ಭಾರತೀಯ ನೌಕಾಪಡೆಗೆ ಮಹಿಳಾ ಕಮ್ಯಾಂಡೋ! ಉಗ್ರರ ವಿರುದ್ಧ ಲೇಡಿ ಮಾರ್ಕೋಸ್ ಫೈಟ್!

ದೆಹಲಿ: ಭಾರತೀಯ ಸೇನೆಯಲ್ಲಿ ಈಗಾಗ್ಲೇ ಮಹಿಳಾ ಯೋಧರ ಪಡೆ ಇರೋದು ನಿಮಗೆ ಗೊತ್ತಿರೋ ವಿಚಾರನೆ. ಆದ್ರೀಗ ಇದೇ ಮೊದಲ ಬಾರಿಗೆ ಕಮ್ಯಾಂಡೋ ಯುನಿಟ್ನಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಲು ಭಾರತೀಯ ನೌಕಾಪಡೆ ತೀರ್ಮಾನಿಸಿದೆ. ನೌಕಾಪಡೆಯ ಕಮ್ಯಾಂಡೋಗಳನ್ನ ಮಾರ್ಕೋಸ್ ಅಂತಾರೆ. ನೌಕಾಪಡೆಯಲ್ಲಿ ಮಾರ್ಕೋಸ್ ಅನ್ನೋದು ಅತ್ಯಂತ ಕಠಿಣ ಹುದ್ದೆಯಾಗಿದೆ. ಭೂಮಿ, ಸಮುದ್ರ ಮತ್ತು ಆಕಾಶ ಮೂರು ವಿಭಾಗದಲ್ಲೂ ಕರ್ತವ್ಯ ನಿರ್ವಹಿಸೋ ಹಾಗೆ ಮಾರ್ಕೋಸ್ಗಳಿಗೆ ತರಬೇತಿ ನೀಡಲಾಗುತ್ತೆ. ತರಬೇತಿ ವೇಳೆ 100 ಮಂದಿ ಇದ್ದಲ್ಲಿ ಅಂತಿಮವಾಗಿ 20 ಮಂದಿಯಷ್ಟೇ ಆಯ್ಕೆಯ ಹಂತಕ್ಕೆ ತಲುಪುತ್ತಾರೆ.
ಮಾರ್ಕೋಸ್ ಆಗಿ ನೇಮಕವಾದ ಮಹಿಳಾ ಯುನಿಟ್ನ್ನ ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗೂ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ನಡುವೆ, ಮುಂದಿನ ವರ್ಷದ ವೇಳೆ ಮಹಿಳಾ ಸಿಬ್ಬಂದಿಯ ಸಬ್ಮರೀನ್ ಕೂಡ ಸಿದ್ಧವಾಗಲಿದೆ ಅಂತಾ ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ. ಇನ್ನು ಕೇಂದ್ರ ಸರ್ಕಾರ್ ಅಗ್ನಿವೀರ್ ಯೋಜನೆ ಮೂಲಕವೂ ನೌಕಾಪಡೆಗೆ ಮಹಿಳಾ ಸಿಬ್ಬಂದಿಯನ್ನ ನೇಮಕ ಮಾಡಲಾಗ್ತಿದೆ. ಸದ್ಯ ನೌಕಾಪಡೆಯ ಅಗ್ನಿವೀರ್ ಮೊದಲ ಬ್ಯಾಚ್ನಲ್ಲಿ 3000 ಮಂದಿ ಪೈಕಿ 341 ಮಹಿಳೆಯರು ಕೂಡ ಇದ್ದಾರೆ.