ಟೀಂ ಇಂಡಿಯಾಗಿಲ್ಲ ಸ್ಪಾನ್ಸರ್ ಶಿಪ್ – ಪ್ರಾಯೋಜಕರಿಲ್ಲದ ಜೆರ್ಸಿಯಲ್ಲೇ ಏಷ್ಯಾಕಪ್
BCCI ಬಿಡ್ಡಿಂಗ್ ಕಂಡೀಷನ್ಸ್ ಏನೆಲ್ಲಾ?

ಟೀಂ ಇಂಡಿಯಾಗಿಲ್ಲ ಸ್ಪಾನ್ಸರ್ ಶಿಪ್ – ಪ್ರಾಯೋಜಕರಿಲ್ಲದ ಜೆರ್ಸಿಯಲ್ಲೇ ಏಷ್ಯಾಕಪ್BCCI ಬಿಡ್ಡಿಂಗ್ ಕಂಡೀಷನ್ಸ್ ಏನೆಲ್ಲಾ?

ಏಷ್ಯಾಕಪ್​ಗೆ ರೆಡಿಯಾಗ್ತಿರೋ ಟೀಂ ಇಂಡಿಯಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಿರೋ ವಿಚಾರ ಅಂದ್ರೆ ಜೆರ್ಸಿ ಸ್ಪಾನ್ಸರ್​ಶಿಪ್ ಯಾರದ್ದು ಅನ್ನೋದು. ಡ್ರೀಮ್ 11 ಕಂಪನಿ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದಿಂದ ಹೊರಬಿದ್ದ ಮೇಲೆ ಹೊಸಬರು ಯಾರು ಅನ್ನೋ ಕ್ಯೂರಿಯಾಸಿಟಿ ಇತ್ತು. ಬಟ್ ಈಗ ಭಾರತದ ಆಟಗಾರರು ಪ್ರಾಯೋಜಕರಿಲ್ಲದೆ ಕಣಕ್ಕಿಳಿಯಲಿದ್ದಾರೆ. ಅಂದ್ರೆ ಭಾರತೀಯ ಆಟಗಾರರು ಧರಿಸುವ ಜೆರ್ಸಿ ಮುಂಭಾಗದಲ್ಲಿ ಯಾವುದೇ ಕಂಪೆನಿಯ ಹೆಸರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಇಂಡಿಯಾ ಎಂಬ ಬರಹ ರಾರಾಜಿಸಲಿದೆ.

ಇದನ್ನೂ ಓದಿ : HITಮ್ಯಾನ್ ಸಖತ್ ಫಿಟ್ – 30 ದಿನದಲ್ಲಿ 20 KG ಡೌನ್

ಏಷ್ಯಾಕಪ್ ಗೆ ಸ್ಪಾನ್ಸರ್ ಶಿಪ್ ಇಲ್ಲದೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ!

ಹಿಂದೆಲ್ಲಾ ಭಾರತದ ಪಂದ್ಯಗಳಿದ್ದಾಗ ಆಟಗಾರರ ಜೆರ್ಸಿ ಮೇಲೆ ಇಂಡಿಯಾ ಎಂದು ಬರೆದಿದ್ದರೂ ಅದರ ಮೇಲೆ ಸ್ಪಾನ್ಸರ್ ಆಗಿರುವ ಡ್ರೀಮ್ 11 ಕಂಪೆನಿಯ ಜಾಹೀರಾತು ಇರ್ತಾ ಇತ್ತು. ಆದ್ರೀಗ ಟೀಮ್ ಇಂಡಿಯಾ ಪ್ರಾಯೋಜಕತ್ವದಿಂದ ಡ್ರೀಮ್ 11 ಕೈ ಬಿಡಲಾಗಿದೆ. ಭಾರತ ಸರ್ಕಾರವು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಅಂಗೀಕರಿಸಿದ ನಂತರ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿದೆ. ಅಲ್ದೇ ಹೊಸ ಪ್ರಾಯೋಜಕರನ್ನು ಆಹ್ವಾನಿಸಿದೆ.

ಪ್ರಾಯೋಜಕರಿಲ್ಲದೆ ಮೈದಾನಕ್ಕೆ!

2023ರಲ್ಲಿ ಡ್ರೀಮ್ 11 ಹಾಗೂ ಬಿಸಿಸಿಐ ನಡುವೆ 358 ಕೋಟಿಗೆ ಒಪ್ಪಂದ

2026 ರವರೆಗೆ ಡ್ರೀಮ್ 11 ಇಂಡಿಯಾದ ಜೆರ್ಸಿ ಮೇಲಿನ ಪ್ರಾಯೋಜಕತ್ವ

ಡ್ರೀಮ್ 11 ಜೊತೆಗಿನ 358 ಕೋಟಿ ರೂ.ಗಳ ಒಪ್ಪಂದವನ್ನು ಕೊನೆಗೊಳಿಸಿದೆ

ಸೆಪ್ಟೆಂಬರ್ 12 ರವರೆಗೆ ಐಟಿಟಿಯನ್ನು ಖರೀದಿಸಬಹುದು, 16ಕ್ಕೆ ಅಂತಿಮ ಬಿಡ್

ಏಷ್ಯಾಕಪ್ ಶುರುವಾಗುವುದು ಸೆಪ್ಟೆಂಬರ್ 9 ರಂದು, ಮೊದಲ ಪಂದ್ಯ ಸೆ.10ಕ್ಕೆ

ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿ

ಟೀಮ್ ಇಂಡಿಯಾದ ಮೂರನೇ ಪಂದ್ಯ ಇರುವುದು ಸೆಪ್ಟೆಂಬರ್ 19 ರಂದು

ಬಿಡ್ಡಿಂಗ್ ಬಳಿಕವಷ್ಟೇ ಹೊಸ ಪ್ರಾಯೋಜಕರು ಯಾರು ಅನ್ನೋದು ನಿರ್ಧಾರ

ಪ್ರಾಯೋಜಕತ್ವ ಇಲ್ಲದ ಜೆರ್ಸಿಯಲ್ಲಿ ಕಣಕ್ಕಿಳಿಯುವುದು ಗ್ಯಾರಂಟಿ ಎನ್ನಲಾಗಿದೆ

ಮೇಜರ್ ಡಿಸಿಷನ್ ಅಂದ್ರೆ ಕಟ್ಟು ನಿಟ್ಟಿನ ಅರ್ಹತಾ ಮಾನದಂಡಗಳನ್ನು ಬಿಸಿಸಿಐ

ಆಲ್ಕೋಹಾಲ್, ಜೂಜಾಟ, ಬೆಟ್ಟಿಂಗ್, ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಹಣದ ಗೇಮಿಂಗ್

ತಂಬಾಕು ಅಥವಾ ಅಶ್ಲೀಲತೆಯಂತಹ ಸಾರ್ವಜನಿಕ ನೈತಿಕತೆಗೆ ಧಕ್ಕೆ ತಂದ್ರೆ ಅವಕಾಶ ಇಲ್ಲ

Shantha Kumari