IND Vs ZIM 3ನೇ ಮ್ಯಾಚ್ಗೆ ಶಾಕ್ – ಗಿಲ್ ಔಟ್.. ಸಂಜು ಕ್ಯಾಪ್ಟನ್?
ಮೂವರ ಎಂಟ್ರಿ.. ಯಾರಿಗೆಲ್ಲಾ ಕೊಕ್?
ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಸಮಬಲ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಬಾಯ್ಸ್ ಗೆಲುವಿನ ಕೇಕೆ ಹಾಕಿದ್ರೆ ಸೆಕೆಂಡ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಬುಧವಾರ 3ನೇ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಮತ್ತೊಮ್ಮೆ ಜಯ ಸಾಧಿಸೋ ವಿಶ್ವಾಸದಲ್ಲಿದೆ. ಬಟ್ ಈಗ ಇರೋ ಅಸಲಿ ಸವಾಲಂದ್ರೆ ಪ್ಲೇಯಿಂಗ್ 11 ಆಯ್ಕೆ. ಟಿ-20 ವಿಶ್ವಕಪ್ತಂಡದಲ್ಲಿದ್ದ ಆಟಗಾರರು ಇದೀಗ ಜಿಂಬಾಬ್ವೆ ಸರಣಿಗೆ ಎಂಟ್ರಿ ಕೊಟ್ಟಿದ್ದು ಯಾರಿಗೆ ಚಾನ್ಸ್ ನೀಡ್ಬೇಕು ಅನ್ನೋದೇ ದೊಡ್ಡ ತಲೆನೋವಾಗಿದೆ. ಇದ್ರ ನಡುವೆ ಕ್ಯಾಪ್ಟನ್ಸಿ ಕೂಡ ಚೇಂಜ್ ಆಗೋ ಸಾಧ್ಯತೆ ಇದೆ. ಅಷ್ಟಕ್ಕೂ ಪ್ಲೇಯಿಂಗ್ 11ನಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ? ಕ್ಯಾಪ್ಟನ್ ಯಾಕೆ ಬದಲಾವಣೆ ಆಗ್ತಾರೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾರಿಯಮ್ಮನ ಭಕ್ತ ಸೂರ್ಯಕುಮಾರ್ – ಟಿ20 ವಿಶ್ವಕಪ್ ಗೆಲ್ಲಲು ಸ್ಕೈ ದಂಪತಿ ಹರಕೆ
ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾದ ಯಂಗ್ ರೆಬೆಲ್ಸ್ ಎರಡನೇ ಮ್ಯಾಚ್ನಲ್ಲಿ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡಿದ್ರು. ಅಭಿಷೇಕ್ ಶರ್ಮಾ ಸೆಂಚುರಿ, ರುತುರಾಜ್ ಗಾಯಕ್ವಾಡ್ ಹಾಗೇ ರಿಂಕು ಸಿಂಗ್ ಹೊಡಿ ಬಡಿ ಆಟದ ಮೂಲಕ ಸಾಲು ಸಾಲು ದಾಖಲೆ ಬರೆದಿದ್ರು. ಜಿಂಬಾಬ್ವೆ ವಿರುದ್ಧ ಐತಿಹಾಸಿಕ 100 ರನ್ಗಳ ಅಂತರದಿಂದ ವಿಕ್ಟರಿ ಸಾಧಿಸಿದ್ರು. ಸೋ ಮೂರನೇ ಮ್ಯಾಚ್ನಲ್ಲಿ ಮತ್ತೆ ಜಬರ್ದಸ್ತ್ ಫರ್ಫಾಮೆನ್ಸ್ ನೀಡೋ ಜೋಶ್ನಲ್ಲಿದ್ದಾರೆ. ಬಟ್ ಈಗ ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ನೀಡ್ಬೇಕು ಅನ್ನೋದೇ ಮ್ಯಾನೇಜ್ಮೆಂಟ್ಗೆ ಸವಾಲಾಗಿದೆ. 5 ಟಿ20 ಸರಣಿಯಲ್ಲಿ 1-1ರ ಮೂಲಕ ಭಾರತ ಸಮಬಲ ಸಾಧಿಸಿದೆ. ಮೂರನೇ ಟಿ20 ಪಂದ್ಯ ಬುಧವಾರ ಹರಾರೆಯಲ್ಲೇ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಅಂತಿಮ ತಂಡದ ಆಯ್ಕೆ ನಾಯಕ ಶುಭಮನ್ ಗಿಲ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಟಿ20 ವಿಶ್ವಕಪ್ 2024ರ ತಂಡದ ಭಾಗವಾಗಿರುವ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಭಾರತ ತಂಡ ಸೇರಿಕೊಂಡಿದ್ದಾರೆ. ವಿಶ್ವಕಪ್ ಗೆದ್ದರೂ ಭಾರತಕ್ಕೆ ಮರಳೋದು ಡಿಲೇ ಆಗಿದ್ರಿಂದ ಜಿಂಬಾಬ್ವೆ ಪ್ರವಾಸದ ಮೊದಲ ಎರಡು ಪಂದ್ಯಗಳಿಂದ ಈ ಮೂವರಿಗೆ ವಿಶ್ರಾಂತಿ ನೀಡಲಾಗಿತ್ತು. ಬಟ್ ಈಗ ಮೂರನೇ ಪಂದ್ಯದ ವೇಳೆಗೆ ತಂಡವನ್ನ ಸೇರಿಕೊಂಡಿದ್ದಾರೆ. ಹೀಗಾಗಿ ಯಾರಿಗೆ ಚಾನ್ಸ್ ಕೊಡ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.
ಪ್ಲೇಯಿಂಗ್ 11 ಸವಾಲ್!
ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಫಸ್ಟ್ ಮ್ಯಾಚ್ನಲ್ಲಿ ಡಕೌಟ್ ಆಗಿದ್ರೂ ಕೂಡ ಎರಡನೇ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದರು. ಹಾಗೇ ಋತುರಾಜ್ ಗಾಯಕ್ವಾಡ್ 77 ರನ್ ಸಿಡಿಸಿ ಮಿಂಚಿದ್ದರು. ಹೀಗಾಗಿ ಯಶಸ್ವಿ ಜೈಸ್ವಾಲ್ ಬೆಂಚ್ ಗೆ ಸೀಮಿತ ಆಗ್ತಾರೆ ಎನ್ನಲಾಗ್ತಿದೆ. ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಬದಲಿಗೆ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಧ್ರುವ್ ಜುರೆಲ್ ಚೊಚ್ಚಲ ಪಂದ್ಯದಲ್ಲೇ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಇದು ಸ್ಯಾಮ್ಸನ್ಗೆ ಪ್ಲೇಯಿಂಗ್ ಇಲೆವೆನ್ ಗೆ ಎಂಟ್ರಿ ಕೊಡಲು ಕಾರಣವಾಗುತ್ತದೆ ಎನ್ನಲಾಗಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಎಡಗೈ ವೇಗಿ ಖಲೀಲ್ ಅಹ್ಮದ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಎರಡನೇ ಪಂದ್ಯದಲ್ಲಿ ಸಾಯಿ ಸುದರ್ಶನ್ಗೆಅವಕಾಶ ಮಾಡಿಕೊಟ್ಟಿದ್ದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಮೂರನೇ ಪಂದ್ಯದಲ್ಲಿ ಕನಿಷ್ಠ 3 ಬದಲಾವಣೆ ಮಾಡುವ ಸಾಧ್ಯತೆ ಇದೆ. ಇನ್ನು ಸಾಯಿ ಸುದರ್ಶನ್ ಪದಾರ್ಪಣೆ ಮಾಡಿದರೂ, ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಮೂರನೇ ಪಂದ್ಯದಲ್ಲಿ ಇವ್ರು ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಾತ್ರಿಯಾಗಿದೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಬೆಂಚ್ ಕಾದಿದ್ದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಮತ್ತು ಓಪನರ್ ಯಶಸ್ವಿ ಜೈಸ್ವಾಲ್ ಇಬ್ಬರೂ ನೇರವಾಗಿ ಪ್ಲೇಯಿಂಗ್ 11ಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಸಲುವಾಗಿ 11ರ ಬಳಗದಿಂದ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಹೊರಬೀಳುವ ಸಾಧ್ಯತೆ ಇದೆ. ಸಾಯಿ ಸುದರ್ಶನ್ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ 11ರ ಬಳಗ ಸೇರಿಕೊಳ್ಳಲಿದ್ದಾರೆ ಎಂದೇ ನಿರೀಕ್ಷೆ ಮಾಡಲಾಗಿದೆ. ಇನ್ನು ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಅನುಮಾನವಾಗಿದೆ. ಆಲ್ರೌಂಡರ್ ಸ್ಥಾನದಲ್ಲಿ ಶಿವಂ ದುಬೇ ತಂಡದ ಮಧ್ಯಮ ಕ್ರಮಾಂಕದ ಸಾಮರ್ಥ್ಯ ಹೆಚ್ಚಿಸಲಿದ್ದಾರೆ. ಈ ಬದಲಾವಣೆಗಳನ್ನು ಹೊರತುಪಡಿಸಿ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಿಂಕು ಸಿಂಗ್ ಫಿನಿಶರ್ ಆಗಿ, ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್ ರೌಂಡರ್ ಆಗಿ ಮತ್ತು ರವಿ ಬಿಷ್ಣೋಯ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಡಲಿದ್ದಾರೆ.
5ಪಂದ್ಯಗಳ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಸೋತಿದ್ದ ಟೀಮ್ ಇಂಡಿಯಾ 2ನೇ ಅಂತರಾಷ್ಟ್ರೀಯ ಟಿ20 ಮ್ಯಾಚ್ನಲ್ಲಿ ಗೆಲ್ಲೋ ಮೂಲಕ ಸೇಡಿಗೆ ಸೇಡು ತೀರಿಸಿಕೊಂಡಿದೆ. 3ನೇ ಪಂದ್ಯದಲ್ಲೂ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಬೇಕು ಎಂದು ಟೀಮ್ ಇಂಡಿಯಾ ಸಜ್ಜಾಗಿದೆ. ಬಟ್ ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಆಡೋದೇ ಡೌಟಿದೆ. ಗಿಲ್ ಬದಲಿಗೆ ಟೀಮ್ ಇಂಡಿಯಾವನ್ನು ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡಕ್ಕೆ ಬರೋಬ್ಬರಿ 100 ರನ್ಗಳ ಜಯ ಸಿಕ್ಕಿತ್ತು. ಈ ಪಂದ್ಯದಲ್ಲೇ ಫೀಲ್ಡಿಂಗ್ ವೇಳೆ ಶುಭ್ಮನ್ ಗಿಲ್ ಅವರ ಫಿಂಗರ್ ಇಂಜುರಿ ಆಗಿದೆ. ಹಾಗಾಗಿ ಇವರು ಟೀಮ್ ಇಂಡಿಯಾ ಪರ ಆಡೋದು ಡೌಟ್ ಇದೆ. ಒಟ್ನಲ್ಲಿ ಟೀಂ ಇಂಡಿಯಾದಲ್ಲಿ ಯಂಗ್ಸ್ಟರ್ಸ್ ಒಳ್ಳೆ ಪ್ರದರ್ಶನ ನೀಡ್ತಿದ್ದು ಯಾರನ್ನ ಸೆಲೆಕ್ಟ್ ಮಾಡೋದು ಯಾರನ್ನ ಬೆಂಚ್ ಕಾಯಿಸೋದು ಅನ್ನೋದೇ ಮ್ಯಾನೇಜ್ಮೆಂಟ್ಗೆ ಸವಾಲಾಗಿ ಪರಿಣಮಿಸಿದೆ.