ಕೆ.ಎಲ್ ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್ – ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಗೆಲುವು

ಕೆ.ಎಲ್ ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್ – ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಗೆಲುವು

ಟೀಮ್ ಇಂಡಿಯಾ ಬ್ಯಾಟಿಂಗ್ ಅಬ್ಬರಕ್ಕೆ ಅಫ್ಘಾನಿಸ್ತಾನ ತಂಡ ಸೋತು ಶರಣಾಗಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ..

ಇದನ್ನೂ ಓದಿ:ಗೌತಮ್ ಗಂಭೀರಕ್ಕೆ RO-KO ಸೆಡ್ಡು – BCCI ಆಫೀಸರ್ಸ್ ಜತೆ ಡೈರೆಕ್ಟ್ ಡೀಲ್

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರವಸೆಯ ಆರಂಭ ಮಾಡಿದೆ. ಆತಿಥೇಯ ಟೀಂ ಇಂಡಿಯಾ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯ ಶನಿವಾರ ಮಧ್ಯಾಹ್ನ 1.30ಕ್ಕೆ ಆರಂಭವಾಗಬೇಕಿತ್ತು. ಆರಂಭದಲ್ಲೇ ಮಳೆ ಬಂದ ಕಾರಣ ಪಂದ್ಯ ಆರಂಭವಾಗಲು ವಿಳಂಬವಾಯಿತು. ಹೀಗಾಗಿ ಪಂದ್ಯವನ್ನು ತಲಾ 25 ಓವರ್​ಗಳಿಗೆ ಸೀಮಿತಗೊಳಿಸಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನಕ್ಕೆ ಆರಂಭದಲ್ಲಿ ಆಘಾತ ಎದುರಾಯಿತು.  ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಬ್ಯಾಟಿಂಗ್ ಮಾಡುವ ಏಕಾಂಗಿ ಹೋರಾಟ ನಡೆಸಿ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು. ಗುರ್ಬಾಜ್ ಅವರ ಸ್ಫೋಟಕ ಶತಕದ ನೆರವಿನಿಂದ ಅಫ್ಘಾನಿಸ್ತಾನ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅವರ ಅಜೇಯ ಅರ್ಧಶತಕದ ಇನ್ನಿಂಗ್ಸ್​ ಹಾಗೂ ಕೆಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ 3 ವಿಕೆಟ್​ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಎರಡನೇ ಪಂದ್ಯ ಜೂನ್ 17 ರಂದು ನಡೆಯಲಿದೆ. ಈ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಸರಣಿ ಭಾರತದ ಪಾಲಾಗುತ್ತದೆ.

Sulekha

Leave a Reply

Your email address will not be published. Required fields are marked *