ಶೆಫಾಲಿ ವರ್ಮಾ ಹಾಗೂ ಸ್ಮೃತಿ ಭರ್ಜರಿ ಆಟ – 4ನೇ ಟಿ20Iಯಲ್ಲಿ ಶ್ರೀಲಂಕಾ ಮಣಿಸಿ ಗೆದ್ದ ಟೀಂ IND

ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 30 ರನ್ಗಳಿಂದ ಮಣಿಸಿ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಈ ಸರಣಿಯಲ್ಲಿ ಕೊಂಚ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು ತಮ್ಮ ನೈಜ ಆಟವನ್ನು ಆಡಿ ಗಮನ ಸೆಳೆದರು. ಇವರೊಂದಿಗೆ ಸ್ಟಾರ್ ಆಟಗಾರ್ತಿ ಶೆಫಾಲಿ ವರ್ಮಾ ಅವರು ಉತ್ತಮ ಸಾಥ್ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಶ್ರೀಲಂಕಾ ಬೌಲರ್ಗಳು ವಿಫಲರಾದರು. ಈ ಜೋಡಿ ತಮ್ಮ ಆಕರ್ಷಕ ಆಟದ ನೆರವಿನಿಂದ ದಾಖಲೆಯನ್ನು ಬರೆಯಿತು. ಈ ಜೋಡಿ ಟಿ20 ಕ್ರಿಕೆಟ್ನಲ್ಲಿ ಯಾವೊಬ್ಬ ಜೋಡಿಯೂ ಮಾಡದ ಸಾಧನೆ ಮಾಡಿದೆ.
ಇದನ್ನೂ ಓದಿ: ಕೊಹ್ಲಿ-ಸಾಲ್ಟ್ RCB ಡೆಡ್ಲಿ ಓಪನರ್ಸ್ – SRH, RRನಲ್ಲೂ ಡೇಂಜರ್ ಕಾಂಬೋ
ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಜೋಡಿ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ 3000 ರನ್ಗಳ ಜೊತೆಯಾಟವನ್ನು ನೀಡಿತು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿತು. ಈ ಜೋಡಿ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಸ್ಮೃತಿ ಹಾಗೂ ಶೆಫಾಲಿ ಜೋಡಿ 3107 ರನ್ ಜೊತೆಯಾಟದ ಕಾಣಿಕೆ ನೀಡಿದೆ. ಈ ಜೋಡಿ ನಾಲ್ಕನೇ ಪಂದ್ಯದಲ್ಲಿ ಮೊದಲ ವಿಕೆಟ್ಗೆ 15.2 ಓವರ್ಗಳಲ್ಲಿ 162 ರನ್ ಕಲೆ ಹಾಕಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ 80 ರನ್ ಸಿಡಿಸಿ ಅಬ್ಬರಿಸಿದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 46 ಎಸೆತಗಳಲ್ಲಿ 79 ರನ್ ಸೇರಿಸಿತು. ಈ ವೇಳೆ 12 ಬೌಂಡರಿ, 1 ಸಿಕ್ಸರ್ಗಳು ಸೇರಿವೆ.
ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದ ರಿಚಾ ಘೋಷ್ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 40 ರನ್ ಸಿಡಿಸಿದರು. ಹರ್ಮನ್ ಪ್ರೀತ್ ಕೌರ್ ಅಜೇಯ 16 ರನ್ ಬಾರಿಸಿದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 2 ವಿಕೆಟ್ಗೆ 221 ರನ್ ಸೇರಿಸಿತು. ವಾಲಿನ ಮೊತ್ತವನ್ನು ಹಿಂಬಾಲಿಸಿದ ಶ್ರೀಲಂಕಾ ತಂಡದ ಭರ್ಜರಿಯಾಗಿತ್ತು. ಹಸಿನಿ ಪೆರೆರಾ (30) ಹಾಗೂ ಚಮರಿ ಅಟ್ಟುಪಟ್ಟು ಜೋಡಿ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನು ನೀಡಿತು. ನಾಯಕಿ ಚಮಿರಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 37 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿದರು. ಇಮೇಶಾ ದುಲಾನಿ 29, ಹರ್ಷಿತಾ ಸಮರವಿಕ್ರಮ 20, ನೀಲಾಕ್ಷಿಕಾ ಸಿಲ್ವಾ ಅಜೇಯ 23 ರನ್ ಗಳಿಸಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 191 ರನ್ ಸೇರಿಸಿ ಸೋಲು ಕಂಡಿತು.

ನೋಡಿರಿ

