ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ ಭಾರತ – ರವಿ ಬಿಷ್ಣೋಯ್ ಸರಣಿಶ್ರೇಷ್ಠ, ಉತ್ತಮ ಪ್ರದರ್ಶನ ನೀಡಿದರೂ ರಿಂಕು ಸಿಂಗ್‌ಗೆ ನಿರಾಸೆ

ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ ಭಾರತ – ರವಿ ಬಿಷ್ಣೋಯ್ ಸರಣಿಶ್ರೇಷ್ಠ, ಉತ್ತಮ ಪ್ರದರ್ಶನ ನೀಡಿದರೂ ರಿಂಕು ಸಿಂಗ್‌ಗೆ ನಿರಾಸೆ

ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಮುಕ್ತಾಯಗೊಂಡಿದ್ದು, ಟೀಮ್ ಇಂಡಿಯಾ 4-1 ಅಂತರದಿಂದ ಸರಣಿ ಗೆದ್ದು ಸಂಭ್ರಮಿಸಿದೆ. ಕಾಂಗರೂಗಳನ್ನು ಮಣಿಸುವ ಮೂಲಕ ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ಫೈನಲ್‌ನಲ್ಲಿ ಆದ ನೋವನ್ನು ಸ್ವಲ್ಪ ಮಟ್ಟಿಗೆ ಮರೆಸುವ ಪ್ರಯತ್ನಮಾಡಿದ್ದಾರೆ.

ಇದನ್ನೂ ಓದಿ: ಮೂರು ಟೀಮ್.. ಮೂವರು ಕ್ಯಾಪ್ಟನ್ – ಬಿಸಿಸಿಐ ತಂತ್ರಗಾರಿಕೆ ಹಿಂದಿರುವ ರಹಸ್ಯವೇನು?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 4-1 ಅಂತರದಲ್ಲಿ ವಶಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ, ಭಾರತ ಎಂಟು ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿತು. ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಕೊನೇ ಪಂದ್ಯದಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನಕ್ಕಾಗಿ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು.

ಇನ್ನು ಸರಣಿಶ್ರೇಷ್ಠ ಪಂದ್ಯ ರಿಂಕುಸಿಂಗ್‌ಗೆ ಸಿಗಬಹುದು ಎಂದೇ ಅಂದಾಜಿಸಲಾಗಿತ್ತು. ಸರಣಿಯುದ್ದಕ್ಕೂ ತನ್ನ ಅಮೋಘ ಬ್ಯಾಟಿಂಗ್‌ನಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದು ಮಾತ್ರವಲ್ಲ, ತಾನೊಬ್ಬ ಟೀಮ್ ಇಂಡಿಯಾದ ಭವಿಷ್ಯದ ಅತ್ಯುತ್ತಮ ಕ್ರಿಕೆಟರ್ ಆಗುವ ಭರವಸೆ ಮೂಡಿಸಿದವರು ರಿಂಕು ಸಿಂಗ್. ಇವರೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಅರ್ಹರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ರಿಂಕು ಸಿಂಗ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೆ, ಬೌಲಿಂಗ್‌ನಲ್ಲಿ ಮಿಂಚಿರುವ ಯುವ ಬೌಲರ್ ರವಿ ಬಿಷ್ಣೋಯ್ ಸರಣಿಯ ಆಟಗಾರ ಪ್ರಶಸ್ತಿಗೆ ಪಾತ್ರರಾದರು. 23 ವರ್ಷದ ಸ್ಟಾರ್ ಆಟಗಾರ ರವಿ ಬಿಷ್ಣೋಯ್ ಪ್ರಮುಖ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡರು.

ಐದು ಪಂದ್ಯಗಳಲ್ಲಿ 223 ರನ್ ಗಳಿಸಿದ ಗಾಯಕ್ವಾಡ್, ಸರಣಿಯಲ್ಲಿ ಪ್ರಮುಖ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ರಿಂಕು ಸಿಂಗ್ ಅವರು ಐದು ಪಂದ್ಯಗಳಲ್ಲಿ ತಮ್ಮ ಸೂಪರ್ ಶೋ ಮೂಲಕ ಎಲ್ಲರನ್ನೂ ಆಕರ್ಷಿಸಿದರು. ಅವರು ನಾಲ್ಕು ಇನ್ನಿಂಗ್ಸ್ಗಳಲ್ಲಿ 175.00 ಸ್ಟ್ರೈಕ್ ರೇಟ್ ಮತ್ತು 52.50 ಸರಾಸರಿಯೊಂದಿಗೆ 105 ರನ್ ಗಳಿಸಿದರು.

Sulekha