ಅಮೆರಿಕ ಪ್ರವೇಶಿಸಿದ 54 ಭಾರತೀಯರನ್ನು ಅಮೆರಿಕಾ ಗಡಿಪಾರು – ಕುಟುಂಬಸ್ಥರಿಗೆ ಹಸ್ತಾಂತರಿಸಿದ ಖಾಕಿ

ಅಮೆರಿಕ ಪ್ರವೇಶಿಸಿದ 54 ಭಾರತೀಯರನ್ನು ಅಮೆರಿಕಾ ಗಡಿಪಾರು  – ಕುಟುಂಬಸ್ಥರಿಗೆ ಹಸ್ತಾಂತರಿಸಿದ ಖಾಕಿ

ಡಾಂಕಿ ಮಾರ್ಗದ ಮೂಲಕ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಿದ ಭಾರತದ ಹರಿಯಾಣದ ಮೂಲದ 54 ಯುವಕರನ್ನು ಅಮೆರಿಕಾ ಗಡಿಪಾರು ಮಾಡಿದೆ. ಇವರೆಲ್ಲಾ ಈಗ ಸದ್ಯ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ , ಟರ್ಮಿನಲ್ -3, ಫ್ಲೈಟ್ OAE-4767 ಬಂದಿಳಿದ್ದಿದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಪಾರದವರಲ್ಲಿ ಹೆಚ್ಚಿನವರು ಹರಿಯಾಣ ಮೂಲದವರು

ಇನ್ನೂ ಈ ಗಡಿಪಾರಾಗಿರುವವರಲ್ಲಿ ಹೆಚ್ಚಿನವರು 25 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಈ ಯುವಕರಲ್ಲಿ 16 ಮಂದಿ ಕರ್ನಾಲ್, 15 ಮಂದಿ ಕೈಥಾಲ್, 5 ಮಂದಿ ಅಂಬಾಲಾ, 4 ಮಂದಿ ಯಮುನಾ ನಗರ, 4 ಮಂದಿ ಕುರುಕ್ಷೇತ್ರ, 3 ಮಂದಿ ಜಿಂದ್, 2 ಮಂದಿ ಸೋನಿಪತ್ ಮತ್ತು ತಲಾ ಒಬ್ಬರು ಪಂಚಕುಲ, ಪಾಣಿಪತ್, ರೋಹ್ಟಕ್ ಮತ್ತು ಫತೇಹಾಬಾದ್‌ನವರು ಎಂಬ ಮಾಹಿತಿ ಲಭ್ಯವಾಗಿದೆ. ಇವರನ್ನು ಕರ್ನಾಲ್ ಪೊಲೀಸರು ತಮ್ಮ ಕುಟುಂಬಗಳಿಗೆ ಹಸ್ತಾಂತರಿಸಿದ್ದು, ಇನ್ನೂ ಈವರೆಗೂ ಯಾವುದೇ ಏಜೆಂಟ್‌ ಗಳ ವಿರುದ್ದ ನೀಡಿಲ್ಲ.

ಗಡಿಪಾರದವರನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ಪೊಲೀಸರು

ಈ ಕುರಿತು ಮಾಹಿತಿ ನೀಡಿರುವ ಕರ್ನಾಲ್ ಡಿಎಸ್ಪಿ ಸಂದೀಪ್ ಕುಮಾರ್ “ಹರಿಯಾಣ ಸೇರಿದಂತೆ ಸೇರಿದಂತೆ ಭಾತರದ ವಿವಿಧ ಭಾಗಗಳಿಂದ ಡಾಂಕಿ ಮಾರ್ಗದ ಮೂಲಕ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಿದ್ದ 54 ಭಾರತೀಯರನ್ನು ಗಡಿಪಾರು ಮಾಡಲಾಗಿದ್ದು, ಅವರೆಲ್ಲಾ ದೆಹಲಿಗೆ ಬಂದಿಳಿದಿದ್ದಾರೆ.ಇವರಲ್ಲಿ 16 ಮಂದಿ ಕರ್ನಾಲ್‌ ನವರಾಗಿದ್ದಾರೆ. ಇವರನ್ನು ಮರಳಿ ತಮ್ಮ ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು, ಯಾವುದೇ ಏಜೆಂಟ್ ಬಗ್ಗೆ ಯಾವುದೇ ದೂರು ಬಂದಿಲ್ಲ” ಎಂದು ಹೇಳಿದ್ದಾರೆ.

ಅಲ್ಲದೇ ಅಕ್ರಮವಾಗಿ ವಿದೇಶಕ್ಕೆ ಹೋಗಲು ಪ್ರಯತ್ನಿಸುವವರ ಕುರಿತು ಮಾತನಾಡಿದ ಅವರು ಇದು ನಂತರ ಗಮನಾರ್ಹ ಸಮಸ್ಯೆಗಳಿಗೆ ಕಾರಣವಾಗುವ ತಪ್ಪು ವಿಧಾನವಾಗಿದೆ ಎಂದು ಒತ್ತಿ ಹೇಳಿದರು. ಇನ್ನೂ ತನಿಖೆ ನಡೆಯುತ್ತಿದೆ ಮತ್ತು ಯಾರಿಗಾದರೂ ಕ್ರಿಮಿನಲ್ ದಾಖಲೆ ಇದ್ದರೆ, ತನಿಖೆಯ ಸಮಯದಲ್ಲಿ ಅದು ಬೆಳಕಿಗೆ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್! – ಕಾಂಗ್ರೆಸ್ ನವೆಂಬರ್​ ಕ್ರಾಂತಿ?

ಇನ್ನೂ 2025ರ ಜನವರಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಕ್ರಮ ವಲಸಿಗರ ವಿರುದ್ದ ಸಮರ ಸಾರುತ್ತಿದ್ದಾರೆ. ವಲಸೆ ಕಾನೂನುಗಳನ್ನು ಉಲ್ಲಂಘಿಸುವ ಅಥವಾ ದೇಶದಲ್ಲಿ ಉಳಿಯಲು ಯಾವುದೇ ಮಾನ್ಯ ಆಧಾರವಿಲ್ಲದ ವ್ಯಕ್ತಿಗಳನ್ನು ಅಮೆರಿಕ ಸರ್ಕಾರ ನಿಯಮಿತವಾಗಿ ಗಡಿಪಾರು ಮಾಡುತ್ತಲೇ ಇದೆ. ಈಗಾಗಲೇ ನೂರಾರು ಭಾರತೀಯರನ್ನು ಗಡಿಪಾರು ಮಾಡಿರುವ ಅಮೆರಿಕಾ ಈಗ ಮತ್ತೆ 54 ಭಾರತೀಯರನ್ನು ಗಡಿಪಾರು ಮಾಡಿದೆ.

Kishor KV