ಕುಸಿದು ಬಿದ್ದ ಆನೆ ರಕ್ಷಣೆಗೆ ಭಾರತೀಯ ಸೇನೆ ಸಾಥ್ – ಹೇಗಿದೆ ಗೊತ್ತಾ ‘ಆಪರೇಷನ್ ಮೋತಿ’..!?

ಕುಸಿದು ಬಿದ್ದ ಆನೆ ರಕ್ಷಣೆಗೆ ಭಾರತೀಯ ಸೇನೆ ಸಾಥ್ – ಹೇಗಿದೆ ಗೊತ್ತಾ ‘ಆಪರೇಷನ್ ಮೋತಿ’..!?

ಲೆಕ್ಕವೇ ಸಿಗದಷ್ಟು ದೂರ ಸಂಚಾರ ಮಾಡಿದ್ದ ಆನೆ ಇದೀಗ ಎದ್ದು ನಿಲ್ಲೋಕೂ ಕಷ್ಟ ಪಡುತ್ತಿದೆ. ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಆಹಾರ ಸೇವನೆಯೂ ಸಾಧ್ಯವಾಗುತ್ತಿಲ್ಲ. 35 ವರ್ಷದ ಆನೆಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಭಾರತೀಯ ಸೇನೆ ಕೂಡ ಸಾಥ್ ನೀಡಿದೆ.

ಇದನ್ನೂ ಓದಿ : ಗದಗದಲ್ಲಿ “ಮೊಗ್ಯಾಂಬೋ, ರಾಮು ಕಾಕಾ” ಪ್ರತ್ಯಕ್ಷ! – ಸಂಶೋಧಕರೇ ಬೆರಗಾಗಿದ್ದೇಕೆ?

ಭಾರತೀಯ ಸೇನೆಯ ಇಂಜಿನಿಯರ್‌ಗಳು ಆನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ನವೀನ ರೀತಿಯ ಜೋಲಿಗಳನ್ನು ಬಳಸಿ ರಾತ್ರಿಯಿಡೀ ಆರೈಕೆ ಮಾಡ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಆನೆಯನ್ನ ಉಳಿಸಲು NGO ಜೊತೆ ವೈದ್ಯಕೀಯ ತಂಡವು ಚಿಕಿತ್ಸೆ ನೀಡುತ್ತಿದೆ. ಎರಡು ವಾರಗಳ ಹಿಂದೆ ಮೋತಿ ಹೆಸರಿನ ಆನೆ ಕುಸಿದು ಬಿದ್ದಿತ್ತು. ವನ್ಯಜೀವಿ ಎಸ್‌ಒಎಸ್‌ನ ವೈದ್ಯಕೀಯ ತಂಡವು ಜನವರಿ 22 ರಿಂದ ಆನೆಯ ಆರೈಕೆಯನ್ನು ಮಾಡುತ್ತಿದೆ.

ನಿನ್ನೆಯಿಂದ ಆನೆಯ ಆರೈಕೆಗೆ ಭಾರತೀಯ ಸೇನೆ ಕೂಡ ಸಾಥ್ ನೀಡಿದೆ. ಭಾರತೀಯ ಆರ್ಮಿ ಇಂಜಿನಿಯರ್‌ಗಳ ರಕ್ಷಣಾ ತಂಡವು ಎನ್‌ಜಿಒ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಮೋತಿ ಔಷಧಿ ಸ್ವೀಕರಿಸಲು, ತನ್ನ ಕಾಲಿನ ಮೇಲೆ ನಿಲ್ಲಲು ಸಹಾಯವಾಗುವಂತೆ ಗೋಪುರ ನಿರ್ಮಾಣ ಮಾಡಲಾಗಿದೆ. ಸೇನಾ ಮಾಜಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಜನರಲ್ ವಿ.ಕೆ ಸಿಂಗ್ ಅವರು ಆನೆಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಉತ್ತರಾಖಂಡದ ರಾಂಪುರ ಜಿಲ್ಲೆಯಲ್ಲಿ ಮೋತಿಯನ್ನು ಪ್ರವಾಸಿಗರ ಸವಾರಿ ಮತ್ತು ಭಿಕ್ಷಾಟನೆಗೆ ಬಳಸಲಾಗುತ್ತಿತ್ತು. ಕಾಲು ಮುರಿತ ಮತ್ತು ಸವೆದ ಪಾದದ ಪ್ಯಾಡ್‌ಗಳಿಂದಾಗಿ ಆನೆ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿತ್ತು. ಮೋತಿ ರಕ್ಷಣೆಗಾಗಿ ಹೆಚ್ಚಿನ ಸಿಬ್ಬಂದಿ ಮತ್ತು ಅಗತ್ಯ ಉಪಕರಣಗಳೊಂದಿಗೆ ಐದು ವಾಹನಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

suddiyaana