ಭಾರತೀಯರಿಗೆ ಗುಡ್‌ನ್ಯೂಸ್!‌ – ವಾರ್‌ ನಡುವೆಯೂ ಭಾರತಕ್ಕೆ 45,000 ಮೆಟ್ರಿಕ್ ಟನ್ LPG ಹೊತ್ತು ತಂದ ಶಿವಾಲಿಕ್‌ ಹಡಗು

ಭಾರತೀಯರಿಗೆ ಗುಡ್‌ನ್ಯೂಸ್!‌ – ವಾರ್‌ ನಡುವೆಯೂ ಭಾರತಕ್ಕೆ 45,000 ಮೆಟ್ರಿಕ್ ಟನ್ LPG ಹೊತ್ತು ತಂದ ಶಿವಾಲಿಕ್‌ ಹಡಗು

ಇರಾನ್‌ – ಇಸ್ರೇಲ್‌ ನಡುವಿನ ಯುದ್ದದಿಂದಾಗಿ ದೇಶದಲ್ಲಿ ಅಡುಗೆ ಅನಿಲದ ಅಭಾವ ಉಂಟಾಗಿತ್ತು. ಇದ್ರಿಂದಾಗಿ ದೇಶದಲ್ಲಿ ಆತಂಕರ ವಾತಾವರಣ ಸೃಷ್ಠಿಯಾಗಿತ್ತು. ಇದೀಗ ಭಾರತೀಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಶಿವಾಲಿಕ್ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಬಂದು ತಲುಪಲಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕತ್ತು ಸೀಳಿ ಹೆಂಡತಿ ಕೊಲೆ – ಗಂಡನ ಕೃತ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು

ಅಮೆರಿಕ – ಇರಾನ್‌ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಲವಾರು ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್‌ಗಳು, ಹಾಸ್ಟೆಲ್‌ಗಳು ಮತ್ತು ಕೆಲವು ಕಂಪನಿಗಳು, ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಇದೀಗ ಯುದ್ದದ ನಡುವೆಯೂ ಭಾರತಕ್ಕೆ ಎಲ್‌ಪಿಜಿ ಪೂರೈಕೆಯಾಗುತ್ತಿದೆ. ಈ ಬಗ್ಗೆ ಬಂದರು ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಮಾಹಿತಿ ನೀಡಿದ್ದು, ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಮತ್ತು ಶಿವಾಲಿಕ್ ಎಂಬ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರುತ್ತಿವೆ. ಶಿವಾಲಿಕ್ ಮಾರ್ಚ್ 16 ರಂದು ಮತ್ತು ನಂದಾ ದೇವಿ ಮಾರ್ಚ್ 17 ರಂದು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು. ಈಗ ಆ ನಿರೀಕ್ಷೆಯಂತೆ ಇಂದು ಮಾ.16 ರಂದು ಶಿವಾಲಿಕ್‌ ಹಡಗು ಭಾರತಕ್ಕೆ ಬಂದು ತಲುಪಿದೆ.

ಡಾ. ಎಸ್. ಜೈಶಂಕರ್ ಮತ್ತು ಇರಾನಿನ ವಿದೇಶಾಂಗ ಸಚಿವರ ನಡುವಿನ ಚರ್ಚೆಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಮಾತುಕತೆ ಬಳಿಕ ಭಾರತದ ಹಡಗುಗಳಿಗೆ ಹಾರ್ಮೋಜ್ ಮಾರ್ಗವನ್ನು ಸುರಕ್ಷಿತವಾಗಿ ದಾಟಲು ಅನುಮತಿ ದೊರೆತಿತ್ತು.

Shwetha M