ಭಾರತೀಯ ವಾಯುಸೇನೆಗೆ 91ರ ಸಂಭ್ರಮ –  72 ವರ್ಷಗಳ ಬಳಿಕ ಇಂಡಿಯನ್ ಏರ್‌ಫೋರ್ಸ್‌ಗೆ ಹೊಸ ಧ್ವಜ

ಭಾರತೀಯ ವಾಯುಸೇನೆಗೆ 91ರ ಸಂಭ್ರಮ –  72 ವರ್ಷಗಳ ಬಳಿಕ ಇಂಡಿಯನ್ ಏರ್‌ಫೋರ್ಸ್‌ಗೆ ಹೊಸ ಧ್ವಜ

ನವದೆಹಲಿ: ಭಾರತೀಯ ವಾಯುಸೇನೆ ಸುಮಾರು 72 ವರ್ಷಗಳ ಬಳಿಕ ಹೊಸ ಧ್ವಜವನ್ನು ಅನಾವರಣಗೊಳಿಸಿದೆ. 91ನೇ ಭಾರತೀಯ ವಾಯುಸೇನೆಯ ದಿನಾಚರಣೆಯ ಅಂಗವಾಗಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ಹೊಸ ಧ್ವಜವನ್ನು ವಾಯುಸೇನೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಅನಾವರಣಗೊಳಿಸಿದ್ದಾರೆ. ಈ ಮೂಲಕ ಭಾರತೀಯ ವಾಯುಸೇನೆಗೆ 72 ವರ್ಷಗಳ  ನಂತರ  ಹೊಸ ಧ್ವಜವನ್ನು ಪಡೆದಂತಾಗಿದೆ.

ವಾಯುಸೇನೆಯ ಹೊಸ ಧ್ವಜದಲ್ಲಿ ರಾಯಲ್‌ ಇಂಡಿಯನ್‌ ಏರ್‌ಪೋರ್ಸ್‌ನ ಚಿಹ್ನೆಯ ಜೊತೆ ಯೂನಿಯನ್‌ ಜಾಕ್  ಹಾಗೂ ಕೆಂಪು ಬಿಳಿ ಮತ್ತು ನೀಲಿ ಮಿಶ್ರಿತ ಬಣ್ಣದ  ಆರ್‌ಐಎಫ್‌ ರೌಂಡಲ್ ಇದೆ.  ಹೊಸ ಧ್ವಜವನ್ನು ಧ್ವಜಸ್ತಂಭದಲ್ಲಿ ಹಾರಿಸುವಾಗ ಹಳೆಯ ಧ್ವಜವನ್ನು ಕೆಳಕ್ಕೆ ಎಳೆದು, ಗೌರವದಿಂದ ಮಡಚಿ ವಾಯುಸೇನೆ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಈ ಹಳೆಯ ಧ್ವಜ ಇನ್ನು ಮುಂದೆ ಹೊಸದಿಲ್ಲಿಯ ಏರ್ ಫೋರ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್‌! – ನ. 7 ರಿಂದ ಮತದಾನ,  ಡಿ. 3 ಕ್ಕೆ ಫಲಿತಾಂಶ

ಈ ಹೊಸ ಧ್ವಜದಲ್ಲಿ ಐಎಎಫ್‌ನ ಚಿಹ್ನೆಯೂ ಇನ್ನು  ಧ್ವಜದ ಬಲಮೂಲೆಯಲ್ಲಿರಲಿದೆ.  ಎಡಭಾಗದಲ್ಲಿ  ರಾಷ್ಟ್ರೀಯ ಧ್ವಜ ಹಾಗೂ ಕೆಳಭಾಗದಲ್ಲಿ ಐಎಎಫ್‌ನ ತ್ರಿವರ್ಣ ರೌಂಡಲ್‌(ವೃತ) ಇರಲಿದೆ.  ಈ ಚಿಹ್ನೆಯನ್ನು 1951ರಲ್ಲಿ ಅಳವಡಿಸಲಾಗಿತ್ತು.  ಈ  ಏರ್‌ಫೋರ್ಸ್ ಚಿಹ್ನೆಯಲ್ಲಿ ರಾಷ್ಟ್ರ ಲಾಂಚನ ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದ್ದು,  ಮೇಲ್ಭಾಗದಲ್ಲಿ ಅಶೋಕ ಲಾಂಛನವಿದೆ. ಇದರ ಕೆಳಗೆ ರೆಕ್ಕೆ ಬಿಚ್ಚಿ ಹಾರುವ ಹಿಮಾಲಯದ ಹದ್ದಿದ್ದು, ಹೋರಾಟದ ಗುಣವನ್ನು ಇದು ಸೂಚಿಸುತ್ತದೆ. ತಿಳಿ ನೀಲಿ ಬಣ್ಣದ ವೃತ್ತವೂ ಭಾರತೀಯ ವಾಯುಸೇನೆ ಎಂದು ಬರೆದಿದ್ದು ಹದ್ದನ್ನು ಸುತ್ತುವರಿಯುತ್ತದೆ.

ಈ ಹದ್ದಿನ ಕೆಳಗೆ ದೇವನಾಗರಿ ಭಾಷೆಯಲ್ಲಿ ಐಎಎಫ್ ಧ್ಯೇಯವಾಕ್ಯ ನಬೋ ಸ್ಪರ್ಶ್ ದೀಪ್ತಂ ಅಂದರೆ ‘ವೈಭವದಿಂದ ಆಕಾಶವನ್ನು ಸ್ಪರ್ಶಿಸುವುದು’ ಎಂಬುದನ್ನು ಚಿನ್ನದ ಬಣ್ಣದಲ್ಲಿ ಬರೆಯಲಾಗಿದೆ. ಈ ಧ್ಯೇಯವಾಕ್ಯವನ್ನು ಭಗವದ್ಗೀತೆಯ  ಅಧ್ಯಾಯ 11ರ 24ನೇ ಶ್ಲೋಕದಿಂದ ತೆಗೆಯಲಾಗಿದೆ.

Shwetha M