್ ಪ್ಲೇಯರ್​ಗಳಿಗೆ ಅನುವು ಮಾಡಿಕೊಡುತ್ತೆ. ಐಪಿಎಲ್​, ಪಿಎಸ್​ಎಲ್ ಒಂದೇ ಟೈಮಲ್ಲಿ ನಡೆದ್ರೆ ಎಲ್ಲರ ಪ್ರಿಯಾರಿಟಿ ಐಪಿಎಲ್ ಆಗಿರುತ್ತೆ. ಯಾಕಂದ್ರೆ ಇಲ್ಲಿ ಸ್ಟಾರ್ ಆಟಗಾರರಿಗೆ ಅಲ್ಲಿನ ರಾಷ್ಟ್ರೀಯ ತಂಡಗಳೂ ನೀಡದಷ್ಟು ಸಂಭಾವನೆಯನ್ನ ಕೇವಲ ಮೂರು ತಿಂಗಳಿಗೆ ಐಪಿಎಲ್​ ಫ್ರಾಂಚೈಸಿಗಳು ನೀಡುತ್ವೆ. ಕೋಟಿಗಟ್ಟಲೆ ಹಣ ಜೇಬಿಗಿಳಿಸಿಕೊಳ್ತಾರೆ. ಹಾಗೇ ಭದ್ರತೆ ವಿಚಾರದಲ್ಲೂ ಭಾರತ ಸೇಫೆಕ್ಟ್ ಕಂಟ್ರಿ.. ಆದ್ರೆ ಪಾಕಿಸ್ತಾನದಲ್ಲಿ ಯಾವಾಗ ಏನಾಗುತ್ತೋ ಗೊತ್ತಾಗಲ್ಲ. ಹೀಗಾಗಿ ಐಪಿಎಲ್​ಗೂ ಮೊದಲೇ ಪಿಎಸ್ಎಲ್ ನಡೆದ್ರೆ ವಿದೇಶಿ ಸ್ಟಾರ್ ಆಟಗಾರರು ಬರ್ತಾರೆ ಅನ್ನೋ ಲೆಕ್ಕಾಚಾರ ಪಾಕಿಸ್ತಾನದ್ದು. ವ್ಯೂವರ್​ಶಿಪ್ ಜಾಸ್ತಿಯಾಗುತ್ತೆ, ಬ್ಯುಸಿನೆಸ್ ಕೂಡ ಇಂಪ್ರೂ ಆಗುತ್ತೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ ದಿನಾಂಕ ಬದಲಾವಣೆ ಹಿಂದೆ ಸವಾಲೂಗಳೂ ಇವೆ.  ಫೆಬ್ರವರಿ-ಮಾರ್ಚ್ ವೇಳಾಪಟ್ಟಿಯು ಜಾಗತಿಕ ಕ್ಯಾಲೆಂಡರ್‌ನಲ್ಲಿರುವ ಇತರ ಫ್ರಾಂಚೈಸ್ ಪಂದ್ಯಾವಳಿಗಳೊಂದಿಗೆ ಹಾಗೇ ರಂಜಾನ್ ತಿಂಗಳೊಂದಿಗೆ ಕ್ಲಾಶ್ ಆಗ್ಬೋದು. ಅಷ್ಟೇ ಅಲ್ಲದೆ ಪಾಕಿಸ್ತಾನದಲ್ಲಿ ತೀವ್ರ ಬೇಸಿಗೆ ತಿಂಗಳುಗಳಲ್ಲಿ ಪಂದ್ಯಾವಳಿಯನ್ನು ನಡೆಸುವುದು ಸೂಕ್ತವಲ್ಲ ಅನ್ನೋ ಅಭಿಪ್ರಾಯವೂ ಇದೆ. ಒಟ್ನಲ್ಲಿ ಐಪಿಎಲ್​​ ಜೊತೆ ಕಾಂಪಿಟೇಷನ್ ಮಾಡೋಕೆ ಆಗಲ್ಲ. ಹಾಗಂತ ಬೇರೆ ತಿಂಗಳುಗಳಿಗೆ ಶಿಫ್ಟ್ ಆಗೋಣ ಅಂದ್ರೆ ಅದೂ ಕಷ್ಟವೇ. ಹೀಗಾಗಿ 2027ರ ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿಯೇ ಪಿಸಿಬಿಗೆ ದೊಡ್ಡ ತಲೆನೋವಾಗಿದೆ.

Shantha Kumari

Leave a Reply

Your email address will not be published. Required fields are marked *