ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯೋಧನ ಮೃತದೇಹ ಪತ್ತೆ

ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯೋಧನ ಮೃತದೇಹ ಪತ್ತೆ

ಭಾರತದ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಭಾರತೀಯ ನೌಕ ದಳದ ನಾವಿಕರೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಗುರುವಾರ ಮುಂಜಾನೆ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾವಿಕನ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ನಾವಿಕನ ಗುರುತನ್ನು ಬಹಿರಂಗಪಡಿಸಿಲ್ಲವಾದರೂ, 19 ವರ್ಷದ ಬಿಹಾರದ ಮುಜಾಫರ್ಪುರಕ್ಕೆ ಸೇರಿದವನಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟೆರೇಸ್ ಮೇಲೆ ಮಗು ಮಲಗಿಸಿ ಕೆಲಸ ಮಾಡುತ್ತಿದ್ದಳು ತಾಯಿ – ಕಂದನನ್ನು ಹೊತ್ತೊಯ್ದು ಕೆಳಗೆ ಎಸೆದ ಬೆಕ್ಕು!

ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತಿದ್ದರೂ ಸಹಿತ ಘಟನೆಯ ಕುರಿತು ಶಾಸನಬದ್ಧ ತನಿಖಾ ಮಂಡಳಿಗೆ ಆದೇಶಿಸಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನಾ ಶಿಬಿರದಲ್ಲಿ ಸೇನಾ ಯೋಧನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನನ್ನು ಮಹಾರಾಷ್ಟ್ರ ಮೂಲದ ಡೊಂಬಲ್ ಮಯೂರ್ ಎಂದು ಗುರುತಿಸಲಾಗಿತ್ತು.

suddiyaana