ಸಮುದ್ರದಲ್ಲಿ ಭದ್ರತೆ ಹೇಗಿರುತ್ತೆ? – ಸ್ಕ್ಯಾಮ್‌ಗಳಿಗೆ ಹೇಗೆ ಬ್ರೇಕ್ ಬೀಳುತ್ತೆ?
ಕರಾವಳಿ ಕಾವಲು ಪಡೆ ಎಷ್ಟು ಶಕ್ತಿಶಾಲಿ?
ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಪರ್ಕ ಸಾಧಿಸಲು ಇರುವ ಕೊಂಡಿಯಲ್ಲಿ ಸಮುದ್ರಮಾರ್ಗ ಒಂದು. ಶತ್ರು ರಾಜ್ಯಗಳು ಈ ಸಮುದ್ರ ಮಾರ್ಗಗಳ ಮೂಲಕವೂ ದೇಶದ ಮೇಲೆ ದಾಳಿ ಮಾಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಮುದ್ರ ತೀರದಲ್ಲಿ ಭದ್ರತೆ ಟೈಟ್ ಆಗಿರುತ್ತೆ.. ಸಮುದ್ರದಲ್ಲಿ ಕಳ್ಳಸಾಗಣಿಕೆ ಆಗದಂತೆ ತಡೆಯಲಾಗುತ್ತೆ. ಭಾರತವು 2094 ಕಿಮೀ ದ್ವೀಪ ಪ್ರದೇಶಗಳು ಮತ್ತು 5422 ಕಿಮೀ ಮುಖ್ಯ ಭೂಭಾಗದ ಕರಾವಳಿಯನ್ನು ಒಳಗೊಂಡಂತೆ ಒಟ್ಟು 7516.6 ಕಿಮೀ ಕರಾವಳಿಯನ್ನು ಹೊಂದಿದೆ. ಭಾರತೀಯ ಕರಾವಳಿಯು ಒಂಬತ್ತು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ.. ಪಶ್ಚಿಮಕ್ಕೆ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರ ಮತ್ತು ಪೂರ್ವಕ್ಕೆ ಬಂಗಾಳ ಕೊಲ್ಲಿಯಿಂದ ಗಡಿಯಾಗಿದೆ. ಭಾರತದ ಕರಾವಳಿ ರಾಜ್ಯಗಳೆಂದರೆ ಕೇರಳ, ತಮಿಳುನಾಡು, ಗುಜರಾತ್, ಪಶ್ಚಿಮ ಬಂಗಾಳ, ಗೋವಾ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಒಡಿಶಾವಾಗಿದೆ. ದಮನ್ ಮತ್ತು ದಿಯು, ಪುದುಚೇರಿ, ಲಕ್ಷದ್ವೀಪ ದ್ವೀಪಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕರಾವಳಿ ಕೇಂದ್ರಾಡಳಿತ ಪ್ರದೇಶಗಳಾಗಿವೆ . ಗುಜರಾತ್ ರಾಜ್ಯಗಳಲ್ಲಿ ಅತಿ ಉದ್ದದ ಕರಾವಳಿಯನ್ನು ಹೊಂದಿದೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಯುಟಿಗಳಲ್ಲಿ ಅತಿ ಉದ್ದದ ಕರಾವಳಿಯನ್ನು ಹೊಂದಿವೆ.
ಇದನ್ನೂ ಓದಿ : ಭೂಮಿಯ ಅಂತ್ಯ ಯಾವಾಗ? ವಿಜ್ಞಾನಿಗಳು ಕೊಟ್ಟ ವಾರ್ನಿಂಗ್ ಏನು?
ಭಾರತೀಯ ನೌಕಾಪಡೆಯು ಕಡಲಾಚೆಯ ಮತ್ತು ಕರಾವಳಿ ಭದ್ರತೆ ಸೇರಿದಂತೆ ಭಾರತದ ಕಡಲ ಭದ್ರತೆಯ ಜವಾಬ್ದಾರಿಯನ್ನು ಹೊಂದಿದೆ. ಭಾರತೀಯ ನೌಕಾಪಡೆಯು ಕರಾವಳಿ ಪೊಲೀಸ್, ಭಾರತೀಯ ಕರಾವಳಿ ಕಾವಲು ಪಡೆ, ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಕಡಲ ಭದ್ರತೆಯ ಕಾರ್ಯದಲ್ಲಿ ಸಹಾಯ ಮಾಡುತ್ತವೆ. ನವೆಂಬರ್ 26, 2008 ರಂದು ಮುಂಬೈ ದಾಳಿಯ ನಂತರ ಕರಾವಳಿ ಭದ್ರತಾ ಆಯಾಮಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಯಿತು. ಭವಿಷ್ಯದ ಅಂತಹ ದಾಳಿಗಳನ್ನು ನಿಲ್ಲಿಸಲು CSS ಅನ್ನು ರೂಪಿಸಲಾಯಿತು
ಮೀನುಗಾರರಿಗೆ ಬಯೋಮೆಟ್ರಿಕ್ ID ಕಾರ್ಡ್
ಪಶುಸಂಗೋಪನೆ ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ಮೀನುಗಾರರಿಗೆ ಮೀನುಗಾರರ ಬಯೋಮೆಟ್ರಿಕ್ ಐಡಿ ಕಾರ್ಡ್‌ಗಳನ್ನು ನೀಡುತ್ತದೆ. ಒಟ್ಟು ಗುರುತಿಸಲಾದ ಅರ್ಹ ಮೀನುಗಾರರಲ್ಲಿ 99 % ರಷ್ಟು ಮೀನುಗಾರರು ಬಯೋಮೆಟ್ರಿಕ್ ID ಕಾರ್ಡ್‌ಗಳನ್ನು ಪಡೆದಿದ್ದಾರೆ.
ಕರಾವಳಿ ಕಾವಲು ಪಡೆಗಳ ಕೆಲಸವೇನು?
ಭಾರತೀಯ ಕರಾವಳಿ ಕಾವಲು ಪಡೆಗಳು ಕಡಲಾಚೆಯ ನಿಲ್ದಾಣಗಳ ರಕ್ಷಣೆ, ಮೀನುಗಾರರಿಗೆ ರಕ್ಷಣೆ ಹಾಗೂ ನೆರವು, ಸಮುದ್ರ ಸುತ್ತ ಮುತ್ತಲಿನ ಪ್ರದೇಶಗಳ ರಕ್ಷಣೆ, ಕಳ್ಳಸಾಗಣೆ-ವಿರೋಧಿ ಕಾರ್ಯಾಚರಣೆಗಳು, ಕಡಲ ಕಾನೂನುಗಳ ಜಾರಿ ಸೇರಿದಂತೆ ಇನ್ನಿತ್ತರ ಕಾರ್ಯವನ್ನು ನಿರ್ವಹಿಸುತ್ತದೆ. ಕೋಸ್ಟ್ ಗಾರ್ಡ್ ಭಾರತೀಯ ನೌಕಾಪಡೆ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ ಮತ್ತು ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ದೇಶೀಯ ಆರ್ಥಿಕತೆಗೆ ಸಮಸ್ಯೆಗಳನ್ನು ಉಂಟುಮಾಡುವ ಸರಕುಗಳ ಕಳ್ಳಸಾಗಣೆಯನ್ನು ತಡೆಗಟ್ಟುವ ಕೆಲಸವನ್ನು ಮಾಡುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ ಭಾರತದ 7,51,660 ಕಿಮೀ ಕರಾವಳಿಯನ್ನು, ಹಲವಾರು ರಾಜ್ಯಗಳಲ್ಲಿ ಹಾಗೂ ಕೆಲವು ಜನನಿಬಿಡ ವ್ಯಾಪಾರ ಮಾರ್ಗಗಳಲ್ಲಿ ರಕ್ಷಿಸಿ, ದೇಶದ ರಕ್ಷಣೆಯನ್ನು ಮಾಡುತ್ತಿದೆ.
ಭಾರತೀಯ ಕರಾವಳಿ ಕಾವಲು ಪಡೆ ಎಷ್ಟು ಶಕ್ತಿಶಾಲಿ?
ಆರಂಭದಲ್ಲಿ ಸಮುದ್ರ ಹಾಗೂ ವಿಶೇಷ ಆರ್ಥಿಕ ವಲಯದಲ್ಲಿ ಕಣ್ಗಾವಲುಗಾಗಿ ಏಳು ಹಡಗುಗಳು ಮಾತ್ರ ಇದ್ದವು. ಇದೀಗ ನೌಕಾಪಡೆಯಲ್ಲಿ 158 ಹಡಗುಗಳು ಮತ್ತು 78 ವಿಮಾನಗಳ ದಾಸ್ತಾನು ಹೊಂದಿದೆ. ಇದು 3 ಮಾಲಿನ್ಯ ನಿಯಂತ್ರಣ ಹಡಗುಗಳು, 27 ಆಫ್‌ಶೋರ್ ಗಸ್ತು ಹಡಗುಗಳು, 45 ವೇಗದ ಗಸ್ತು ಹಡಗುಗಳು, 82 ಗಸ್ತು ಹಡಗುಗಳು, 14 ಗಸ್ತು ನೌಕೆಗಳು ಮತ್ತು 18 ಹೋವರ್‌ಕ್ರಾಫ್ಟ್‌ಗಳನ್ನು ಹೊಂದಿದೆ. ಇದಲ್ಲದೆ, ಕೋಸ್ಟ್ ಗಾರ್ಡ್ 77 ವಿಮಾನಗಳನ್ನು ಹೊಂದಿದ್ದು, ಇದರಲ್ಲಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿವೆ. ಒಟ್ಟಾರೆಯಾಗಿ ಭಾರತೀಯ ಕರಾವಳಿ ಭದ್ರತಾ ಪಡೆಯು ವಿಶ್ವದ ನಾಲ್ಕನೇ ಅತಿ ದೊಡ್ಡ ಕೋಸ್ಟ್ ಗಾರ್ಡ್ ಆಗಿ ಬೆಳೆದು ನಿಂತಿದ್ದು ಕಡಲ ಗಡಿಗಳನ್ನು ರಕ್ಷಿಸುತ್ತಿದೆ.