ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸೋದಾಗಿ ಭಾರತ ಮೂಲಕ ನಿಕ್ಕಿ ಹ್ಯಾಲೆ ಘೋಷಣೆ!
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಭಾರತ ಮೂಲದ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ಘೋಷಿಸಿದ್ದಾರೆ. ಈ ಮೂಲಕ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿರುವ ಮೊದಲ ಭಾರತೀಯ ಮೂಲದ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ವಿಶ್ವದ ದುಬಾರಿ ಮಾವಿನ ತಳಿ ಭಾರತದಲ್ಲೂ ಬೆಳೆಸಲು ಸಿದ್ಧತೆ – 1 ಕೆಜಿ ಹಣ್ಣಿನ ಬೆಲೆ ಎಷ್ಟು ಗೊತ್ತಾ?
51 ವರ್ಷದ ಹ್ಯಾಲಿ ಸೌತ್ ಕೆರೊಲಿನಾದಲ್ಲಿ ಎರಡು ಬಾರಿ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿಯೂ ಹೌದು. ದಕ್ಷಿಣ ಕೆರೊಲಿನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹ್ಯಾಲಿ ‘ಬಲವಾದ ಅಮೆರಿಕಕ್ಕಾಗಿ, ಹೆಮ್ಮೆಯ ಅಮೆರಿಕಕ್ಕಾಗಿ ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಹ್ಯಾಲಿಯವರ ಪೋಷಕರು ಪಂಜಾಬ್ ಮೂಲದವರಾಗಿದ್ದು 1960ರ ದಶಕದಲ್ಲಿ ಅಮೆರಿಕಕ್ಕೆ ತೆರಳಿದ್ದರು. ಬಳಿಕ ಕುಟುಂಬಸ್ಥರೆಲ್ಲಾ ಅಲ್ಲಿಯೇ ವಾಸಿಸುತ್ತಿದ್ದಾರೆ. ಇನ್ನು ಹ್ಯಾಲಿ ಒಂದು ಕಾಲದ ತಮ್ಮ ನಾಯಕ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೂನಿಯರ್ ಹಾಗೂ ಅವರಿಗೆ ಪರ್ಯಾಯ ಹೊಸ ಮುಖ ಎಂದು ತಮ್ಮನ್ನ ತಾವು ಬಿಂಬಿಸಿಕೊಂಡಿದ್ದಾರೆ.