ಗುರುದ್ವಾರಕ್ಕೆ ಆಗಮಿಸಿದ್ದ ಭಾರತ ರಾಯಭಾರಿಯನ್ನು ಹೊರದಬ್ಬಿದ ಖಲಿಸ್ತಾನಿ ಪರ ಪ್ರಚಾರಕರು!

ಗುರುದ್ವಾರಕ್ಕೆ ಆಗಮಿಸಿದ್ದ ಭಾರತ ರಾಯಭಾರಿಯನ್ನು ಹೊರದಬ್ಬಿದ ಖಲಿಸ್ತಾನಿ ಪರ ಪ್ರಚಾರಕರು!

ಭಾರತ ಮತ್ತು ಕೆನಡಾ ನಡುವಿನ ಮುಸುಕಿನ ಗುದ್ದಾಟ ಮುಂದುವರಿದೆ. ಖಲಿಸ್ತಾನ್‌ ಉಗ್ರನ ಹತ್ಯೆ ನಂತರ ಕೆನಡಾದಲ್ಲಿ ಸಿಖ್ಖರು ಒಟ್ಟಾವಾ, ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮುಂತಾದ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇದೀಗ ಅಮೆರಿಕದಲ್ಲೂ ಖಲಿಸ್ತಾನಿ ಪರ ಪ್ರಚಾರಕರ ದುಂಡಾವರ್ತನೆ ಮುಂದುವರಿಸಿದ್ದಾರೆ. ಗುರುದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡಿದ್ದ ಭಾರತ ರಾಯಭಾರಿಯನ್ನು ಅಲ್ಲಿನ ಖಲಿಸ್ತಾನ ಪ್ರಚಾರಕರು ಬಲವಂತವಾಗಿ ಹೊರದಬ್ಬಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರಿ ಮಳೆ – ಸಿಡಿಲು ಬಡಿದು 20 ಮಂದಿ ಸಾವು

ನೂಯಾರ್ಕ್ ನ ಲಾಂಗ್ ಐಲೆಂಡ್ ನಲ್ಲಿರುವ ಹಿಕ್ಸ್ ವಿಲ್ಲೆ ಗುರುದ್ವಾರಕ್ಕೆ ಭಾರತದ ಅಮೆರಿಕ ರಾಯಭಾರಿ ತರಣ್ ಜಿತ್ ಸಂಧು ಅವರು ಗುರುಪ್ರಭ್ ನಿಮಿತ್ತ ಪ್ರಾರ್ಥನೆ ಸಲ್ಲಿಸಲು ಗುರುದ್ವಾರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಖಲಿಸ್ತಾನಿ ಪರ ಪ್ರಚಾರಕರು ತರಣ್ ಜಿತ್ ರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಖಲಿಸ್ತಾನ ಉಗ್ರರಾದ ಹರ್ದೀರ್ ಸಿಂಗ್ ನಿಜ್ಜರ್ ಮತ್ತು ಗುರುಪತ್ವಂತ್ ಸಿಂಗ್ ಪನ್ನು ಪರವಾಗಿ ಘೋಷಣೆಗಳನ್ನು ಕೂಗಿದ ಖಲಿಸ್ತಾನಿ ಪ್ರಚಾರಕರು ಭಾರತದ ರಾಯಭಾರಿ ತರಣ್ ಜಿತ್ ಸಿಂಗ್ ರನ್ನು ಗುರುದ್ವಾರದಿಂದ ಬಲವಂತವಾಗಿ ಹೊರಗೆ ಕಳುಹಿಸುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.

ಇತ್ತ ರಾಯಭಾರಿ ಗುರುದ್ವಾರದಿಂದ ಹೊರಗೆ ಬರುತ್ತಲೇ ಅಲ್ಲಿ ನೆರೆದಿದ್ದ ಖಲಿಸ್ತಾನಿ ಪರ ಪ್ರಚಾರಕರು ಖಲಿಸ್ತಾನ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಕಂಡಿವೆ. ಇನ್ನು ಈ ಅಹಿತಕರ ಘಟನೆಗಳ ಹೊರತಾಗಿಯೂ ಅವರು ಗುರುಪ್ರಬ್ ಕುರಿತು ಸಿಖ್ ಸಮುದಾಯದವರಿಗೆ ಶುಭ ಕೋರಿದ್ದು, “ಅಫ್ಘಾನಿಸ್ತಾನ ಸೇರಿದಂತೆ ಸ್ಥಳೀಯ ಸಂಗತ್‌ಗೆ ಸೇರುವ ಸೌಭಾಗ್ಯ, ಲಾಂಗ್ ಐಲ್ಯಾಂಡ್‌ನ ಗುರುನಾನಕ್ ದರ್ಬಾರ್‌ನಲ್ಲಿ ಗುರುಪುರಬ್ ಆಚರಿಸಲು- ಕೀರ್ತನೆಗಳನ್ನು ಆಲಿಸಿ, ಗುರುನಾನಕ್ ಅವರ ಒಗ್ಗಟ್ಟಿನ, ಏಕತೆ ಮತ್ತು ಸಮಾನತೆಯ ಶಾಶ್ವತ ಸಂದೇಶದ ಬಗ್ಗೆ ಮಾತನಾಡಿ ಲಾಂಗಾರ್‌ನಲ್ಲಿ ಭಾಗವಹಿಸಿದರು ಮತ್ತು ಎಲ್ಲರಿಗೂ ಆಶೀರ್ವಾದ ಕೋರಿದರು.

 

Shwetha M