217 ಟಾರ್ಗೆಟ್.. 69ಕ್ಕೆ ಆಲೌಟ್ – ಏಷ್ಯನ್ ಗೇಮ್ಸ್ ನೂ ಗೆದ್ದ ಭಾರತ
ಸಿಂಹಿಣಿಯರು ನಡೆದಿದ್ದೇ ದಾರಿ

217 ಟಾರ್ಗೆಟ್.. 69ಕ್ಕೆ ಆಲೌಟ್ – ಏಷ್ಯನ್ ಗೇಮ್ಸ್ ನೂ ಗೆದ್ದ ಭಾರತಸಿಂಹಿಣಿಯರು ನಡೆದಿದ್ದೇ ದಾರಿ

ಬೇಟೆ.. ಭರ್ಜರಿ ಬೇಟೆ.. ಏಷ್ಯಾಕಪ್​ನಲ್ಲಿ ಸಿಂಹಳೀಯರ ಸದ್ದಡಗಿಸಿ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತದ ಸಿಂಹಿಣಿಯರು ಈಗ ಏಷ್ಯನ್ ಗೇಮ್ಸ್​ನಲ್ಲೂ ಲಂಕಾದಹನ ಮಾಡಿದ್ದಾರೆ. ಜಸ್ಟ್ 15 ದಿನಗಳ ಅಂತರದಲ್ಲೇ 2 ಬಾರಿ ಲಂಕಾ ಪಡೆಯನ್ನ ಧೂಳೀಪಟ ಮಾಡಿದ್ದಾರೆ. ಏಷ್ಯನ್ ಗೇಮ್ಸ್ ಫೈನಲ್​ನಲ್ಲಿ ಫಸ್ಟ್ ಬ್ಯಾಟಿಂಗ್​ನಲ್ಲಿ ಚೆಂಡಾಡಿ ಆಮೇಲೆ ಬೌಲಿಂಗ್​ನಲ್ಲೂ ಬೆವರಿಳಿಸಿ ಗೋಲ್ಡನ್ ಮೆಡಲ್​ಗೆ ಕೊರಳೊಡ್ಡಿದ್ದಾರೆ.

ಇದನ್ನೂ ಓದಿ : T20Iನಲ್ಲಿ ಮಂದಾನಾ ನಂ.1 – ಕಡಲೆಕಾಯಿ ವ್ಯಾಪಾರಿ PAK ಬಾಬರ್

ಜಪಾನ್‌ನಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಹೊಸ ಇತಿಹಾಸ ಸೃಷ್ಟಿಸಿದೆ. ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ಗೋಲ್ಡನ್ ಮೆಡಲ್ ಫೈಟ್​ನಲ್ಲಿ ಭಾರತ ಭರ್ಜರಿಯಾಗಿ ಗೆದ್ದು ಚಾಂಪಿಯನ್​ಶಿಪ್​ನ ಡಿಫೆನ್ಸ್ ಮಾಡಿಕೊಂಡಿದೆ. ಏಷ್ಯಾಕಪ್​ ಫೈನಲ್​ನಲ್ಲೂ ಸೋತಿದ್ದ ಲಂಕಾ ಈಗ ಏಷ್ಯನ್ ಗೇಮ್ಸ್ ಫೈನಲ್​ನಲ್ಲೂ ಸೋತು ಸುಣ್ಣವಾಗಿದೆ.

ಬ್ಯಾಟಿಂಗ್ ನಲ್ಲಿ ಹೊಸ ಇತಿಹಾಸ ಬರೆದ ಭಾರತ ಮಹಿಳಾ ಪಡೆ!

ಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್  ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ರು. ಕೌರ್ ನಿರ್ಧಾರ ಪರ್ಫೆಕ್ಟ್ ಆಗಿತ್ತು ಅನ್ನೋದನ್ನ ಭಾರತದ ಪರ ಬ್ಯಾಟಿಂಗ್​ನಲ್ಲಿ ಪ್ರೂವ್ ಮಾಡಿದ್ರು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಸ್ಫೋಟಕ ಓಪನಿಂಗ್ ನೀಡಿದ್ರು. ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ 9.6 ಓವರ್​ಗಳಲ್ಲೇ 99 ರನ್​ಗಳ ಜೊತೆಯಾಟ ನೀಡಿದ್ರು.  ಶಫಾಲಿ ವರ್ಮಾ 29 ಎಸೆತಗಳಲ್ಲಿ  48 ರನ್ ಗಳಿಸಿ ಔಟಾದ್ರೆ ಸ್ಮೃತಿ ಮಂದಾನ 45 ಬಾಲಲ್ಲಿ 75 ರನ್ ಸಿಡಿಸಿದ್ರು. ಇನ್ನು ನಾಯಕಿ ಕೌರ್ ಸ್ವಲ್ಪ ಸ್ಲೋ ಇನ್ನಿಂಗ್ಸ್ ಆಡಿದ್ದು 17 ಬಾಲಲ್ಲಿ 19 ರನ್ ಗಳಿಸಿದ್ರೆ ರಿಚಾ ಘೋಷ್ 22 ಬಾಲಲ್ಲೇ 49 ರನ್ಸ್ ಕಲೆ ಹಾಕಿ ಅಜೇಯರಾಗಿ ಉಳಿದ್ರು. ಈ ಮೂಲಕ ಟೀಂ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ದಾಖಲೆಯ 216 ರನ್​ಗಳನ್ನ ಕಲೆ ಹಾಕಿತ್ತು. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮಹಿಳಾ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಎಂಬ ಐತಿಹಾಸಿಕ ದಾಖಲೆಯಾಗಿದೆ. ಹೀಗೆ ಭಾರತ ನೀಡಿದ್ದ ದಾಖಲೆಯ ಟಾರ್ಗೆಟ್​ ಬೆನ್ನಟ್ಟಿದ ಲಂಕಾ ಹೀನಾಯ ಸೋಲು ಕಂಡಿದೆ.

ಲಂಕಾ ಬ್ಯಾಟರ್ ಗಳನ್ನ ಬೆಂಡೆತ್ತಿದ ಭಾರತದ ಬೌಲಿಂಗ್ ಪಡೆ!

20 ಓವರ್.. 216 ರನ್ಸ್.. ಪ್ರತಿ ಓವರ್‌ಗೆ 10.85ರ ರನ್ ರೇಟ್.. ಭಾರತ ನೀಡಿದ್ದ ಈ ರೆಕಾರ್ಡ್ಸ್ ಚೇಸಿಂಗ್ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಎಲ್ಲಿಯೂ ಕೂಡ ರೇಸ್​ನಲ್ಲಿ ಇರಲೇಇಲ್ಲ. ಯಾಕಂದ್ರೆ ಭಾರತದ ಬೌಲರ್​ಗಳು ಲಂಕಾ ಬ್ಯಾಟರ್​ಗಳನ್ನ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದ್ರು. ಲಂಕಾ ಪರ ನಾಯಕಿ ಚಾಮರಿ ಅಟಪಟ್ಟು ಹಾಗೇ ಇಮೇಶಾ ದುಲಾನಿ ಇನ್ನಿಂಗ್ಸ್ ಓಪನ್ ಮಾಡಿದ್ರು. ಈ ವೇಳೆ ಚಾಮರಿ 29 ರನ್ ಗಳಿಸಿ ತಂಡದ ಪರ ಹೈಸ್ಕೋರರ್ ಆದ್ರು. ಌಂಡ್ ಕವಿಶಾ ದಿಲ್ಹಾರಿ 11 ರನ್ ಗಳಿಸಿದ್ದು ಬಿಟ್ರೆ ಉಳಿದವರ್ಯಾರೂ ಕೂಡ ಡಬಲ್ ಡಿಜಿಟ್ ಮುಟ್ಟೋಕೂ ಆಗಿಲ್ಲ. ಬಿಲೋ 10 ಒಳಗೇ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ 15.4 ಓವರ್​ಗಳಲ್ಲಿ 69 ರನ್​​ ಗಳಿಸಿ ಲಂಕಾ ತಂಡ ಆಲೌಟ್ ಆಯ್ತು. ಈ ಮೂಲಕ 147 ರನ್​ಗಳ ಬೃಹತ್ ಅಂತರದಲ್ಲಿ ಭಾರತ ಪಂದ್ಯವನ್ನ ಗೆಲ್ಲೋ ಮೂಲಕ ಗೋಲ್ಡನ್ ಮೆಡಲ್ ತನ್ನಲ್ಲೇ ಉಳಿಸಿಕೊಳ್ತು. ಶ್ರೀಲಂಕಾ ಮತ್ತೆ ಫೈನಲ್​ನಲ್ಲಿ ಸೋಲಬೇಕಾಯ್ತು. ಭಾರತದ ಪರ ಆಫ್-ಸ್ಪಿನ್ನರ್ ದೀಪ್ತಿ ಶರ್ಮಾ ಕೇವಲ 6 ರನ್ ನೀಡಿ 3 ವಿಕೆಟ್ ಪಡೆದರೆ ಶಫಾಲಿ ವರ್ಮಾ 2 ವಿಕೆಟ್, ಶ್ರೀ ಚರಣಿ 2 ವಿಕೆಟ್ ಮತ್ತು ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದು ಲಂಕನ್ನರ ಹೆಡೆಮುರಿ ಕಟ್ಟಿದ್ರು.

ಏಷ್ಯಾಕಪ್ & ಏಷ್ಯನ್ ಗೇಮ್ಸ್ ನಲ್ಲೂ ಸೇಮ್ ರಿಸಲ್ಟ್!

ಇನ್ನು ಟೀಂ ಇಂಡಿಯಾ ಮಹಿಳಾ ತಂಡ ಜಸ್ಟ್ 15 ದಿನಗಳ ಅಂತರದಲ್ಲೇ ಎರಡು ಟ್ರೋಫಿಗಳನ್ನ ಗೆದ್ದಿದೆ. ಹಾಗೇ ಎರಡೂ ಫೈನಲ್​ಗಳಲ್ಲೂ ಸೇಮ್ ತಂಡಗಳೇ ಮುಖಾಮುಖಿ ಆಗಿದ್ವು. 2026ರ ಮಹಿಳಾ ಟಿ20 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಲಂಕಾ ತಂಡಗಳೇ ಮುಖಾಮುಖಿ ಆಗಿದ್ವು. ಈ ವೇಳೆ ಭಾರತ ಮಹಿಳಾ ಕ್ರಿಕೆಟ್ ತಂಡವು ಇದೇ ಶ್ರೀಲಂಕಾ ತಂಡವನ್ನು 72 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿ, ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಕಿರೀಡ ಮುಡಿಗೇರಿಸಿಕೊಂಡಿತ್ತು, ಸೆಪ್ಟೆಂಬರ್ 13ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಮ್ಯಾಚ್ ನಡೆದಿತ್ತು. ಈಗ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಫೈನಲ್ ನಲ್ಲೂ ಲಂಕಾ ದಹನ ಮಾಡಿ ಗೋಲ್ಡನ್ ಮೆಡಲ್​ಗೆ ಕೊರಳೊಡ್ಡಿದೆ. ಜಸ್ಟ್ 15 ದಿನಗಳ ಅಂತರದಲ್ಲೇ ಭಾರತ 2 ಸಲ ಚಾಂಪಿಯನ್ ಪಟ್ಟಕ್ಕೇರಿದ್ರೆ ಲಂಕಾ ಎರಡೂ ಸಲವೂ ಭಾರತದ ವಿರುದ್ಧವೇ ಸೋತು ಸುಣ್ಣವಾಗಿದೆ. ಒಟ್ನಲ್ಲಿ ಭಾರತದ ಸಿಂಹಿಣಿಯರು ಈಗ ನಡೆದಿದ್ದೇ ದಾರಿಯಾಗಿದೆ.

Shantha Kumari

Leave a Reply

Your email address will not be published. Required fields are marked *