25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಭಾರತ – ಚಾಂಪಿಯ‌ನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ!

25 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಭಾರತ – ಚಾಂಪಿಯ‌ನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ!

ಕೊನೆಗೂ 140 ಕೋಟಿ ಭಾರತೀಯರ ಕನಸು ನನಸಾಗಿದೆ. ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಭಾರತ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ ಸಿಕ್ಕವಳು ಫೇಮಸ್ ಕ್ರಿಕೆಟರ್.. ಹುಟ್ಟು ಭಾರತದಲ್ಲಿ.. ಸ್ಟಾರ್ ಆಗಿದ್ದು ಆಸ್ಟ್ರೇಲಿಯಾದಲ್ಲಿ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್, ಭಾರತಕ್ಕೆ​ 252 ರನ್​ಗಳ ಗುರಿ ನೀಡಿತ್ತು. ಈ ಬೃಹತ್​​ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ಕ್ಯಾಪ್ಟನ್​ ರೋಹಿತ್​ ಶರ್ಮಾ, ಉಪನಾಯಕ ಶುಭ್ಮನ್​ ಗಿಲ್​ ಓಪನಿಂಗ್​ ಮಾಡಿದರು. ಶುಭ್ಮನ್​​ ಗಿಲ್​​ ಕೇವಲ 31 ರನ್​ಗೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಶರ್ಮಾ ತಾನು ಎದುರಿಸಿದ 83 ಬಾಲ್​ನಲ್ಲಿ ಬರೋಬ್ಬರಿ 3 ಸಿಕ್ಸರ್​​, 6 ಫೋರ್​ ಸಮೇತ 76 ರನ್​ ಚಚ್ಚಿದ್ರು. ಶುಭ್ಮನ್​​ ಗಿಲ್​ ಔಟ್​ ಆಗುತ್ತಿದ್ದಂತೆ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ ಕೇವಲ 1 ರನ್​ಗೆ ಔಟಾಗಿದ್ದಾರೆ. ಮೊದಲ ಎಸೆತದಲ್ಲಿ 1 ರನ್​​​ ಗಳಿಸಿದ ಇವರು 2ನೇ ಎಸೆತಕ್ಕೆ ಎಲ್​ಬಿಡಬ್ಲ್ಯೂ ಆದರು.

ಭಾರತ ತಂಡಕ್ಕೆ ಆಸರೆಯಾದ ಶ್ರೇಯಸ್​ ಅಯ್ಯರ್​​ 62 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 48 ರನ್​ ಚಚ್ಚಿದ್ರು. ಹಾರ್ದಿಕ್​ ಪಾಂಡ್ಯ 18 ಮತ್ತು ಅಕ್ಷರ್​ ಪಟೇಲ್​ 29 ರನ್​ ಬಾರಿಸಿದರು. ಕೊನೆಯವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಕನ್ನಡಿಗ ಕೆ.ಎಲ್​ ರಾಹುಲ್​​ ಭಾರತ ತಂಡವನ್ನು ಗೆಲ್ಲಿಸಿದರು. ರಾಹುಲ್​​ 1 ಸಿಕ್ಸರ್​​, 1 ಫೋರ್​ ಸಮೇತ 34 ರನ್​ ಸಿಡಿಸಿದರು. ಭಾರತ 49 ಓವರ್​ನಲ್ಲಿ 254 ರನ್​ ಗಳಿಸಿ ಗೆಲುವು ಸಾಧಿಸಿದೆ.

Shwetha M

Leave a Reply

Your email address will not be published. Required fields are marked *