RO-KO ಫಾರ್ಮ್.. ಗಿಲ್ ಕ್ಯಾಪ್ಟನ್ಸಿ – ವಿಂಡೀಸ್ ವಾರ್ ನಲ್ಲಿ ವಿಶ್ವಕಪ್ ಭವಿಷ್ಯ
ತವರಿನ ಪ್ರತಿಷ್ಠೆ ಉಳಿಸಿಕೊಳ್ಳುತ್ತಾ ಭಾರತ?

RO-KO ಫಾರ್ಮ್.. ಗಿಲ್ ಕ್ಯಾಪ್ಟನ್ಸಿ – ವಿಂಡೀಸ್ ವಾರ್ ನಲ್ಲಿ ವಿಶ್ವಕಪ್ ಭವಿಷ್ಯತವರಿನ ಪ್ರತಿಷ್ಠೆ ಉಳಿಸಿಕೊಳ್ಳುತ್ತಾ ಭಾರತ?

ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಈ ಸಂಡೇ ಕೂಡ ಸ್ಪೆಷಲ್. ಯಾಕಂದ್ರೆ ಇವತ್ತು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಶುರುವಾಗಲಿದ್ದು ತಿರುವನಂತಪುರ ಅಖಾಡ ಸಿದ್ಧವಾಗಿದೆ. ಭಾರತದ ಲೆಜೆಂಡರಿ ಪ್ಲೇಯರ್​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಮೈದಾನಕ್ಕೆ ಮರಳಲಿದ್ದಾರೆ. ಜುಲೈ 19ರಂದು ಲಾರ್ಡ್ಸ್ ಮೈದಾನದಲ್ಲಿ ಕೊನೇ ಬಾರಿಗೆ ಆಡಿದ್ದ ರೋಕೋ ಇವತ್ತು ಕಣಕ್ಕಿಳಿಯಲಿದ್ದಾರೆ. ವಿಂಡೀಸ್ ವಿರುದ್ಧದ ಸಿರೀಸ್ ಭಾರತಕ್ಕೆ ತುಂಬಾನೇ ಮುಖ್ಯವಾಗಲಿದೆ.

ಇದನ್ನೂ ಓದಿ : ಭಾರತ ಸೋಲಿಸಲು PAK ಶಪಥ – ಬೆಸ್ಟ್ ಎನ್ನುತ್ತಲೇ ಎಚ್ಚರಿಕೆ ಕೊಟ್ರಾ?

ಭಾರತ-ವಿಂಡೀಸ್ ನಡುವಿನ ಏಕದಿನ ಸರಣಿ ಇಂದಿನಿಂದ ಶುರು ಆಗ್ತಾ ಇದ್ದು, ಶುಭ್​ಮನ್ ಗಿಲ್ ತಂಡದ ಕ್ಯಾಪ್ಟನ್ ಆಗಿದ್ರೆ ಕೆ.ಎಲ್. ರಾಹುಲ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ಜಪಾನ್​ನಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ T20I ತಂಡವನ್ನು ಲೀಡ್ ಮಾಡ್ತಾ ಇರೋದ್ರಿಂದ ವಿಂಡೀಸ್ ವಿರುದ್ಧ 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಹಿನ್ನೆಲೆಯಲ್ಲಿ ಭಾರತಕ್ಕೆ ಈ ಸರಣಿ ಮೋಸ್ಟ್ ಇಂಪಾರ್ಟೆಂಟ್ ಆಗಿದೆ.

ರೋಹಿತ್ & ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಕಣ್ಣು!

ಜುಲೈ 19ರಂದು ಭಾರತದ ಪರ ಕೊನೇಯದಾಗಿ ಕಣಕ್ಕಿಳಿದಿದ್ದ ರೋಹಿತ್ ಮತ್ತು ಕೊಹ್ಲಿ ಇವತ್ತಿನ ಪಂದ್ಯದ ಮೂಲಕ ಕಂ ಬ್ಯಾಕ್ ಮಾಡ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ 2-1 ಅಂತರದಿಂದ ಸರಣಿಯನ್ನು ಸೋತರೂ, ಲಾರ್ಡ್ಸ್‌ನಲ್ಲಿ ಅದ್ಭುತ 138 ರನ್ ಗಳಿಸುವ ಮೂಲಕ ರೋಹಿತ್ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ರು. 39 ವರ್ಷದ ಹಿಟ್​ಮ್ಯಾನ್ ಭಾರತದ ಪರ 288 ಏಕದಿನ ಪಂದ್ಯಗಳಲ್ಲಿ 48.95 ಸರಾಸರಿಯಲ್ಲಿ 34 ಶತಕಗಳು ಮತ್ತು 62 ಅರ್ಧಶತಕಗಳೊಂದಿಗೆ 11,895 ರನ್ ಗಳಿಸಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 5 ರನ್​ಗಳಿಗೆ ಔಟ್ ಆದ್ರೂ ಕೂಡ ಆ ನಂತ್ರ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ 65 ಮತ್ತು 74 ರನ್ ಗಳಿಸಿದ್ದರು. 37 ವರ್ಷದ ಕೊಹ್ಲಿ ಕಳೆದ ಆರು ಏಕದಿನ ಪಂದ್ಯಗಳಲ್ಲಿ 64ರ ಸರಾಸರಿ ಮತ್ತು 106.66 ಸ್ಟ್ರೈಕ್ ರೇಟ್‌ನಲ್ಲಿ 384 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕಗಳಿವೆ. ಇಬ್ಬರೂ ಕೂಡ ಗ್ರೇಟ್ ಫಾರ್ಮ್​ನಲ್ಲಿದ್ದು ವಿಂಡೀಸ್ ವಿರುದ್ಧವೂ ಉತ್ತಮ ಪ್ರದರ್ಶನದ ನಿರೀಕ್ಷೆ ಮಾಡ್ಬೋದು. ಅಷ್ಟೇ ಅಲ್ಲದೇ ಈ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದರಿಂದ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಂಡೀಸ್ ವಿರುದ್ಧದ ಸರಣಿಗಾಗಿಯೇ 2026 ರ ಏಷ್ಯನ್ ಗೇಮ್ಸ್ ತಂಡದಿಂದ ಅವ್ರನ್ನ ಹೊರಗಿಡಲಾಗಿತ್ತು. ಕಳೆದ ಜೂನ್‌ನಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದ ರೆಡ್ಡಿ ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಭಾರತ ತಂಡಕ್ಕೆ ಮರಳಿದ್ದಾರೆ.

ವಿಂಡೀಸ್ ಸರಣಿ ಏಕೆ ಮುಖ್ಯ?

2027ರ ಏಕದಿನ ವಿಶ್ವಕಪ್ ಹಿನ್ನೆಲೆ ಸರಣಿ ಗೆಲುವಿನಿಂದ ಭಾರತಕ್ಕೆ ಬೂಸ್ಟ್

ತವರಿನಲ್ಲೇ ಸರಣಿ ನಡೆಯುತ್ತಿರೋದ್ರಿಂದ ಗೆಲ್ಲುವುದು ಕೂಡ ಪ್ರತಿಷ್ಠೆ

ಪ್ಲೇಯಿಂಗ್ 11ನಲ್ಲಿ ಆಡುವ ಆಟಗಾರರ ಪ್ರದರ್ಶನದ ಬಗ್ಗೆ ಮಾನಿಟರ್

ವಿಶ್ವಕಪ್ ಗೆ ತಂಡವನ್ನ ಕಟ್ಟಲು ಮ್ಯಾನೇಜ್ ಮೆಂಟ್ ಗೆ ಒಂದಷ್ಟು ಕ್ಲಾರಿಟಿ

ರೋಹಿತ್ ಶರ್ಮಾ & ಕೊಹ್ಲಿ ಪ್ರದರ್ಶನದ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ

ಮೊದಲ ವಿಶ್ವಕಪ್ ಆಗಿರೋದ್ರಿಂದ ಗಿಲ್ ಕ್ಯಾಪ್ಟನ್ಸಿ ಬಗ್ಗೆಯೂ ಕಣ್ಣು

ನಮನ್ ಧೀರ್, ಔಕಿಬ್ ನಖಿ ತಂಡದಲ್ಲಿದ್ದು ಮುಂದುವರಿಸುವ ಬಗ್ಗೆ ಚಿಂತನೆ

ಸಿರಾಜ್, ಪ್ರಸಿದ್ಧ್, ಬ್ರಾರ್, ಕುಲ್ದೀಪ್ ಬೌಲಿಂಗ್ ನಲ್ಲಿದ್ದು ಕಾಂಬಿನೇಷನ್ ಪರೀಕ್ಷೆ

ಏಷ್ಯನ್ ಗೇಮ್ಸ್ ನಲ್ಲಿ 1 ತಂಡ ಇರೋದ್ರಿಂದ ಬ್ಯಾಕಪ್ ಪ್ಲೇಯರ್ಸ್ ಐಡಿಯಾ

ಹೀಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿ ಭಾರತಕ್ಕೆ ಬಿಗ್ ಅಡ್ವಾಂಟೇಜ್ ನೀಡಲಿದೆ. ಮೂರಕ್ಕೆ ಮೂರೂ ಪಂದ್ಯಗಳನ್ನ ಗೆಲ್ಲೋದ್ರಿಂದ ಮುಂದಿನ ಏಕದಿನ ಪಂದ್ಯಗಳಲ್ಲಿ ಆಟಗಾರರ ಆಯ್ಕೆ ಬಗ್ಗೆ ಒಂದು ಕ್ಲಿಯರ್ ಪಿಕ್ಚರ್ ಸಿಗಲಿದೆ. ನವೆಂಬರ್ ತಿಂಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಗೂ ಕೂಡ ದಿಕ್ಸೂಚಿಯಾಗಲಿದೆ.

Shantha Kumari

Leave a Reply

Your email address will not be published. Required fields are marked *