ಉಗ್ರರ ಅಡಗುದಾಣ ಪತ್ತೆ ಹಚ್ಚಿದ ಸೇನೆ – ಗಣರಾಜ್ಯೋತ್ಸವಕ್ಕಿದೆಯಾ ‘ಟೆರರ್’ ಟೆನ್ಷನ್!?

ಉಗ್ರರ ಅಡಗುದಾಣ ಪತ್ತೆ ಹಚ್ಚಿದ ಸೇನೆ – ಗಣರಾಜ್ಯೋತ್ಸವಕ್ಕಿದೆಯಾ ‘ಟೆರರ್’ ಟೆನ್ಷನ್!?

ಗಣರಾಜ್ಯೋತ್ಸವಕ್ಕೆ ಕೌಂಟ್​ಡೌನ್ ಶುರುವಾಗಿರುವ ಹೊತ್ತಲ್ಲೇ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಬೇಟೆಯಾಡಿದೆ. ಉಗ್ರರ ಎರಡು ಅಡಗುತಾಣಗಳನ್ನ ಭೇದಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ಸೇನಾಪಡೆ ಉಗ್ರರ ಎರಡು ಅಡಗುತಾಣಗಳನ್ನು ಪತ್ತೆ ಹಚ್ಚಿದೆ. ರಟ್ಟಾ ಜಬರ ಅರಣ್ಯದಲ್ಲಿ ಒಂದು ಅಡಗುತಾಣವನ್ನು ಮತ್ತು ಧೋಬಾ ಅರಣ್ಯದಲ್ಲಿ ಇನ್ನೊಂದು ಅಡಗುತಾಣವನ್ನು ಭೇದಿಸಲಾಗಿದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಯಾವ ಮಾರ್ಗದಲ್ಲಿ ಸಂಚಾರ ಗೊತ್ತಾ..!?

ಕಲೈ ಟಾಪ್, ಶೀಂದ್ರಾ, ರಟ್ಟಾ ಜಬ್ಬಾರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸೇನಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಸೇನಾಪಡೆಯ ಶೋಧ ಕಾರ್ಯಾಚರಣೆಗೆ ಪೊಲೀಸ್ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಯೂ ಸಹಾಯ ಮಾಡಿದ್ರು. ಶೋಧ ಕಾರ್ಯಾಚರಣೆ  ವೇಳೆ ಎರಡು ರೈಫಲ್‌ಗಳು, ಮೂರು ಮ್ಯಾಗಜೀನ್‌ಗಳು ಮತ್ತು 35 ಮದ್ದುಗುಂಡುಗಳನ್ನು ಸೇನಾಪಡೆ ವಶಕ್ಕೆ ಪಡೆದಿರೋದಾಗಿ ಸೇನಾಧಿಕಾರಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಜನವರಿ 15 ರಂದು ಭದ್ರತಾ ಪಡೆಗಳು ಪೂಂಚ್‌ನಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿತ್ತು. ಸುರನ್‌ಕೋಟೆ ತಹಶಿಲ್‌ನ ಬಹಿಯಾನ್ ವಾಲಿ ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಅಡಗುತಾಣವನ್ನು ಭೇದಿಸಲಾಗಿದೆ.

ಸದ್ಯ ಇವತ್ತಿನ ದಾಳಿ ವೇಳೆ ಮೂರು ಎಕೆ ಅಸಾಲ್ಟ್ ರೈಫಲ್‌ಗಳು, 10 ಗ್ರೆನೇಡ್‌ಗಳನ್ನು ಒಳಗೊಂಡ ಬಾಕ್ಸ್, ಗ್ರೆನೇಡ್ ಥ್ರೋವರ್ ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

suddiyaana