ಲಕ್ಸುರಿ ಲೈಫ್ಗೆ ಆಸೆ ಪಟ್ಟು ಬೀದಿಗೆ ಬಿದ್ರು! – ಕಣ್ಣೀರ ಕಥೆ!
40-50 ಲಕ್ಷ ಹಣ ನೀರಲ್ಲಿ ಹೋಮ!!

ಲಕ್ಸುರಿ ಲೈಫ್ಗೆ ಆಸೆ ಪಟ್ಟು ಬೀದಿಗೆ ಬಿದ್ರು! – ಕಣ್ಣೀರ ಕಥೆ!40-50 ಲಕ್ಷ ಹಣ ನೀರಲ್ಲಿ ಹೋಮ!!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಯ ಭಾಗವಾಗಿ, ದಾಖಲೆ ರಹಿತ ಭಾರತೀಯ ವಲಸಿಗರ ಗಡಿಪಾರು ಪ್ರಕ್ರಿಯೆಯನ್ನು ಅಮೆರಿಕನ್‌ ಅಧಿಕಾರಿಗಳು ಆರಂಭಿಸಿದ್ದಾರೆ. ಇದರ ಮೊದಲ ಭಾಗವಾಗಿ 104 ಭಾರತೀಯ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸಿಕೊಡಲಾಗಿದೆ.   ಈ ಎಲ್ಲಾ ಭಾರತೀಯ ವಲಸಿಗರನ್ನು ಈಗ ಬಿಡುಗಡೆ ಮಾಡಲಾಗಿದ್ದು, ಎಲ್ಲರೂ ಅವರವರ ಸ್ವಂತ ರಾಜ್ಯಗಳಿಗೆ ಹೋಗಿದ್ದಾರೆ. ಇದೀಗ ಈ ಭಾರತೀಯ ವಲಸಿಗರ ಪೈಕಿ ಓರ್ವರಾದ ಜಸ್ಪಾಲ್‌ ಸಿಂಗ್‌, ತಮ್ಮ ಪ್ರಯಾಣದ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಎಲ್ಲಾ ವಲಿಸಗರಿಗೆ ಕೈಕೋಳ ಮತ್ತು ಕಾಲಿಗೆ ಸರಪಳಿ ಬಿಗಿದು ಕರೆತರಲಾಗಿದೆ ಎಂದು ಜಸ್ಪಾಲ್‌ ಸಿಂಗ್‌ ಹೇಳಿದ್ದಾರೆ.

ಎಲ್ಲರ ಕೈಗೂ ಬೇಡಿ ಹಾಕಲಾಗಿತ್ತಲ್ಲದೇ, ಕಾಲಿಗೆ ಸರಪಳಿಯನ್ನು ಬಿಗಿಯಲಾಗಿತ್ತು. ವಿಮಾನವು ಅಮೃತಸರ್‌ಗೆ ಇಳಿದ ನಂತರವೇ ಕೈಕೋಳ ಮತ್ತು ಸರಪಳಿಯನ್ನು ತೆಗೆಯಲಾಯಿತು ಎಂದು ಜಸ್ಪಾಲ್‌ ಸಿಂಗ್‌ ತಿಳಿಸಿದ್ದಾರೆ. ಗಡಿಪಾರು ಶಿಕ್ಷೆಗೊಳಗಾದ ಪಂಜಾಬ್‌ ನಾಗರಿಕರನ್ನು ಅಮೃತಸರ್‌ ವಿಮಾನ ನಿಲ್ದಾಣದಿಂದ ಪೋಲೀಸ್‌ ವಾಹನಗಳಲ್ಲಿ ಅವರ ಸ್ವಗ್ರಾಮಗಳಿಗೆ ಕರೆದೊಯಯ್ಯಲಾಗಿದೆ.

 ಲಕ್ಷ ಲಕ್ಷ ಸಾಲ ಮಾಡಿ ಅಮೆರಿಕಕ್ಕೆ ಕಳುಹಿಸಿದ್ದ ಕುಟುಂಬ

ಗಡೀಪಾರು ಮಾಡಲಾದ ಯುವಕರಲ್ಲಿ ಒಬ್ಬರಾದ ಜಸ್ವಿಂದರ್ ಸಿಂಗ್, ಅವರ ಕುಟುಂಬವು 50 ಲಕ್ಷ ರೂಪಾಯಿ ಸಾಲ ಪಡೆದು ಈ ವರ್ಷದ ಜನವರಿ 15 ರಂದು ಅಮೆರಿಕ ತಲುಪಿದ್ದರಂತೆ. ಇವರು ಕಳೆದ ವರ್ಷ ದಸರಾ ಹಬ್ಬದ ಸಮಯದಲ್ಲಿ ಹೋಗಿದ್ದರು. ನಾವು ಸಾಲಗಳನ್ನು ವ್ಯವಸ್ಥೆ ಮಾಡಿ ಅವರನ್ನು ಅಮೆರಿಕಕ್ಕೆ ಕಳುಹಿಸಲು ಸಂಬಂಧಿಕರಿಂದ ಹಣವನ್ನು ಸಹ ಪಡೆದುಕೊಂಡಿದ್ದೆವು. ಅವರು ಹೇಗೆ ಹೋದರು ಎಂಬುದು ನಮಗೆ ತಿಳಿದಿಲ್ಲ. ಅವರಿಗೆ ಇಲ್ಲಿ ಯಾವುದೇ ಕೆಲಸ ಸಿಗಲಿಲ್ಲ, ಆದ್ದರಿಂದ ನಾವು ಅವರನ್ನು ವಿದೇಶಕ್ಕೆ ಕಳುಹಿಸಿದ್ದೇವು. ಅವರು ಅಲ್ಲಿ ಚೆನ್ನಾಗಿ ಸಂಪಾದಿಸುತ್ತಾರೆ ಎಂದು ನಾವು ಅನ್ಕೊಂಡಿದ್ದೇವು .ಅವನಿಂದ ನಮ್ಮ ಜೀವನವು ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದೆವು, ಆದರೆ ಈ ರೀತಿ ಆಗುತ್ತದೆ ಎಂದು ತಿಳಿದಿರಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ.

ಗುರುಪ್ರೀತ್ ಸಿಂಗ್ ಅವರ ವಿಷಯದಲ್ಲೂ ಇದೇ ಕಥೆ, ಅವರು ಕೇವಲ ಆರು ತಿಂಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಇವರನ್ನ ಅಮೆರಿಕಕ್ಕೆ ಕಳುಹಿಸಲು ಇವರ ಕುಟುಂಬ 45 ಲಕ್ಷ ಸಾಲ ಮಾಡಿದೆಯಂತೆ. ಸರ್ಕಾರ ನಮಗೆ ಸಹಾಯ ಮಾಡಿದರೆ ಮಾತ್ರ ನಾವು ಬದುಕಬಹುದು, ಇಲ್ಲದಿದ್ದರೆ ಎಲ್ಲವೂ ಮುಗಿದುಹೋಗುತ್ತದೆ ಎಂದು ಕುಟುಂಬದ ಸದಸ್ಯರು ಅಳುತ್ತಿದ್ದಾರೆ.

ಹರ್ವಿಂದರ್ ಸಿಂಗ್ ಅವರ ಕುಟುಂಬವು 42 ಲಕ್ಷ ರೂಪಾಯಿ ಖರ್ಚು ಮಾಡಿ ಅವರನ್ನು ಸುಮಾರು ಹತ್ತು ತಿಂಗಳ ಹಿಂದೆ ಅಮೆರಿಕಕ್ಕೆ ಕಳುಹಿಸಿತ್ತು. ಏಜೆಂಟ್ ನನ್ನ ಗಂಡನನ್ನು ಕಾನೂನುಬದ್ಧವಾಗಿ ಕಳುಹಿಸುವುದಾಗಿ ಹೇಳಿದ್ದರು, ಬದಲಿಗೆ ಅವರು ಅವರನ್ನು ‘ವಾಮಮಾರ್ಗ ಮೂಲಕ ಕಳುಹಿಸಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ. ಇವರನ್ನು ವಿದೇಶಕ್ಕೆ ಕಳುಹಿಸಲು ಗ್ರಾಮಸ್ಥರು ಮತ್ತು ಸಹೋದರ ಸಹೋದರಿಯರಿಂದ ಹಣವನ್ನು ಪಡೆದಿದ್ದರು ಎಂದು ಹೇಳಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಅವರ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ. ಸರ್ಕಾರವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂದು ಸಿಂಗ್ ಅವರ ತಂದೆ ಒತ್ತಾಯಿಸಿದರು.

ಅರ್ಧ ಎಕರೆ ಭೂಮಿ ಮಾರಿದ ಕುಟುಂಬ

ಪರ್ದೀಪ್  ಎಂಬುವರ ಕುಟುಂಬವು ಅವರನ್ನು ಅಮೆರಿಕಕ್ಕೆ ಕಳುಹಿಸಲು 41 ಲಕ್ಷ ರೂ.ಗಳನ್ನು ಖರ್ಚು ಮಾಡಿ, ತಮ್ಮ ಅರ್ಧ ಎಕರೆ ಭೂಮಿಯನ್ನು ಮಾರಿ ಸಾಲವನ್ನೂ ಪಡೆದುಕೊಂಡಿತು. ಈಗ ನಮ್ಮ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರು ಆರು ತಿಂಗಳ ಹಿಂದೆ ಹೋಗಿದ್ದರು. ನಾವು ಅವರೊಂದಿಗೆ ಮಾತನಾಡುತ್ತಿದ್ದೆವು, ಅವರು ಚೆನ್ನಾಗಿದ್ದಾರೆ ಎಂದು ಅವರು ನಮಗೆ ಹೇಳುತ್ತಿದ್ದರು. ಈಗ ಹೀಗ್ ಆಗಿದೆ ಎಂದಿದ್ದಾರೆ. ಮಗನಿಗೆ  ಸರ್ಕಾರಿ ಕೆಲಸ ನೀಡಬೇಕೆಂದು ತಾಯಿ ಒತ್ತಾಯಿಸಿದ್ದಾರೆ.

 

 ಕೈಗೆ ಕೋಳ ಹಾಕಿದ್ದಕ್ಕೆ ವಿಪಕ್ಷಗಳ ಆಕ್ರೋಶ 

ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ಅಮೆರಿಕದಿಂದ 100ಕ್ಕೂ ಅಧಿಕ ಭಾರತೀಯ ಅಕ್ರಮ ವಲಸಿಗರನ್ನು ಗಡೀಪಾರು ಮಾಡಿರುವ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದೆ. ಆಗ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆಯ ಅಧಿವೇಶನ ಮುಂದೂಡಿದರು. ಇದೇ ವಿಷಯದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಕೂಡ ಪ್ರತಿಭಟನೆ ನಡೆಸಿದರು. ಗಡೀಪಾರು ಮಾಡಲಾದ ಅಕ್ರಮ ಭಾರತೀಯ ವಲಸಿಗರ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ಈ ವಿಷಯದ ಬಗ್ಗೆ ಉತ್ತರಿಸಬೇಕು. ಅವರನ್ನು ಕರೆದುಕೊಂಡು ಬರಲು ನಮ್ಮ ವಿಮಾನ ಅಮೆರಿಕಕ್ಕೆ ಏಕೆ ಹೋಗಲಿಲ್ಲ? ಜನರನ್ನು ನಡೆಸಿಕೊಳ್ಳಬೇಕಾದ ರೀತಿ ಇದೇನಾ? ಮೋದಿ ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಕ್ರಮ ವಲಸೆ ತಡೆಯುವಂತೆ ಜೈ ಶಂಕರ್ ಕರೆ

ಅಕ್ರಮ ವಲಸಿಗರನ್ನು ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಹೊಸದಲ್ಲ ಮತ್ತು ಎಲ್ಲಾ ದೇಶಗಳು ತಮ್ಮ ಪ್ರಜೆಗಳು ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ. ಅಕ್ರಮ ವಲಸೆಯನ್ನು ತಡೆಯುವಂತೆಯೂ ಅವರು ಕರೆ ನೀಡಿದರು. ದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದರೆ ತಮ್ಮ ಪ್ರಜೆಗಳನ್ನು ವಾಪಸ್ ಕರೆದುಕೊಳ್ಳುವುದು ಎಲ್ಲಾ ದೇಶಗಳ ಬಾಧ್ಯತೆಯಾಗಿದೆ ಎಂದು ಸಚಿವರು ಹೇಳಿದರು. ಬುಧವಾರ ಅಮೆರಿಕದಿಂದ ಗಡಿಪಾರು ಮಾಡಲಾದ 104 ಭಾರತೀಯ ಅಕ್ರಮ ಭಾರತೀಯ ವಲಸಿಗರ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್ ಅವರು ಈ ಹೇಳಿಕೆಗಳನ್ನು ನೀಡಿದರು. ಗಡಿಪಾರಾದವರು ಮನೆಗೆ ಹಿಂದಿರುಗುವಾಗ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳಲು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ರಾಜತಾಂತ್ರಿಕರು ಹೇಳಿದರು.  ಹೀಗೆ ಸಾಕಷ್ಟು ಯುವಕರ ಅಮೆರಿಕದ ಕನಸು ಕಂಡು ಬೀದಿಗೆ ಬಿದ್ದಿದ್ದಾರೆ. ಮನೆ ಮಾರಿ ಜಮೀನು ಮಾರಿ ಸಾಲ ಮಾಡಿ ಹೋದವರು ಈಗ ಜೀವನ ನಡೆಸೋಕೆ ಏನು ಆಧಾರವಿಲ್ಲದೇ ದಿಕ್ಕು ದೋಚದಂತೆ ಆಗಿದ್ದಾರೆ. ಎಜೆನ್ಸಿ ಗಳ ಹಣದಾಹಕ್ಕೆ ಅದೆಷ್ಟೋ ಯುವಕರು ತಮ್ಮ ಭವಿಷ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ.

 

 

Kishor KV

Leave a Reply

Your email address will not be published. Required fields are marked *