ಅಬ್ಬಬ್ಬಾ.. ಹೀಗೂ ದುಡ್ಡು ಮಾಡ್ಬೋದಾ!? – ಟಿಪ್ಸ್ ಸಿಕ್ಕ ಹಣದಿಂದಲೇ ದುಬಾರಿ ಕಾರ್ ಖರೀದಿಸಿದ ವ್ಯಕ್ತಿ!

ಈಗಿನ ಕಾಲದಲ್ಲಿ ದುಡ್ಡಿದ್ರೆ ಮಾತ್ರ ದುನಿಯಾ. ಹೀಗಾಗಿ ಕೆಲವರು ರಾತ್ರಿ ಹಗಲು ನಿದ್ದೆ ಬಿಟ್ಟು ಕೆಲ್ಸ ಮಾಡ್ತಾರೆ. ಒಂದ್ಕಡೆ ಕೆಲಸ ಮಾಡಿದ್ರೆ ಸಾಲಲ್ಲ ಅಂತ ಹೇಳಿ ಪಾರ್ಟ್ ಟೈಮ್ ಕೆಲಸ ಕೂಡ ಮಾಡ್ತಾರೆ. ಆದ್ರೀಗ ಇಲ್ಲೊಬ್ಬ ವ್ಯಕ್ತಿ ಬರೀ ಟಿಪ್ಸ್‌ನಿಂದಲೇ ಲಕ್ಷ ಲಕ್ಷ ಹಣ ಮಾಡಿದ್ದಾನೆ. ಅಷ್ಟೇ ಅಲ್ಲ ಆ ಹಣವನ್ನ ಕೂಡಿಟ್ಟು ದುಬಾರಿ ಕಾರನ್ನ ಕೂಡ ಖರೀದಿಸಿದ್ದಾನೆ.
ಇದನ್ನೂ ಓದಿ: ಸ್ಪಂದನಾ ಕ್ಯಾಪ್ಟನ್ಸಿಯಿಂದ ಕಿಕ್ ಔಟ್? – ವಿಲನ್‌ಗಳಿಗೆ ಚೈತ್ರಾ ಹೊಸ ನಾಯಕಿ!
ಸಾಮಾನ್ಯವಾಗಿ ಹೊಟೇಲ್‌ಗಳಲ್ಲಿ ವೈಟರ್‌ಗೆ ಹತ್ತು, ಇಪ್ಪತ್ತು ರೂಪಾಯಿ ಟಿಪ್ಸ್ ಕೊಟ್ಟು ಬರುತ್ತೇವೆ. ಈ ಹಣದಲ್ಲಿ ಒಂದು ಕಪ್ ಟೀ ಕೂಡ ಬರಲ್ಲ. ಆದ್ರೀಗ ಇಲ್ಲೊಬ್ಬ ವ್ಯಕ್ತಿ ಕೆಲಸದ ವೇಳೆ ತನಗೆ ಸಿಕ್ಕ ಟಿಪ್ಸ್ ಹಣದ ಮೂಲಕವೇ 10 ಲಕ್ಷ ಮೌಲ್ಯದ ಕಾರ್‌ಅನ್ನು ಖರೀದಿಸಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಂಡಿದ್ದಾನೆ. ತಾನು ಕ್ರೂಸ್ ಹಡಗಿನಲ್ಲಿ ತಾನು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು, 10 ಲಕ್ಷದ ಮೌಲ್ಯದ ಕಾರ್‌ಅನ್ನು ಖರೀದಿ ಮಾಡಲು ಅತಿಥಿಗಳು ನೀಡಿದ ಟಿಪ್ಸ್ ಹಣವನ್ನೇ ಬಳಸಿದ್ದೇನೆ ಎಂದು ತಿಳಿಸಿದ್ದಾನೆ.
ಅಚ್ಚರಿಯಾದ್ರೂ ಸತ್ಯ. ಪ್ರವೀಣ್ ಜೋಶಿಲ್ಕರ್ ಎಂಬಾತ ಕ್ರೂಸ್ ಶಿಪ್ ವರ್ಕರ್ ಆಗಿ ಹಲವು ಹಡಗುಗಳಲ್ಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ತಾನು ಕ್ರೂಸ್ ಶಿಪ್ ವ್ಲಾಗರ್ ಕೂಡ ಆಗಿದ್ದಾರೆ. ಕ್ರೂಸ್ ಶಿಪ್‌ನಲ್ಲಿ ಕಳೆದ ಕ್ಷಣಗಳನ್ನು ಆಗಾಗ್ಗೆ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅಂಥ ಒಂದು ವಿಡಿಯೋದಲ್ಲಿ, ತಾವು ಕೆಲಸದ ವೇಳೆ ಅತಿಥಿಗಳಿಂದ ಸಿಕ್ಕ ಟಿಪ್ಸ್‌ನಿಂದ 10 ಲಕ್ಷ ರೂಪಾಯಿ ಮೌಲ್ಯದ ಕಾರ್ ಖರೀದಿ ಮಾಡಿರುವುದಾಗಿ ತಿಳಿಸಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ @pravinjoshilkar_cruisevlogger ಎಂಬ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾನೆ, ಕೇವಲ ಟಿಪ್ಸ್ ಹಣದಿಂದಲೇ ಕಾರನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ, ಕ್ರೂಸ್ ಶಿಪ್‌ನಲ್ಲಿ ಪ್ರಯಾಣ ಮಾಡುವ ಯುರೋಪಿಯನ್ ಮತ್ತು ಅಮೇರಿಕನ್ ಅತಿಥಿಗಳಿಗೆ ಧನ್ಯವಾದ ಹೇಳಿದ್ದಾರೆ. ಇವರು ನೀಡಿದ ಟಿಪ್ ಹಣದಿಂದಲೇ ತಾವು ಕಾರ್ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ಪ್ರವೀಣ್ ಜೋಶಿಲ್ಕರ್ ಎಂಬ ಈ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ನೀವು ಕ್ರೂಸ್ ಹಡಗಿನಲ್ಲಿ ಕೆಲಸ ಮಾಡುವಾಗ, ನಿಮ್ಮ ಟಿಪ್ಸ್ ಹಣದಲ್ಲಿಯೇ ನೀವು ಎಲ್ಲವನ್ನೂ ಖರೀದಿಸಬಹುದು ಎಂದಿದ್ದಾರೆ. ನನಗೆ ಬರುವ ಎಲ್ಲಾ ಸಂಬಳವನ್ನು ಉಳಿಸುತ್ತೇನೆ ಎಂದು ಹೇಳಿದ್ದು, ಕೇವಲ ಟಿಪ್ಸ್‌ನಿಂದಲೇ ದಿನಗಳನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ವಿವರ ನೀಡಿರುವ ಪ್ರವೀಣ್, ವೇತನ ಅನ್ನೋದು ಭವಿಷ್ಯಕ್ಕಾಗಿ ಸಹೋದರ ಎಂದು ಬರೆದುಕೊಂಡಿದ್ದು, ಹಂಚಿಕೊಂಡಿರುವ ಫೋಟೋದಲ್ಲಿ ಅವರು ತಮ್ಮ ಕಾರ್‌ನ ಜೊತೆಯಲ್ಲಿಯೇ ನಿಂತಿದ್ದಾರೆ.
ಪ್ರವೀಣ್ ಜೋಶಿಲ್ಕರ್ ಅವರ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಮಾಹಿತಿ ಪ್ರಕಾರ, ಅವರು ಕ್ರೂಸ್ ಶಿಪ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಇಟಾಲಿಯನ್ ಕ್ರೂಸ್ ಶಿಪ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಹೋಟೆಲ್ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿದ್ದಾರೆ. ತನ್ನ ವಿಡಿಯೋ ಹಾಗೂ ರೀಲ್ಸ್‌ಗಳ ಮೂಲಕ ಇತರರಿಗೆ ಕ್ರೂಸ್ ಶಿಪ್ ಕೆರಿಯರ್‌ಅನ್ನು ಆಯ್ದುಕೊಳ್ಳಲು ಪ್ರೇರಣೆ ನೀಡುತ್ತಿದ್ದಾರೆ.

ನೋಡಿರಿ

