ಭಾರತೀಯರಿಗೆ ಬೇಡವಾಯ್ತಾ ಈ ದೇಶಗಳು? – ವಿದೇಶಾಂಗ ಇಲಾಖೆಯಿಂದ ಮಹತ್ವದ ವರದಿ

ಭಾರತೀಯರಿಗೆ ಬೇಡವಾಯ್ತಾ ಈ ದೇಶಗಳು? – ವಿದೇಶಾಂಗ ಇಲಾಖೆಯಿಂದ ಮಹತ್ವದ ವರದಿ

ನವದೆಹಲಿ: ಭಾರತೀಯರು ಎಂದರೆ  ಪ್ರಪಂಚದ ಮೂಲೆ ಮೂಲೆಯಲ್ಲೂನೆಲೆಸಿದ್ದಾರೆ ಎಂದು ಪ್ರತಿಯೊಬ್ಬರು ಭಾವಿಸಿರುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ಹಾಗೇ ಭಾರತೀಯರಿಲ್ಲದ ನಗರಗಳು ಇಲ್ಲ ಎಂದು ಜನಸಾಮಾನ್ಯರು ಅಂದುಕೊಂಡಿರುತ್ತಾರೆ. ಆದರೆ ಭಾರತದ ವಿದೇಶಾಂಗ ಸಚಿವಾಲಯದ  ವರದಿಯಲ್ಲಿ ಪ್ರಕಟವಾದ ಅಂಶವನ್ನು ಕಂಡಾಗ ನಿಮ್ಮ ಊಹೆ ಸುಳ್ಳಾಗಲಿದೆ.  ಪ್ರಪಂಚದಲ್ಲಿ ಭಾರತೀಯ ಪ್ರಜೆಗಳಿಲ್ಲದ ನಗರಗಳೂ ಕೂಡ ಇವೆ ಅನ್ನುವ ಮಾಹಿತಿ ಬಹಿರಂಗವಾಗಿದೆ.

ವಿದೇಶಾಂಗ ಸಚಿವಾಲಯ ವರದಿಯಲ್ಲಿ ಕೆಲವೊಂದು ದೇಶಗಳಲ್ಲಿ ಭಾರತೀಯ ಮೂಲದ ಒಬ್ಬ ಪ್ರಜೆಯೂ ನೆಲೆಸಿಲ್ಲ ಎಂದು ತಿಳಿದು ಬಂದಿದೆ. ಈ ವರದಿಯಲ್ಲಿ ಪಟ್ಟಿ ಮಾಡಲಾದ ದೇಶಗಳ ವಿವರಗಳು ಇಲ್ಲವೆ.

ಇದನ್ನೂ ಓದಿ:   ಭಾರತದಲ್ಲಿ ಮೊದಲ ಬಾರಿಗೆ ಮನಿ ಸ್ಫೈಡರ್ ಪತ್ತೆ- ಅದೃಷ್ಟ ತರುತ್ತಾ ಈ ಜೇಡ

ವ್ಯಾಟಿಕನ್ ಸಿಟಿ: ರೋಮ್ ನಗರದಿಂದ ಆವೃತವಾಗಿರುವ ವ್ಯಾಟಿಕನ್ ಸಿಟಿ ವಿಶ್ವದ ಅತ್ಯಂಚ ಚಿಕ್ಕ ನಗರ. ವಿಶ್ವದ ಕೋಟ್ಯಾಂತರ ರೋಮನ್ ಕೆಥೋಲಿಕ್ ಕ್ರೈಸ್ತರಿಗೆ ವ್ಯಾಟಿಕನ್ ಸಿಟಿ ಪುಣ್ಯ ಸ್ಥಳವಾಗಿದೆ. ಈ ನಗರದಲ್ಲಿ ಒಬ್ಬನೇ ಒಬ್ಬ ಭಾರತೀಯ ಮೂಲದ ಪ್ರಜೆ ನೆಲೆಸಿಲ್ಲ.

ಸ್ಯಾನ್ ಮಾರಿನೋ: ಸ್ಯಾನ್ ಮಾರಿನೋ ಗಣತಂತ್ರ ಇಟಲಿಯಿಂದ ಆವರಿಸಲ್ಪಟ್ಟಿರುವ ಒಂದು ಪುಟ್ಟ ದೇಶವಾಗಿದೆ. ಅಲ್ಲಿ ಸುಮಾರು 3,35,620 ಜನಸಂಖ್ಯೆ ಮಾತ್ರ ಹೊಂದಿದ್ದು, ಈ ದೇಶದಲ್ಲೂ ಭಾರತೀಯ ಮೂಲದ ನಿವಾಸಿಗಳು ವಾಸವಾಗಿಲ್ಲ.

ತುವಾಲು: ಆಸ್ಟ್ರೇಲಿಯದ ಈಶಾನ್ಯ ಭಾಗಕ್ಕಿರುವ ಪೆಸಿಫಿಕ್ ಸಮುದ್ರ ಭಾಗದಲ್ಲಿರುವ ದ್ವೀಪ ಸಮೂಹ ತುವಾಲು. ಮೊದಲು ಎಲಿಸ್ ಐಲ್ಯಾಂಡ್ ಎಂದು ಕರೆಸಿಕೊಳ್ಳುತ್ತಿದ್ದ ದ್ವೀಪರಾಷ್ಟ್ರದ ಜನಸಂಖ್ಯೆ ಕೇವಲ 10,000 ಮಾತ್ರ. ಇಲ್ಲೂ ಭಾರತೀಯರಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಪಾಕಿಸ್ತಾನ: ಅಧಿಕೃತ ಮೂಲಗಳ ಪ್ರಕಾರ ಒಬ್ಬೇಒಬ್ಬ ಭಾರತೀಯ ಮೂಲದ ವ್ಯಕ್ತಿ ಪಾಕಿಸ್ತಾನದಲ್ಲಿ ನೆಲೆಸಿಲ್ಲ. ಇದು ವಿಚಿತ್ರವಾದರೂ ಸತ್ಯ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸೆರೆವಾಸ ಅನುಭವಿಸುತ್ತಿರುವ ಮತ್ತು ಭಾರತೀಯ ರಾಯಭಾರ ಅಧಿಕಾರಿಗಳನ್ನು ಇದರಲ್ಲಿ ಪರಿಗಣಿಸಲಾಗಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಬಲ್ಗೇರಿಯ: ಬಲ್ಕಾನ್ಸ್ ಪ್ರದೇಶ ಆಗ್ನೇಯ ಭಾಗಕ್ಕಿರುವ ಬಲ್ಗೇರಿಯ ದೇಶವು ಭಿನ್ನ ಬೌಗೋಳಿಕ ಅಂಶಗಳನ್ನು ಹೊಂದಿದೆ. ಉತ್ತರಕ್ಕಿರುವ ದನುಬೆ ನದಿಯು ದೇಶದ ಒಂದು ಗಡಿಭಾಗವಾಗಿ ಕೆಲಸ ಮಾಡುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಬಲ್ಗೇರಿಯಾದ ದಕ್ಷಿಣ ಭಾಗವು ಎತ್ತರದ ಪ್ರದೇಶಗಳಿಂದ ಆವೃತವಾಗಿದೆ. ಈ ದೇಶದಲ್ಲೂ ಭಾರತೀಯ ಮೂಲದ ನಾಗರಿಕರು ವಾಸವಾಗಿಲ್ಲ.

suddiyaana