ಸೂಪರ್ ಸಂಡೇ INDಗೋ.. WIಗೋ? – 1-1 ಸಮರದಲ್ಲಿ ಯಾರಿಗೆ ಲೀಡ್?
ಬ್ಯಾಟರ್ ಗಳೇ ಮ್ಯಾಚ್ ಗೆಲ್ಲಿಸೋದಾ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20ಐ ಸರಣಿ ಈಗ ರಣರೋಚಕ ಹಂತಕ್ಕೆ ಬಂದಿದೆ. ಫಸ್ಟ್ ಮ್ಯಾಚಲ್ಲಿ ಭಾರತ ಗೆದ್ರೆ ಸೆಕೆಂಡ್ ಮ್ಯಾಚಲ್ಲಿ ವಿಂಡೀಸ್ ಪಡೆ ಧೂಳೆಬ್ಬಿಸಿದೆ. ಸೋ ಅಲ್ಲಿಗೆ ಸರಣಿ ಸಮಬಲವಾಗಿದ್ದು, ನಾಳೆ ಮೂರನೇ ಪಂದ್ಯ ಇಂದೋರ್ನಲ್ಲಿ ನಡೆಯಲಿದೆ. ಈ ಮ್ಯಾಚ್ ಗೆದ್ದವ್ರು ಸರಣಿ ಗೆಲುವಿಗೆ ಹತ್ತಿರ ಆಗ್ತಾರೆ.
ಇದನ್ನೂ ಓದಿ : CSK ತಂಡದಿಂದ ಹಸ್ಸಿಗೆ ಗೇಟ್‌ಪಾಸ್! 15 ವರ್ಷಗಳ ಸಂಬಂಧಕ್ಕೆ ಅಂತ್ಯ!
ರಾಂಚಿಯಲ್ಲಿ ನಡೆದ 2ನೇ ಮ್ಯಾಚಲ್ಲಿ ಭಾರತದ ಬ್ಯಾಟಿಂಗೇ ಬೆಂಕಿ ಅನ್ಕೊಂಡ್ರೆ ವಿಂಡೀಸ್ ಪಡೆಯದ್ದಂತೂ ಜ್ವಾಲಾಮುಖಿ. 250 ರನ್ಸ್ ಟಾರ್ಗೆಟ್ ಲೆಕ್ಕನೇ ಇಲ್ಲ ಅನ್ನೋ ಥರ ಇನ್ನೂ 9 ಬಾಲ್ ಇದ್ದಂತೆ ಕೆರೆಬಿಯನ್ ಕಲಿಗಳು ಗೆದ್ದು ಬೀಗಿದ್ರು. ಎರಡೂ ಇನ್ನಿಂಗ್ಸ್ ಸೇರಿ 500+ ರನ್ಸ್, 46 ಬೌಂಡರಿಗಳು.. 33 ಸಿಕ್ಸರ್ಸ್.. ಸೆಕೆಂಡ್ ಹೈಯೆಸ್ಟ್ ಚೇಸ್ ಇನ್ ವರ್ಲ್ಡ್ ಹಿಸ್ಟರಿ.. ಹೈಯೆಸ್ಟ್ ಚೇಸ್ ಅಗೆನಸ್ಟ್ ಇಂಡಿಯಾ ಹೀಗೆ ಹತ್ತು ಹಲವು ದಾಖಲೆಗಳೂ ಕ್ರಿಯೇಟ್ ಆದ್ವು. ಭಾರತ ಮತ್ತೆ ವಿಂಡೀಸ್ ಎರಡೂ ತಂಡಗಳು ಸೂಪರ್ ಸಾಲಿಡ್ ಫಾರ್ಮ್ನಲ್ಲಿದ್ದು ಇಬ್ರೂ ಒಂದೊಂದು ಪಂದ್ಯಗಳನ್ನ ಗೆದ್ದಿರೋದ್ರಿಂದ ಎಲ್ಲರ ಕಣ್ಣೂ ಈಗ ನಾಳಿನ ಪಂದ್ಯದ ಮೇಲಿದೆ.
ಇಂದೋರ್ ನಲ್ಲಿ 3ನೇ ಮ್ಯಾಚ್.. ಯಾರಿಗಿದೆ ಗೆಲುವಿನ ಅದೃಷ್ಟ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20ಐ ಪಂದ್ಯವು ನಾಳೆ ಅಂದರೆ ಅಕ್ಟೋಬರ್ 11, 2026 ರಂದು ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದು (1-1) ಸಮಬಲ ಸಾಧಿಸಿವೆ. ಹೀಗಾಗಿ ಈ 3ನೇ ಪಂದ್ಯದಲ್ಲಿ ಮೇಲುಗೈ ಸಾಧಿಸೋಕೆ ಎರಡೂ ಕಡೆಯೂ ಟಫ್ ಫೈಟ್ ಇರುತ್ತೆ.
ಭಾರತಕ್ಕಿರುವ ಚಾಲೆಂಜಸ್!
ಬ್ಯಾಟಿಂಗ್ ನಲ್ಲಿ ಚೆನ್ನಾಗಿದ್ರೂ ಟಾಪ್ ಆರ್ಡರ್ ನಲ್ಲಿ ಬದಲಾವಣೆ ಬೇಕಿಲ್ಲ
ಫ್ಲ್ಯಾಟ್ ಪಿಚ್ ಗಳಲ್ಲಿ ವಿಕೆಟ್ ತೆಗೆಯೋದು ಭಾರತದ ಬೌಲರ್ಸ್ ಗೆ ಕಷ್ಟ
ಅಕ್ಷರ್ 66(3.3), ಕುಲ್ದೀಪ್ 53(4), ಶಿವಂ ದುಬೆ ಕೂಡ ದುಬಾರಿ
ಟಿ-20ಐನಲ್ಲಿ ನಂಬರ್ 1 ತಂಡಕ್ಕೆ ಫೀಲ್ಡಿಂಗ್, ಕ್ಯಾಚ್ ಡ್ರಾಪ್ ಸಮಸ್ಯೆ
ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ & ಬೌಲಿಂಗ್ ಆಲ್ ರೌಂಡರ್ ಸಮಸ್ಯೆ
ಹೀಗೆ ಭಾರತಕ್ಕೆ ಸಾಕಷ್ಟು ಚಾಲೆಂಜಸ್ ಕೂಡ ಇವೆ. ಬ್ಯಾಟಿಂಗ್ ಚೆನ್ನಾಗಿ ಕಂಡ್ರೂ ಕೂಡ ಆಲ್ರೌಂಡ್ ಪ್ರದರ್ಶನ, ಬೌಲಿಂಗ್ ಡಾಮಿನೆನ್ಸ್, ಫೀಲ್ಡಿಂಗ್ ಎಫರ್ಟ್ಸ್ ಕಾಣಿಸ್ತಾ ಇಲ್ಲ. ಮತ್ತೊಂದ್ಕಡೆ ವೆಸ್ಟ್ ಇಂಡೀಸ್ಗೆ ನಾಯಕ ಶಾಯ್ ಹೋಪ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಅವ್ರ ಕನ್ಸಿಸ್ಟೆನ್ಸಿ ಮತ್ತು ಕ್ಯಾಪ್ಟನ್ಸಿ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಶರ್ಫೇನ್ ರುದರ್‌ಫೋರ್ಡ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಅದ್ರಲ್ಲೂ ವಿಂಡೀಸ್ ಬ್ಯಾಟರ್ಸ್ ಪವರ್ ಹಿಟ್ಟರ್ಸ್ ಆಗಿರೋದ್ರಿಂದ ಯಾವುದೇ ಮೂಮೆಂಟ್ನಲ್ಲೂ ಗೇಮ್ ಚೇಂಜ್ ಮಾಡೋ ಸಾಮರ್ಥ್ಯ ಅವ್ರಲ್ಲಿದೆ. 2ನೇ ಪಂದ್ಯ ಒಂದರಲ್ಲೇ ವಿಂಡೀಸ್ ಆಟಗಾರರು 20 ಸಿಕ್ಸರ್‌ಗಳನ್ನು ಚಚ್ಚಿದ್ದರು. ರೋಮಾರಿಯೋ ಶೆಫರ್ಡ್, ರೋಸ್ಟನ್ ಚೇಸ್ ಮತ್ತು ಶಮರ್ ಸ್ಪ್ರಿಂಗರ್ ಅವರಂತಹ ಆಲ್ ರೌಂಡರ್‌ಗಳಿದ್ದಾರೆ. ಇದು ತಂಡಕ್ಕೆ 8ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಡೆಪ್ತ್ ಜೊತೆಗೆ ಬೌಲಿಂಗ್ ಆಪ್ಶನ್ಸ್ ಜಾಸ್ತಿ ಮಾಡುತ್ತೆ. ಇದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಫಿಯರ್ಲೆಸ್ ಆಗಿ ಬ್ಯಾಟ್ ಬೀಸೋದು. ವಿಕೆಟ್ಸ್ ಬಿದ್ರೂ ನೆಕ್ಸ್ಟ್ ಬಾಲ್ನಲ್ಲೇ ಬಿಗ್ ಹಿಟ್ ಬಾರಿಸೋದ್ರಿಂದ ಪಂದ್ಯದ ದಿಕ್ಕನ್ನೇ ಬದಲಿಸ್ತಾರೆ. ಹೀಗಾಗಿ ಭಾರತ ಈ ಕೆರೆಬಿಯನ್ ದೈತ್ಯರನ್ನ ಮೂರನೇ ಮ್ಯಾಚಲ್ಲಿ ಹೇಗೆ ಕಟ್ಟಿ ಹಾಕ್ತಾರೆ ಅನ್ನೋದೇ ಕುತೂಹಲ.

ನೋಡಿರಿ

