ಮಗಳಿಗೆ ಇಡೀ ಜಗತ್ತು ತೋರಿಸಬೇಕೆಂದು ಹೆತ್ತವರ ಪ್ರವಾಸ – ಶಾಲೆಗೆ ರಜೆ ಹಾಕದೆಯೇ 10ನೇ ವಯಸ್ಸಿಗೆ 50 ದೇಶಗಳನ್ನ ಸುತ್ತಿದ ಬಾಲಕಿ

ಮಗಳಿಗೆ ಇಡೀ ಜಗತ್ತು ತೋರಿಸಬೇಕೆಂದು ಹೆತ್ತವರ ಪ್ರವಾಸ – ಶಾಲೆಗೆ ರಜೆ ಹಾಕದೆಯೇ 10ನೇ ವಯಸ್ಸಿಗೆ 50 ದೇಶಗಳನ್ನ ಸುತ್ತಿದ ಬಾಲಕಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅನ್ನುವ ಗಾದೆ ಮಾತಿದೆ. ಈ ಗಾದೆ ಮಾತಿನಂತೆ ಈ ಪೋಷಕರು ತಮ್ಮ ಮಗಳನ್ನ ಚಿಕ್ಕಂದಿನಿಂದಲೇ ಪ್ರಪಂಚದಾದ್ಯಂತ ಸುತ್ತಿಸುವ ಕನಸನ್ನ ಹೊತ್ತುಕೊಂಡಿದ್ದಾರೆ. ತಮ್ಮ ಮಗಳನ್ನ ಚಿಕ್ಕಂದಿನಿಂದಲೇ ಸಾಹಸಿಯಾಗಿ, ಆತ್ಮವಿಶ್ವಾಸವುಳ್ಳ ಹುಡುಗಿಯಾಗಿ ಬೆಳೆಸುವ ಕನಸನ್ನ ಹೊತ್ತುಕೊಂಡಿದ್ದಾರೆ. ಹೀಗಾಗಿ ಅವರ 10 ವರ್ಷದ ಮಗಳು ಈಗಾಗಲೇ ಸುಮಾರು 50 ದೇಶಗಳಿಗೆ ಪೋಷಕರೊಂದಿಗೆ ಭೇಟಿ ಕೊಟ್ಟಿದ್ದಾಳೆ. ಆದರೆ ಪ್ರವಾಸಕ್ಕೆ ಬಳಸಿಕೊಂಡಿದ್ದು ಕೇವಲ ಶಾಲಾ ರಜಾದಿನಗಳನ್ನ ಅಷ್ಟೇ.

ಇದನ್ನೂ ಓದಿ : ಮದುವೆ ದಿನವೇ ನವದಂಪತಿಯ ರಿಸ್ಕ್..! – ‘ಸ್ಕೈಡೈವಿಂಗ್’ ಮೂಲಕ ಡಿಫರೆಂಟ್ ಮ್ಯಾರೇಜ್

ಅಂದ ಹಾಗೇ ಈ ವಿದೇಶಿ ಪ್ರಯಾಣಕ್ಕಾಗಿ ಅವರು ಪ್ರತಿ ವರ್ಷ 21 ಲಕ್ಷಕ್ಕೂ ಹೆಚ್ಚು ಹಣವನ್ನ ಖರ್ಚು ಮಾಡುತ್ತಾರೆ. ದಕ್ಷಿಣ ಲಂಡನ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಟುಂಬವೊಂದು ತಮ್ಮ ಮಗಳು 10 ವರ್ಷದ ಅದಿತಿ ತ್ರಿಪಾಠಿ ಇಡೀ ಜಗತ್ತನ್ನ ಸುತ್ತಬೇಕು ಎನ್ನುವ ಕನಸನ್ನ ಇಟ್ಟುಕೊಂಡವರು. ಆದರೆ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದು ಎನ್ನುವ ಯೋಚನೆಯೊಂದಿಗೆ ಪ್ರಪಂಚವನ್ನು ಅನುಭವಿಸಲು ಮತ್ತು ವಿಭಿನ್ನ ಸಂಸ್ಕೃತಿಗಳು, ಆಹಾರಗಳು ಮತ್ತು ಜನರನ್ನು ಅರ್ಥಮಾಡಿಕೊಳ್ಳಬೇಕೆಂದು ಅವರು ಬಯಸಿದ್ದರು. ಆದ್ದರಿಂದ ಅವರು ಪ್ರತಿ ಶಾಲಾ ರಜೆಯ ಸಮಯದಲ್ಲಿ ಪ್ರಯಾಣಿಸಲು ಪ್ರಾರಂಭಿಸಿದರು. ಅದಿತಿಯ ಪೋಷಕರು ವರ್ಷಕ್ಕೆ 20,000 ಪೌಂಡ್‌ಗಳನ್ನು (ರೂ. 21 ಲಕ್ಷಕ್ಕಿಂತ ಹೆಚ್ಚು) ಪ್ರಯಾಣಕ್ಕಾಗಿ ಖರ್ಚು ಮಾಡುತ್ತಾರೆ.

ಮಗಳಿಗೆ ಮೂರು ವರ್ಷವಾದಾಗಲೇ ಅದಿತಿಯ ಪೋಷಕರು ಪ್ರವಾಸ ಆರಂಭಿಸುತ್ತಾರೆ. ಈ ಬಗ್ಗೆ ಮಾತನಾಡಿರುವ ಪೋಷಕರು ‘ನಾವು ತಮ್ಮ ಮಗಳನ್ನು ಶುಕ್ರವಾರ ಶಾಲೆಯಿಂದ ನೇರವಾಗಿ ಕರೆದುಕೊಂಡು ಹೋಗುತ್ತೇವೆ ಮತ್ತು ನಾವು ಭಾನುವಾರ ರಾತ್ರಿ 11 ಗಂಟೆಗೆ ಹಿಂತಿರುಗುತ್ತೇವೆ. ಕೆಲವೊಮ್ಮೆ ನಾವು ಸೋಮವಾರ ಬೆಳಿಗ್ಗೆ ಬಂದಿದ್ದೇವೆ ಮತ್ತು ಅವಳು ವಿಮಾನ ನಿಲ್ದಾಣದಿಂದ ನೇರವಾಗಿ ಶಾಲೆಗೆ ಹೋಗುತ್ತಾಳೆ’ ಎಂದು ಅದಿತಿಯ ಪೋಷಕರು ಹೇಳಿದ್ದಾರೆ.

ಈ ನಿರಂತರ ಪ್ರವಾಸದಿಂದ ತಮ್ಮ ಮಗಳಲ್ಲಿ ಧನಾತ್ಮಕ ಬದಲಾವಣೆಗಳು ಆಗಿರುವುದನ್ನ ಪೋಷಕರು ಗಮನಿಸಿದ್ದಾರೆ. ಪ್ರಯಾಣವು ಅವಳ ಆಲೋಚನಾ ಪರಿಧಿಯನ್ನು ಹೆಚ್ಚಿಸಿದೆ ಮಾತ್ರವಲ್ಲದೆ ತನ್ನ 10 ವರ್ಷದ ವಯಸ್ಸಿನಲ್ಲೇ ಅಪರೂಪದ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡಿದೆ. ಜೊತೆಗೆ ಪ್ರಪಂಚದ ವಿವಿಧ ಮೂಲೆಗಳಲ್ಲಿ ಹೊಸ ಜನರನ್ನು ಭೇಟಿಯಾಗುವ ಮತ್ತು ಸ್ನೇಹವನ್ನು ರೂಪಿಸುವ ಅನುಭವವು ಆಕೆಯನ್ನು ಇನ್ನಷ್ಟು ಕೌಶಲ್ಯಗಳನ್ನ ಬೆಳೆಸಿಕೊಳ್ಳಲು ಸಹಾಯವಾಗುತ್ತಿದೆ ಎಂದು ಹೆಳುತ್ತಾರೆ.

ಅದಿತಿಯ ಪೋಷಕರು ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರು ತಮ್ಮ ಪ್ರವಾಸಗಳಿಗಾಗಿ ವರ್ಷವಿಡೀ ಉಳಿತಾಯ ಮಾಡುತ್ತಾರೆ. ಅವರು ಹೊರಗೆ ತಿನ್ನುವುದನ್ನು ತಪ್ಪಿಸುತ್ತಾರೆ, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ. ಹಾಗೇ ಪ್ರವಾಸದ ವೆಚ್ಚವನ್ನ ಉಳಿಸಿಕೊಳ್ಳಲು ಸ್ವಂತ ಕಾರನ್ನು ಕೂಡಾ ಅದಿತಿ ಪೋಷಕರು ಹೊಂದಿಲ್ಲ. ಕೋವಿಡ್ ಮೊದಲು ಒಂದು ವರ್ಷದಲ್ಲಿ ಸುಮಾರು 12 ಸ್ಥಳಗಳಿಗೆ ಪ್ರಯಾಣಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಅಂದ ಹಾಗೇ ಅದಿತಿ ತನ್ನ ಹತ್ತು ವರುಷ ವಯಸಿನಲ್ಲಿಯೇ ಜರ್ಮನಿ,ಫ್ರಾನ್ಸ್, ಇಟಲಿ ಮತ್ತು ಆಸ್ಟ್ರಿಯಾ, ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಸಿಂಗಾಪುರ ಹೀಗೆ 50 ದೇಶಗಳಿಗೆ ಭೇಟಿ ನೀಡಿದ್ದಾಳೆ.

suddiyaana