ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತ… ನಾಯಕ ರೋಹಿತ್ ಶರ್ಮಾಗೆ ಇಂಜುರಿ!
ಉಪನಾಯಕ ಕೆ. ಎಲ್ ರಾಹುಲ್ ತಂಡ ಮುನ್ನಡೆಸುವ ಸಾಧ್ಯತೆ!

ಅಡಿಲೇಡ್: ಓವಲ್ ಮೈದಾನದಲ್ಲಿ ಭಾರತ – ಇಂಗ್ಲೆಂಡ್ ನಡುವೆ ಟಿ-20 ವಿಶ್ವಕಪ್ ನ ಸೆಮಿಪೈನಲ್ ಪಂದ್ಯಾಟ ನಡೆಯಲಿದ್ದು, ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 2024ರ ಟಿ-20 ವಿಶ್ವಕಪ್ ಗೆ ನೇರ ಅರ್ಹತೆ ಪಡೆದ ನೆದರ್ಲೆಂಡ್ಸ್
ರೋಹಿತ್ ಶರ್ಮಾ ಅವರ ಕೈಗೆ ಪೆಟ್ಟಾಗುತ್ತಿದ್ದಂತೆ, ವೈದ್ಯಕೀಯ ಸಿಬ್ಬಂದಿಗಳು ಅವರನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಿದ್ದಾರೆ. ಇದೀಗ ತಂಡದ ನಾಯಕನಿಗೆ ಪೆಟ್ಟಾಗಿರುವುದು ತಂಡದ ಮ್ಯಾನೇಜ್ ಮೆಂಟ್ ಗೆ ತಲೆನೋವಾಗಿದೆ.
Indian captain Rohit Sharma hit on his right hand during a practice session in Adelaide ahead of the semi-final match against England. pic.twitter.com/HA4xGJDC51
— ANI (@ANI) November 8, 2022
ಆದರೆ ರೋಹಿತ್ ಶರ್ಮಾಗೆ ಇಂಜುರಿಯಾಗಿರುವುದರ ಕುರಿತು ಬಿಸಿಸಿಐ ಯಾವೂದೇ ಮಾಹಿತಿ ಹೊರಹಾಕಿಲ್ಲ. ಮೇಲ್ನೋಟಕ್ಕೆ ಸಣ್ಣ ಇಂಜುರಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಆದಷ್ಟು ಬೇಗ ನಾಯಕ ರೋಹಿತ್ ಶರ್ಮಾ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯ ಆಡದಿದ್ದರೆ, ಉಪನಾಯಕ ಕೆ. ಎಲ್ ರಾಹುಲ್ ತಂಡ ಮುನ್ನಡೆಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನೋಡಿರಿ

