ವರ್ಕೌಟ್ ಆಯ್ತು K.L ರಾಹುಲ್ ಎಡಗೈ ಟಾಸ್‌ – 2 ವರ್ಷದ ಬಳಿಕ ODIನಲ್ಲಿ ಟಾಸ್ ಗೆದ್ದ ಭಾರತ

ವರ್ಕೌಟ್ ಆಯ್ತು K.L ರಾಹುಲ್ ಎಡಗೈ ಟಾಸ್‌ – 2 ವರ್ಷದ ಬಳಿಕ ODIನಲ್ಲಿ ಟಾಸ್ ಗೆದ್ದ ಭಾರತ

ದಕ್ಷಿಣ ಆಫ್ರೀಕಾ ಮತ್ತು ಭಾರತದ ನಡುವೆ ನೆಡಯುತ್ತಿರುವ  ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವುದು ಬಹುತೇಕ ಪಿಕ್ಸ್ ಅಂತಾನೇ ಹೇಳಬಹುದು. ಯಾಕಂದ್ರೆೆ  ಬರೋಬ್ಬರಿ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್​​ನಲ್ಲಿ ಟಾಸ್ ಗೆದ್ದಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದಿದ್ದಾರೆ. ಈ ಮೂಲಕ 20 ಪಂದ್ಯಗಳ ಸುದೀರ್ಘ ಟಾಸ್​ ಸೋತ ನಂತ್ರ ಟೀಂ ಇಂಡಿಯಾ ಗೆದ್ದಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ನವೆಂಬರ್ 15, 2023 ರಲ್ಲಿ. ಅದು ಕೂಡ 2023ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ. ಅಂದು ನ್ಯೂಝಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದರು. ಇದಾದ ಬಳಿಕ ಭಾರತ ತಂಡವು ಬರೋಬ್ಬರಿ 20 ಏಕದಿನ ಪಂದ್ಯಗಳನ್ನಾಡಿದೆ.

ಇದನ್ನೂ ಓದಿ: ವಿಶಾಖಪಟ್ಟಣಂನಲ್ಲಿ ವಿರಾಟ ತಾಂಡವ – ಹ್ಯಾಟ್ರಿಕ್ ಸೆಂಚುರಿ ಸಿಡಿಸ್ತಾರಾ KING?

ಈ ಇಪ್ಪತ್ತು ಮ್ಯಾಚ್​ಗಳಲ್ಲೂ ಭಾರತ ತಂಡ ಟಾಸ್ ಸೋತಿತ್ತು. ಇದೀಗ 21ನೇ ಪಂದ್ಯದಲ್ಲಿ ಕೆಎಲ್ ರಾಹುಲ್​ಗೆ ಅದೃಷ್ಟ ಖುಲಾಯಿಸಿದೆ. ಅದರಂತೆ ಇದೀಗ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದೆ.

ಟಾಸ್ ಗೆಲವೇ ಮುಖ್ಯವಾಗಿದ್ದ ಪಿಚ್ ನಲ್ಲಿ ಟಾಸ್ ಗೆದ್ದಾಗ ಕೆಎಲ್ ರಾಹುಲ್ ಮೊಗದಲ್ಲಿ ಸಹಜವಾಗಿಯೇ ಖುಷಿ ಎದ್ದು ಕಾಣುತ್ತಿತ್ತು. ಟಾಸ್ ಪ್ರಕ್ರಿಯೆಯನ್ನು ದೂರದಿಂದ ಗಮನಿಸುತ್ತಿದ್ದ ಭಾರತ ತಂಡದ ಉಳಿದ ಸದಸ್ಯರು ಸಹ ಈ ಕ್ಷಣವನ್ನು ಸಂಭ್ರಮಿಸಿದರು. ಕಳೆದೆರಡು ಪಂದ್ಯಗಳಲ್ಲೂ ಅವರು ಟಾಸ್ ಸೋತಿದ್ದರು. ಟಾಸ ಗೆದ್ದ ಬಳಿಕ ಮಾತನಾಡಿದ ಅವರು,“ ಇದು ಉತ್ತಮ ವಿಕೆಟ್‌ನಂತೆ ಕಾಣುತ್ತದೆ. ಪರಿಸ್ಥಿತಿಯನ್ನು ಪರಿಗಣಿಸಿದರೆ, ನಾವು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ಕೆಲವು ಸಂಗತಿಗಳನ್ನು ತೀಕ್ಷ್ಣಗೊಳಿಸಲು ಬಯಸುತ್ತೇವೆ ಎಂದರು.

Kishor KV