ಭಾರತಕ್ಕೆ ಪ್ರತಿಷ್ಠೆ.. ಲಂಕಾಗೆ ಸೇಡು – ಏಷ್ಯನ್ ಗೇಮ್ಸ್ ಫೈನಲ್ ಗೆಲ್ಲೋದ್ಯಾರು?
ಸಿಂಹಿಣಿಯರಿಗೆ 1 ತಿಂಗಳಲ್ಲೇ 2 ಟ್ರೋಫಿ?

ಭಾರತಕ್ಕೆ ಪ್ರತಿಷ್ಠೆ.. ಲಂಕಾಗೆ ಸೇಡು – ಏಷ್ಯನ್ ಗೇಮ್ಸ್ ಫೈನಲ್ ಗೆಲ್ಲೋದ್ಯಾರು?ಸಿಂಹಿಣಿಯರಿಗೆ 1 ತಿಂಗಳಲ್ಲೇ 2 ಟ್ರೋಫಿ?

ಸೇಮ್ ಟು ಸೇಮ್ ಆಪೋನೆಂಟ್ಸ್.. ಸೇಮ್ ಟು ಸೇಮ್ ರಿಸಲ್ಟ್.. ಮಹಿಳಾ ಏಷ್ಯಾಕಪ್​ನಲ್ಲಿ ಏನಾಗಿತ್ತೋ ಈಗ ಏಷ್ಯನ್ ಗೇಮ್ಸ್​ನಲ್ಲೂ ಅದೇ ರಿಪೀಟ್ ಆಗಿದೆ. ಒಂದ್ಕಡೆ ಬಾಂಗ್ಲಾ ವಿರುದ್ಧ ಭರ್ಜರಿಯಾಗಿ ಗೆದ್ದು ಫೈನಲ್ ಗೆ ಬಂದಿರೋ ಭಾರತ. ಮತ್ತೊಂದೆಡೆ ಪಾಕಿಸ್ತಾನವನ್ನ ಮನೆಗೆ ಕಳಿಸಿ ಫೈನಲ್​ಗೆ ಲಗ್ಗೆ ಇಟ್ಟಿರೋ ಶ್ರೀಲಂಕಾ. ಈಗ ಎರಡೂ ತಂಡಗಳು ಏಷ್ಯನ್ ಗೇಮ್ಸ್ ಗೋಲ್ಡನ್ ಮೆಡಲ್​ಗಾಗಿ ಮುಖಾಮುಖಿ ಆಗ್ತಿದ್ದಾರೆ.

ಇದನ್ನೂ ಓದಿ :  ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ! ಶೂಟಿಂಗ್‌ನಲ್ಲಿ 3ನೇ ಪದಕ

ಭಾನುವಾರ ಟೀಂ ಇಂಡಿಯಾ ಪಾಲಿಗೆ ಮತ್ತೊಮ್ಮೆ ಸೂಪರ್ ಸಂಡೇ ಆಗಿದೆ. ಜಪಾನ್​ನಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್​ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಹಾಲಿ ಚಾಂಪಿಯನ್ ಭಾರತ, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿದೆ. ಈಗ ಬಾಂಗ್ಲಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಶಫಾಲಿ ವರ್ಮಾ ಸಿಡಿಲಬ್ಬರದ ಸೆಂಚುರಿದ್ರು. ಪರಿಣಾಮ 4 ವಿಕೆಟ್‌ ನಷ್ಟಕ್ಕೆ 195 ರನ್‌ ಗಳಿಸಿತು. ಈ ಗುರಿ ಬೆನ್ನತ್ತಿದ ಬಾಂಗ್ಲಾ 15.4 ಓವರ್‌ಗಳಲ್ಲಿ 81 ರನ್‌ಗೆ ಆಲೌಟಾಯಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಲಂಕಾ ಫೈನಲ್‌ ಗೇರಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ ಪಾಕ್‌ 4 ವಿಕೆಟ್‌ಗೆ 177 ರನ್‌ ಗಳಿಸಿದರೆ ಈ ಟಾರ್ಗೆಟ್ ಬೆನ್ನಟ್ಟಿದ ಲಂಕಾ 17.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಟಾರ್ಗೆಟ್ ರೀಚ್ ಆದ್ರು. ಸೋ ಈಗ ಏಷ್ಯಾಕಪ್​ನಂತೆಯೇ ಏಷ್ಯನ್ ಗೇಮ್ಸ್​ನಲ್ಲೂ ಭಾರತ ವರ್ಸಸ್ ಲಂಕಾ ಫೈಟ್ ನಡೆಯಲಿದೆ. ಌಂಡ್ ಕಳೆದ ಬಾರಿಯ ಏಷ್ಯನ್ ಗೇಮ್ಸ್​ನಲ್ಲೂ ಇದೇ ತಂಡಗಳೇ ಮುಖಾಮುಖಿಯಾಗಿದ್ವು.

ಮೆಡಲ್ ಉಳಿಸಿಕೊಳ್ಳುತ್ತಾ ಭಾರತ.. ಸೇಡು ತೀರಿಸಿಕೊಳ್ಳುತ್ತಾ ಲಂಕಾ?

ಏಷ್ಯನ್ ಗೇಮ್ಸ್​ನಲ್ಲಿ ಸದ್ಯ ಮಹಿಳಾ ಕ್ರಿಕೆಟ್​ನಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದೆ. ಕಳೆದ ಬಾರಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. ಪ್ರಸ್ತುತ ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿಯೂ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಅಖಾಡಕ್ಕಿಳಿಯಲಿದೆ.   ಮತ್ತೊಂದೆಡೆ ಶ್ರೀಲಂಕಾ ತಂಡ ಇತ್ತೀಚಿನ ಏಷ್ಯಾಕಪ್ ಫೈನಲ್ ಹಾಗೇ ಕಳೆದ ಬಾರಿಯ ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ಭಾರತದ ವಿರುದ್ಧವೇ ಸೋತಿದ್ದು ಈಗ ಜಪಾನ್​ನಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ಭಾರತವನ್ನ ಸೋಲಿಸಿ ಸೇಡು ತೀರಿಸಿಕೊಳ್ಳೋ ಯೋಜನೆಯಲ್ಲಿದೆ.

ನೋಡೋದಾದ್ರೆ ಭಾರತ ವರ್ಸಸ್ ಲಂಕಾ ನಡುವಿನ ಫೈನಲ್ ಕಾಳಗ ಸೆಪ್ಟೆಂಬರ್ 22 ಅಂದ್ರೆ ಮಂಗಳವಾರ ಜಪಾನ್​ನ ಕೊರೊಗಿ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯಲಿದೆ. ಇಂಡಿಯನ್ ಟೈಮಿಂಗ್ಸ್ ಪ್ರಕಾರ ಬೆಳಗ್ಗೆ 10.30ಕ್ಕೆ ಮ್ಯಾಚ್ ಸ್ಟಾರ್ಟ್ ಆಗಲಿದೆ. ಈಗಾಗ್ಲೇ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 13 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಪಡೆ ಇದೇ ಲಂಕಾ ಮಹಿಳಾ ತಂಡವನ್ನ ಸೋಲಿಸಿ ದಾಖಲೆಯ 72 ರನ್‌ಗಳ ಭರ್ಜರಿ ಜಯ ಸಾಧಿಸಿ, ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ರು. ಈಗ ನಾಳೆ ಮತ್ತೆ ಏಷ್ಯನ್ ಗೇಮ್ಸ್ ಫೈನಲ್ ಇದ್ದು ಒಂದೇ ತಿಂಗಳಲ್ಲಿ 2 ಪ್ರಶಸ್ತಿಗಳ ದಾಖಲೆ ಬರೆಯಲಿದ್ದಾರೆ.

Shantha Kumari

Leave a Reply

Your email address will not be published. Required fields are marked *