2ನೇ ಟಿ20 ಪಂದ್ಯದಲ್ಲಿ 44 ರನ್‌ಗಳಿಂದ ಗೆದ್ದು ಬೀಗಿದ ಭಾರತ – ರಿಂಕು ಸಿಂಗ್ ಆಟಕ್ಕೆ ನಾಯಕನ ಮೆಚ್ಚುಗೆ

2ನೇ ಟಿ20 ಪಂದ್ಯದಲ್ಲಿ 44 ರನ್‌ಗಳಿಂದ ಗೆದ್ದು ಬೀಗಿದ ಭಾರತ – ರಿಂಕು ಸಿಂಗ್ ಆಟಕ್ಕೆ ನಾಯಕನ ಮೆಚ್ಚುಗೆ

ಆಸ್ಟ್ರೇಲಿಯಾ ವಿರುದ್ಧ ತಿರುವನಂತಪುರಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್‌ಗಳ ಜಯ ಸಾಧಿಸಿದೆ. ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಎರಡನೇ ಪಂದ್ಯದಲ್ಲೂ ರಿಂಕು ಸಿಂಗ್ ಪಂದ್ಯದ ಹೀರೋ ಎನಿಸಿಕೊಂಡಿದ್ದಾರೆ. ಜೊತೆಗೆ ಟೀಮ್ ಕ್ಯಾಪ್ಟನ್ ಸೂರ್ಯಕುಮಾರ್ ಕೂಡಾ ರಿಂಕು ಸಿಂಗ್ ಆಟವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಗ್ರೇಟ್ ಚೇಸರ್ ರಿಂಕು ಸಿಂಗ್..!- ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಭಾರತ

ಚೇಸಿಂಗ್ ಮಾಸ್ಟರ್ ರಿಂಕು ಸಿಂಗ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ರಿಂಕು ಸಿಂಗ್ ಕೇವಲ 9 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 31 ರನ್ ಚಚ್ಚುವ ಮೂಲಕ ಟೀಮ್ ಇಂಡಿಯಾ ಹೆಚ್ಚು ರನ್ ಕಲೆಹಾಕಲು ನೆರವಾದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ರುತುರಾಜ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ 235 ರನ್ ಕಲೆಹಾಕತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 44 ರನ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 235 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯ ಮುಗಿದ ಮೇಲೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ನಮ್ಮ ಹುಡುಗರು ನನ್ನ ಮೇಲೆ ಹೆಚ್ಚು ಒತ್ತಡ ಹಾಕುತ್ತಿಲ್ಲ. ಅವರೇ ಜವಾಬ್ದಾರಿಯನ್ನು ತೆಗೆದುಕೊಂಡು ಉತ್ತಮ ಆಟವಾಡುತ್ತಿದ್ದಾರೆ. ನಾನು ನಮ್ಮ ಆಟಗಾರರಿಗೆ ಆರಂಭದಲ್ಲೇ, ಮೊದಲು ಬ್ಯಾಟ್ ಮಾಡಲು ಸಿದ್ಧರಾಗಿರಿ… ಸಾಕಷ್ಟು ಇಬ್ಬನಿ ಇದೆ, ನಾವು ಎದುರಾಳಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಬೇಕು, ಎಂದು ಹೇಳಿದ್ದೆ ಎಂದು ಸೂರ್ಯಕುಮಾರ್ ಹೇಳಿದರು. ರಿಂಕು ಆಟದ ಬಗ್ಗೆ ಮಾತನಾಡಿದ ಸೂರ್ಯ, ಕಳೆದ ಪಂದ್ಯದಲ್ಲಿ ರಿಂಕು ಬ್ಯಾಟಿಂಗ್‌ಗೆ ಬಂದಿರುವುದನ್ನು ನೋಡಿದಾಗ ಅವರು ತೋರಿದ ಸಂಯಮ ಅದ್ಭುತವಾಗಿತ್ತು. ಇದು ನನಗೆ ಯಾರನ್ನೋ ನೆನಪು ಮಾಡಿತು ಮತ್ತು ಅದು ಯಾರು ಎಂಬುದು ಎಲ್ಲರಿಗೂ ಉತ್ತರ ತಿಳಿದಿದೆ ಎಂದು ನಗುತ್ತಾ ಹೇಳಿದ್ದಾರೆ.

ಪಂದ್ಯ ಮುಗಿದ ಮೇಲೆ ಮಾತನಾಡಿದ ರಿಂಕು ಸಿಂಗ್, ನಾನು ಸ್ವಲ್ಪ ಸಮಯದಿಂದ 5-6ನೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ, ಆಗ ನಾನು ಶಾಂತವಾಗಿ ಮತ್ತು ಏಕಾಗ್ರತೆಯಿಂದ ಇರಲು ಪ್ರಯತ್ನಿಸುತ್ತೇನೆ. ನಾನು ಚೆಂಡನ್ನು ಸೂಕ್ಷ್ಮವಾಗಿ ನೋಡುತ್ತೇನೆ ಮತ್ತು ಅದಕ್ಕೆ ತಕ್ಕಂತೆ ಆಡುತ್ತೇನೆ ಎಂದು ತಮ್ಮ ಗೇಮ್ ಪ್ಲಾನ್ ಅನ್ನು ವಿವರಿಸಿದರು. ಸೂರ್ಯಕುಮಾರ್ ನಿಜವಾಗಿಯೂ ಒಳ್ಳೆಯವರು, ನಾವು ಅವರ ನಾಯಕತ್ವದಲ್ಲಿ ಆನಂದಿಸುತ್ತಿದ್ದೇವೆ. ಕೊನೆಯ 5 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ನನ್ನ ಕೆಲಸ, ಆದ್ದರಿಂದ ನಾನು ಅವರ ಫಿನಿಶಿಂಗ್ ಕೌಶಲ್ಯದ ಮೇಲೆ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ನೆಟ್ ಸೆಷನ್ಗಳನ್ನು ಅದೇ ಮನಸ್ಥಿತಿಯೊಂದಿಗೆ ಅಭ್ಯಾಸ ಮಾಡುತ್ತೇನೆ ಎಂದು ರಿಂಕು ಸಿಂಗ್ ಹೇಳಿದ್ದಾರೆ.

Sulekha